

ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಡೆಪ್ಯೂಟಿ ಚೀಫ್ ಮೆನೇಜರ್, ಕಾನೂನು ತಜ್ಞ, ಆರ್ಥಿಕ ತಜ್ಞ, ಸದರ್ನ್ ಇಕಾನಾಮಿಸ್ಟ್ ಅಂಕಣಗಾರ ವಿ. ಮೋಹನ ರಾವ್ ಕುಂದಾಪುರ ಇವರ ನೂತನ ಪುಸ್ತಕ ‘ದಿ ರೆಸಿಲಿಯಂಟ್ ಇಂಡಿಯನ್ ಇಕಾನಮಿ ಎಂಡ್ ಡಿಜಿಟಲ್ ರೆವಲ್ಯೂಷನ್’ ಸೆ. 24 ರಂದು ಗುರುವಾರ ಬಿಡುಗಡೆಯಾಗಲಿದೆ.
ಸದರ್ನ್ ಇಕಾನಾಮಿಸ್ಟ್ ಬೆಂಗಳೂರು ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಬಿಡುಗಡೆ ಸಮಾರಂಭ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ. ಶಾಂತಾರಾಮ ಪ್ರಭು ವಹಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲದ ಆಡಳಿತಾಧಿಕಾರಿ, ಡಾ. ಶ್ರೀಧರ ರಂಗನಾಥ ಪೈ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿನಂದನಾ ಭಾಷಣ ಮಾಡಲಿದ್ದು, ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಲೇಖಕರನ್ನು ಗೌರವಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ರಶ್ಮಿ ಎಸ್. ಆರ್., ‘ಕುಂದಪ್ರಭ’ ಸಂಪಾದಕ ಯು. ಎಸ್. ಶೆಣೈ, ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ಭಾಗವಹಿಸಲಿದ್ದಾರೆ.
ಈ ಸಮಾರಂಭಕ್ಕೆ ಸರ್ವರನ್ನೂ “ಸದರ್ನ್ ಇಕಾನಾಮಿಸ್ಟ್” ಸಂಪಾದಕಿ ಶ್ರೀಮತಿ ಸುಶೀಲಾ ಸುಬ್ರಹ್ಮಣ್ಯ ಆಹ್ವಾನಿಸಿದ್ದಾರೆ.

