

ಕುಂದಾಪುರ ;ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 23 ಜೂನ್ 2026ರಂದು ಆಚರಿಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಶಿಕ್ಷಕರಾದ ಶ್ರೀ ಮಂಜುನಾಥ ಎಸ್ ಬಿಜೂರು ಇವರು ಆಗಮಿಸಿ ಯೋಗದಿಂದಾಗುವ ಉಪಯೋಗಗಳ ಬಗ್ಗೆ ಹಾಗೂ ಯೋಗವು ಮನುಷ್ಯನ ಆಂತರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಇದೆಷ್ಟು ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದರ ಜೊತೆಗೆ ಯೋಗಾಭ್ಯಾಸವನ್ನು ಮಾಡುವಾಗ ಪಾಲಿಸಬೇಕಾದ ಕ್ರಮಗಳ ಕುರಿತು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆಯವರು ಉಪಸ್ಥಿತರಿದ್ದು ಯೋಗಾಸನವೂ ಒಬ್ಬ ವ್ಯಕ್ತಿಯನ್ನು ಸದೃಢ ವಾಗಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರಾ ಪೂಜಾರಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಎಂಬಿಎ ವಿದ್ಯಾರ್ಥಿನಿ ಕು. ಶಾಂಭವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

