

ಕುಂದಾಪುರ: ವಜ್ರ ಮಹೋತ್ಸವವದ ಸಂಭ್ರಮದಲ್ಲಿರುವ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡುವುದರ ಮೂಲಕ 12ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.ಸಾಮಾನ್ಯ ಯೋಗಕ್ಕೆ ಅನುಗುಣವಾಗಿ ನಾನಾ ವ್ಯಾಯಾಮ,ಆಸನ,ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸ ಮಾಡಲಾಯಿತು. ಶಿಕ್ಷಕಿಯರಾದ ಸಿಸ್ಟರ್ ಚೇತನಾ,ಪ್ರೀತಿ ಪಾಯಸ್,ಸ್ಮಿತಾ ಡಿ ಸೋಜಾ,ಸುಶೀಲಾ ಖಾರ್ವಿ,ಡೀನಾ ಪಾಯಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶೈನಾ ಸ್ವಾಗತಿಸಿ,ಜೀವಿತಾ ವಂದಿಸಿದರು.ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.













