

ಕುಂದಾಪುರ ಸೆಪ್ಟೆಂಬರ್ 16 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಮತ್ತು ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕ-ಬಾಲಕಿಯರ “ಕುಸ್ತಿ ಪಂದ್ಯಾಟ”-2026ಉದ್ಘಾಟನಾ ಸಮಾರಂಭ ನಡೆಯಿತು .
“ಕುಸ್ತಿ ಪಂದ್ಯಾಟ-2026″ದ ಅಂತಿಮ ಪಂದ್ಯದಲ್ಲಿ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜು ಜಯಗಳಿಸಿತು . ಬ್ರಹ್ಮಾವರದ ಎಸ್.ಎಮ್.ಎಸ್ ಪದವಿಪೂರ್ವ ಕಾಲೇಜು ರನ್ನರ್ ಆಫ್ ಸ್ಥಾನ ಪಡೆಯಿತು
ಮಂಜುನಾಥ ಶೆಟ್ಟಿ, ನಿವ್ರತ್ತ ದೈಹಿಕ ಶಿಕ್ಷಣ ನಿರ್ದೇಶಕರು ಬ್ರಹ್ಮಾವರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ಕುಸ್ತಿ ಆಟವು ಭಾರತದ ಸಾಂಸ್ಕೃತಿಕ ಕಲೆಯಾಗಿದೆ . ಇಂತಹ ಪಂದ್ಯಾಟಗಳ ಮೂಲಕ ಕುಸ್ತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕರ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುಕೇಶ್ ಶೆಟ್ಟಿ ಹೊಸಮಠ,ಅಧ್ಯಕ್ಷರು, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ , ರಾಮ ಶೆಟ್ಟಿ , ಕ್ರೀಡಾ ಸಂಯೋಜಕರು , ಪದವಿಪೂರ್ವ ವಿಭಾಗ ಕುಂದಾಪುರ ತಾಲೂಕು, ಉಮೇಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರು ಎಸ್.ವಿ.ಎಸ್ ಪದವಿಪೂರ್ವ ಕಾಲೇಜು ಗಂಗೊಳ್ಳಿ, ಉಪಸ್ಥಿತರಿದ್ದರು.
ಭಂಡಾರ್ಕರ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜಾ.ಎಮ್ ಸ್ವಾಗತಿಸಿದರು. ಉಪನ್ಯಾಸಕಿ ಗೀತಾ.ಪ್ರಭು ವಂದಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.


