

ಮಂಗಳೂರು; ನಾವು ಪ್ರಕೃತಿಗೆ ಮರಳಿ ಕೊಡುವ ತಲೆಮಾರಾಗಬೇಕು. ಭೂಮಿಗೆ ಸೂಪರ್ ಹೀರೋಗಳು ಬೇಕಾಗಿಲ್ಲ; ಜವಾಬ್ದಾರಿಯುತ ಹಸಿರು ಯೋಧರು ಬೇಕಾಗಿದ್ದಾರೆ” ಎಂದು ಪರಿಸರವಾದಿ ಶ್ರೀ ಜೀತ್ ಮಿಲನ್ ರೋಚೆ ಅವರು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2026ರ ಜುಲೈ 6ರಂದು ನಡೆದ ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮರಗಳನ್ನು ನೆಡುವುದು, ನೀರನ್ನು ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯ ವಿಂಗಡಣೆ ಮಾಡುವುದು ಮತ್ತು ಕುಟುಂಬದ ಸದಸ್ಯರನ್ನು ಭೂಮಿತಾಯಿಯ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸುವಂತಹ ಸರಳವಾದರೂ ಅರ್ಥಪೂರ್ಣ ಕ್ರಮಗಳ ಮೂಲಕ ಪ್ರಕೃತಿಯನ್ನು ರಕ್ಷಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ವಂ. ಫಾ.ರೋಹನ್ ಡಿ’ಅಲ್ಮೇಡಾ ಎಸ್.ಜೆ. ಅವರು, ಈ ಸಮಾರೋಪವು ಆಂದೋಲನದ ಅಂತ್ಯವಲ್ಲ, ಬದಲಿಗೆ ಪರಿಸರದ ಉಸ್ತುವಾರಿಗೆ ಜೀವನಪರ್ಯಂತ ಬದ್ಧತೆಯ ಆರಂಭವಾಗಿದೆ ಎಂದರು. ಪೃಥ್ವಿ ನಮ್ಮ ಅನನ್ಯ ಆವಾಸ ತಾಣ. ನಾವೆಲ್ಲ ಅದರ ಕಾಳಜಿ ವಹಿಸಬೇಕು” ಎಂಬ ಜೆಸ್ಯುಟ್ ಮೌಲ್ಯವನ್ನು ಒತ್ತಿ ಹೇಳಿದರು. ಮತ್ತು ಪ್ರತಿ ವಿದ್ಯಾರ್ಥಿಯು ಸಿಬಿಎಸ್ಇ ಯ “ಏಕ್ ಪೇಡ್ ಮಾ ಕೆ ನಾಮ್” ಉಪಕ್ರಮದಲ್ಲಿ ಭಾಗವಹಿಸುವ ಮೂಲಕ ಹಸಿರು ಯೋಧರಾಗುವಂತೆ ಕರೆ ನೀಡಿದರು. “ರಕ್ಷಿಸಿ, ಸಂರಕ್ಷಿಸಿ ಮತ್ತು ಅಭಿವೃದ್ಧಿ ಹೊಂದಿ” ಎಂಬ ಧ್ಯೇಯವಾಕ್ಯದೊಂದಿಗೆ 2026ರ ಜೂನ್ 29 ರಿಂದ ಜುಲೈ 4 ರವರೆಗೆ ನಡೆದ ಈ ವಾರಪೂರ್ತಿ ಪರಿಸರ ಉಪಕ್ರಮದಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸಲು ವಿನ್ಯಾಸಗೊಳಿಸಿದ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು. ಶ್ರೀ ಚೇತನ್ ಶೆಟ್ಟಿ ಅವರಿಂದ ಹಣ್ಣಿನ ಕೃಷಿ, ಶ್ರೀಮತಿ ಪೂರ್ಣಿಮಾ ಶೆಟ್ಟಿ ಅವರಿಂದ ತೋಟಗಾರಿಕೆ ಮತ್ತು ಕೃಷಿ, ಶ್ರೀ ಗ್ಲಾವಿನ್ ರೋಡ್ರಿಗಸ್ ಅವರಿಂದ ಲಂಬ ತೋಟಗಾರಿಕೆ ಮತ್ತು ಸುಸ್ಥಿರ ಅಭ್ಯಾಸಗಳು, ಹಾಗೂ ಶ್ರೀ ನವೀನ್ ಆಡ್ಕರ್ ಅವರಿಂದ ಸೃಜನಾತ್ಮಕ ಎಲೆ ಕಲೆಯ ಕುರಿತ ತಜ್ಞರ ಉಪನ್ಯಾಸಗಳು ವಿದ್ಯಾರ್ಥಿಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಪರಿಸರಕ್ಕೆ ಜವಾಬ್ದಾರಿಯುತ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದವು. ಉಪಪ್ರಾಂಶುಪಾಲೆ ಶ್ರೀಮತಿ ಅಪರ್ಣಾ ಸುರೇಶ್, ಶೈಕ್ಷಣಿಕ ಸಂಯೋಜಕಿಯರಾದ ಶ್ರೀಮತಿ ದೀಪ್ತಿ ಕರ್ಕಡ ಮತ್ತು ಶ್ರೀಮತಿ ದೀಪಾ ಕರ್ಕಡ, ವಿಜ್ಞಾನ ಸಂಯೋಜಕಿ ಶ್ರೀಮತಿ ಶಿಲ್ಪಾ ಬಲ್ಲಾಳ್, ಶಿಕ್ಷಕ ಪ್ರತಿನಿಧಿ ಶ್ರೀಮತಿ ಸುಷ್ಮಿತಾ ಕೆ.ಎಸ್. ವಿದ್ಯಾರ್ಥಿ ನಾಯಕರಾದ ಆದಿದೇವ್ ಮತ್ತು ಕು. ರಿಯಾ ಜೆಸ್ಸಿಕಾ ರೆಗೊ ಅವರ ನೇತೃತ್ವದಲ್ಲಿ ನಡೆಯಿತು.
8ಬಿ ತರಗತಿಯ ಮಾ. ಆಶಿಶ್ ಎನ್. ಜೋಶಿ ಅವರು ಸ್ವಾಗತಿಸಿದರು. ಪ್ರಾಯೋಗಿಕ ಪರಿಸರ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸೃಜನಶೀಲತೆ, ನಾವೀನ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಅವರ ಬದ್ಧತೆಗಾಗಿ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. 9ಬಿ ತರಗತಿಯ ಕು. ರೆಬೆಕ್ಕಾ ನೆಸ್ಸಾ ಡಿ’ಸೋಜಾ ಅವರು ವಂದನಾರ್ಪಣೆ ಮಾಡಿದರು ಮತ್ತು 9ಸಿ ತರಗತಿಯ ಕು. ಝಾರಾ ಖಾಝಿ ಅವರು ನಿರೂಪಿಸಿದರು. ಇದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಪರಿಸರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
“Be the Generation That Gives Back to Nature”: ‘Prakruthi’ Go Green Week Culminates at St Aloysius Gonzaga School

“The Earth does not need superheroes; it needs responsible Green Warriors,” remarked environmentalist Mr. Jeeth Milan Roche, Chief Guest at the culmination of ‘Prakruthi’ – Go Green Week, held on 6 July 2026 at St Aloysius Gonzaga School, Mangaluru. Addressing the gathering, he urged students to protect nature through simple yet meaningful actions such as planting trees, conserving water, reducing plastic use, practising waste segregation and inspiring their families to care for Mother Earth. Echoing this vision, Principal Fr. Rohan D’Almeida SJ emphasized that the culmination was not the end of the campaign but the beginning of a lifelong commitment to environmental stewardship. He highlighted the Jesuit value of Caring for Our Common Home and encouraged every student to become a Green Warrior by participating in the CBSE initiative “Ek Ped Maa Ke Naam.”
The week-long environmental initiative, conducted from 29 June to 4 July 2026 under the theme “Protect, Preserve and Prosper,” engaged students in a variety of enriching activities designed to promote ecological awareness and sustainable living. Expert sessions on fruit farming by Mr Chethan Shetty, horticulture and agriculture by Ms Poornima Shetty, vertical gardening and sustainable practices by Mr Glavin Rodrigues and creative leaf art by Mr Naveen Adkar inspired students to adopt environmentally responsible habits in their daily lives.
The celebration began with a prayer song followed by the symbolic Navadaniya Ceremony, representing biodiversity, abundance, unity and sustainable living. The ceremony was led by Chief Guest Mr. Jeeth Milan Roche, Secretary of Vana Charitable Trust, Mangaluru, Principal Fr. Rohan D’Almeida SJ, Vice Principal Ms. Aparna Suresh, Academic Coordinators Ms. Deepthi Karkada and Ms. Deepa Karkada, Science Coordinator Ms. Shilpa Ballal, Teacher Representative Ms. Sushmitha K.S., Head Boy Master Aadidev and Head Girl Ms. Rhea Jessica Rego.
The audience was welcomed by Master Ashish N. Joshi of Class 8B. A thought-provoking dance drama highlighting the need to protect nature and a video presentation showcasing the week’s activities reflected the enthusiastic participation of students in awareness campaigns, plantation drives and hands-on environmental learning experiences.
The programme also featured the prize distribution ceremony, honouring winners of various competitions for their creativity, innovation and commitment to environmental conservation. The event concluded with a vote of thanks by Ms. Rebecca Nessa D’Souza of Class 9B, while Ms. Zaara Khazi of Class 9C compered the programme.
The Prakruthi – Go Green Week culminated with a renewed pledge by the entire school community to protect, preserve and prosper alongside nature, reaffirming St Aloysius Gonzaga School’s commitment to building environmentally conscious and socially responsible citizens. The initiative was coordinated by the Science Department under the guidance of Coordinators Ms. Deepa Karkada and Ms. Shilpa Ballal.




