World Yoga Day celebrated at UBMC English Medium School, Kundapur


ಕುಂದಾಪುರ ; ದಿನಾಂಕ 21.06.2026 ರಂದು ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಶಿಕ್ಷಕಿ ವೀಣಾ ಮತ್ತು ಸಹ ಶಿಕ್ಷಕಿ ಲತಾ ಮಕ್ಕಳಿಗೆಲ್ಲ ಯೋಗಾಸನದ ಹಲವಾರು ಆಸನಗಳನ್ನು ಕಲಿಸಿಕೊಟ್ಟರು. ವಿದ್ಯಾರ್ಥಿಗಳೆಲ್ಲರೂ ಅತ್ಯಂತ ಉತ್ಸುಕರಾಗಿ ವಿವಿಧ ಭಂಗಿಗಳ ಆಸನಗಳನ್ನು ಮಾಡುತ್ತಾ ಹರ್ಷಿಸಿದರು.
ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜರವರು ಸದೃಢ ದೇಹ ಮತ್ತು ಸದೃಢ ಮನಸ್ಸಿಗೆ ಯೋಗಾಭ್ಯಾಸ ಮಾಡುವುದನ್ನು ರೂಡಿಸಿಕೊಳ್ಳಬೇಕು, ಉತ್ತಮ ಆರೋಗ್ಯಕ್ಕಾಗಿ ಯೋಗಭ್ಯಾಸ ಅಗತ್ಯ ಎನ್ನುವುದನ್ನು ವಿದ್ಯಾರ್ಥಿಗಳು ತಮ್ಮ ಪೋಷಕರಿಗೂ ಮನವರಿಕೆ ಮಾಡಿಸತಕ್ಕದ್ದು ಎಂದು ತಿಳಿಸಿದರು. ಸಿಎಸ್ಐ ನರ್ಸರಿ ಶಾಲಾ ಮುಖ್ಯ ಶಿಕ್ಷಕಿ ಸವಿತಾ ಯೋಗಭ್ಯಾಸದಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಮೃದ್ಧವಾಗುತ್ತದೆ ಎಂದು ತಿಳಿಸಿಕೊಟ್ಟರು, ಶಾಲಾ ಶಿಕ್ಷರು ಉಪಸ್ಥಿತರಿದ್ದರು.
World Yoga Day celebrated at UBMC English Medium School, Kundapur

Kundapur. 21.06.2026 World Yoga Day was celebrated meaningfully at UBMC English Medium School Kundapur, Yoga teacher Veena and co-teacher Mrs. Latha taught the children several yoga asanas. All the students were very excited and happy doing various postures. School Principal Mrs. Anita Alice D’Souza told them that practicing yoga should be practiced for a strong body and a strong mind, and that the students should also convince their parents that practicing yoga is necessary for good health. CSI Nursery School Headmistress Mrs. Savita told them that practicing yoga enriches the all-round development of children.
















