

ಬುಧವಾರ (ಆ.12) ಮುಂಬೈಯಲ್ಲಿ ಸತತ ಭಾರಿ ಮಳೆಯಿಂದಾಗಿ ಮುಂಬೈನ ಕುರ್ಲಾ-ಫಾಟ್ಕೋಪರ್ ಗಡಿಯ ಚಿರಾಗ್ ನಗರದ ಗೌಸಿಯಾ ಚಾಲ್ನಲ್ಲಿ ಭೀಕರ ಗುಡ್ಡಕುಸಿತವಾಗಿ ಇಬ್ಬರು ಸಾವನ್ನಪ್ಪಿದ್ದಾರೆ, ಇನ್ನೂ ಐವರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮುಂಜಾನೆ 3:48ರ ಸುಮಾರಿಗೆ ಬೆಟ್ಟದ ಒ೦ದು ಭಾಗ ಕುಸಿದು 2-3 ಮನೆಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 4 ರಿಂದ 5 ಜನರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಈ ದುರಂತದಲ್ಲಿ ಗಾಯಗೊಂಡಿರುವ ಸೊಹೇಲ್ ಅನ್ಸಾರಿ (18) ಮತ್ತು ಮೊಹಮ್ಮದ್ ಅನ್ಸಾರಿ (14) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಮಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದಾರೆ.
ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದ೦ತೆ ಮುಂಬೈ ಅಗ್ನಿಶಾಮಕ ದಳ, ಪೊಲೀಸ್, ಬಿಎಂಸಿ ಮತ್ತು ಎನ್ಡಿಆರ್ಎಫ್ ಪಡೆಗಳು ಸ್ಮಳಕ್ಕೆ ದೌಡಾಯಿಸಿ ಅತ್ಯಾಧುನಿಕ ಉಪಕರಣಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ.


