

ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚಿನಲ್ಲಿ ಯಾಜಕರ ಪಾಲಕರಾದ ಜಾನ್ ಮಾರಿ ವಿಯಾನಿ ಹಬ್ಬದ ಪ್ರಯುಕ್ತ ಹಿಂದೆ ಸೇವೆ ಸಲ್ಲಿಸಿದ ಯಾಜಕರ ಸೇವೆ ನೆನಪಿಸಿ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಯಾಜಕರ ಸೇವೆ ಗುರುತಿಸಿಕೊಂಡು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಹಾಗೂ ದಿಯಾಕೊನ್ ಕೆನಾನ್ ಫೆರ್ನಾಂಡಿಸ್ ಇವರಿಗೆ ಅಭಿನಂದಿಸಿ ಗೌರವಿಸಲಾಯಿತು ಪಾಲನ ಮಂಡಳಿಯ ಉಪಾಧ್ಯಕ್ಷ ರೂಪಸ್ ಬರೆಟ್ಟೊ ಕಾರ್ಯದರ್ಶಿ ಪಿಯುಸ್ ಡಿಸೋಜಾ, ಆಯೋಗಗಳ ಸಂಚಾಲಕ ಲಾರೆನ್ಸ್ ಬರೆಟ್ಟೊ, ಕಾನ್ವೆಂಟ್ ನ ಮುಖ್ಯಸ್ಥೆ ಸಿಸ್ಟರ್ ರೀನಾ ಉಸಸ್ಥಿತರಿದ್ದರು.





