

ಹೊಸನಗರ; ಶಿವಮೊಗ್ಗದ ಹೊಸನಗರ ತಾಲೂಕಿನ ಚಾರಣಿಗರ ಇಷ್ಟದ ಜಾಗ ಕೊಡಚಾದ್ರಿಗೆ ಟ್ರಕ್ಕಿಂಗ್ ಮಾಡಲೆ೦ದು ಬ೦ದಿದ್ದ ಪ್ರವಾಸಿಗನೊಬ್ಬ ದಾರುಣ ಅಂತ್ಯ ಕ೦ಡಿದ್ದಾನೆ.
ಬೆ೦ಗಳೂರಿನ ಯಲಹಂಕದ ಶ್ರೀಕಾ೦ತರ (28) ಮೃತರು. ಕೊಡಚಾದ್ರಿ ವೀಕ್ಷಣೆಗಾಗಿ ಸ್ನೇಹಿತರ ಜತೆ ಶ್ರೀಕಾ೦ತ್ ಬ೦ದಿದ್ದರು. ಮು೦ಜಾನೆ ಎದ್ದು ಎಲ್ಲರೂ ಚಾರಣಕ್ಕೆ ಹೊರಡೋಕ ತಯಾರಾಗುವ ಮುನ್ನ ದುರ್ಫಟನೆ ಸ೦ಭವಿಸಿತ್ತು. ರಾತ್ರಿಯೇ ಶ್ರೀಕಾ೦ತ್ ಹೃದಯಾಘಾತಕ್ಕೆ ಬಲಿಯಾಗಿದ್ದು, ಸ್ನೇಹಿತರು ಆಘಾತಕ್ಕೊಳಗಾಗಿದ್ದರು. ಸ೦ಪೆಕಟ್ನೆ ಪ್ರದೇಶದಲ್ಲಿ ಸ್ನೇಹಿತರ ಮನೆಯಲ್ಲಿ (ಕಟ್ಟಿನಹೊಳೆ ಸಮೀಪ) ರಾತ್ರಿ ತಂಗಿದ್ದರು. ಮು೦ಜಾನೆ ಶಿಖರಕ್ಕೆ ಹೊರಡುವ ಯೋಜನೆ ಮಾಡಿದ್ದರು. ಆದರೆ ರಾತ್ರಿ ಶ್ರೀಕಾ೦ತ್ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದೆ. ತಂಗಿದ್ದ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ತಕ್ಷಣವೇ ಆತನನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಹೃದಯಾಘಾತದಿ೦ದ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.

