


ಮಂಗಳೂರು, ಜೂನ್ 4: ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂದೇಶ ಫೌಂಡೇಶನ್ನಲ್ಲಿ ಮಹತ್ವದ ನಾಯಕತ್ವ ಬದಲಾವಣೆ ನಡೆದಿದ್ದು, ನಿರ್ದೇಶಕರಾಗಿದ್ದ ವಂದನೀಯ ಫಾ. ಸುದೀಪ್ ಪಾಲ್, MSFS ಅವರು ತಮ್ಮ ಜವಾಬ್ದಾರಿಗಳನ್ನು ವಂದನೀಯ . ಫಾ. ರೋಷನ್ ರೊಸಾರಿಯೊ, OFM ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಈ ವಿದಾಯ ಹಾಗೂ ಸ್ವಾಗತ ಸಮಾರಂಭವು ಜೂನ್ 4ರಂದು ಸಂದೇಶ ಕಲಾ ಕೇಂದ್ರ ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಚರ್ಚ್ ಮುಖಂಡರು, ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಹಿತೈಷಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮವು ಫಾ. ವಾಲ್ಟರ್ ಅಲ್ಬುಕರ್ಕ್ ಸ್ಮಾರಕ ಗಾಯನ ಬಳಗದ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಬಳಿಕ ಶ್ರೀಮತಿ ರೆಮೋನಾ ಪಿರೇರಾ ಅವರಿಂದ ಸ್ವಾಗತ ನೃತ್ಯ ಪ್ರದರ್ಶನ ನಡೆಯಿತು. ಗಣ್ಯರನ್ನು ವೇದಿಕೆಗೆ ಕರೆತಂದು ಗೌರವಿಸಲಾಯಿತು. . ಸಂದೇಶ ಫೌಂಡೇಶನ್ನ ಟ್ರಸ್ಟಿ ಶ್ರೀ ರಾಯ್ ಕ್ಯಾಸ್ಟೆಲಿನೊ ಅವರು ಸ್ವಾಗತ ಭಾಷಣ ಮಾಡಿದರು. ಬಳಿಕ ದೀಪ ಪ್ರಜ್ವಲನೆ ನೆರವೇರಿಸಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಆತಿ ವಂದನೀಯ . ಡಾ. ಹೆನ್ರಿ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕೆಆರ್ಸಿಬಿಸಿ ಸಾಮಾಜಿಕ ಸಂವಹನ ಆಯೋಗದ ಉಪಾಧ್ಯಕ್ಷರಾದ ಆತಿ ವಂದನೀಯ ಡಾ. ಪೀಟರ್ ಪಾಲ್ ಸಲ್ದಾನ್ಹಾ, ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಹಾಗೂ ಟ್ರಸ್ಟಿ ಆತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ,ಕಾಪುಚಿನ್ ಪ್ರಾಂತಾಧ್ಯಕ್ಷ ವಂದನೀಯ . ಫಾ. ರಾಬಿನ್ ವಿಕ್ಟರ್ ಡಿಸೋಜಾ, ಸಂದೇಶ ಟ್ರಸ್ಟಿ ಶ್ರೀ ರಾಯ್ ಕ್ಯಾಸ್ಟೆಲಿನೊ ಕಾರ್ಯಕ್ರಮ ಸಂಯೋಜಕ ಶ್ರೀ ಸ್ಟ್ಯಾನಿ ಲೋಬೋ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸ್ಟ್ಯಾನಿ ಅಲ್ವಾರಿಸ್, ನಿರ್ಗಮಿತ ನಿರ್ದೇಶಕ ರೆವ. ಫಾ. ಸುದೀಪ್ ಪಾಲ್ ಹಾಗೂ ನೂತನ ನಿರ್ದೇಶಕ ರೆವ. ಫಾ. ರೋಷನ್ ರೊಸಾರಿಯೊ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ . ಡಾ. ಹೆನ್ರಿ ಡಿಸೋಜಾ ಅವರು ಈ ಸಂದರ್ಭ ಭಾವನಾತ್ಮಕ ಹಾಗೂ ಮಹತ್ವದ್ದಾಗಿದೆ ಎಂದು ಹೇಳಿದರು. ಫಾ. ಸುದೀಪ್ ಪಾಲ್ ಅವರ ಸಂವಹನ ಕೌಶಲ್ಯ, ಪ್ರೇರಣಾದಾಯಕ ವ್ಯಕ್ತಿತ್ವ, ಶಾಂತ ಸ್ವಭಾವ ಹಾಗೂ ಸೇವಾ ಮನೋಭಾವವನ್ನು ಪ್ರಶಂಸಿಸಿದರು. ಅವರ ನಾಲ್ಕು ವರ್ಷಗಳ ಸೇವೆಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು. ಜೊತೆಗೆ ನೂತನ ನಿರ್ದೇಶಕರಾದ ಫಾ. ರೋಷನ್ ರೊಸಾರಿಯೊ ಅವರಿಗೆ ಶುಭಾಶಯಗಳನ್ನು ಕೋರಿದರು.
ನಿರ್ಗಮಿತ ನಿರ್ದೇಶಕ ಫಾ. ಸುದೀಪ್ ಪಾಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಕಾಂಸೆಪ್ಟಾ ಫೆರ್ನಾಂಡಿಸ್ (ಆಳ್ವ) ಅವರು ಅವರ ಸೇವೆ ಹಾಗೂ ಸಾಧನೆಗಳನ್ನು ವಿವರಿಸುವ ಅಭಿನಂದನಾ ಪತ್ರವನ್ನು ವಾಚಿಸಿದರು. ನಂತರ ಮದರ್ ತೆರೆಸಾ ವಿಚಾರ ವೇದಿಕೆ, ಕೊಂಕಣಿ ಸಾಹಿತ್ಯ ಅಕಾಡೆಮಿ, ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕೊಂಕಣಿ ವಿದ್ಯಾರ್ಥಿಗಳು, ಫಾ. ವಾಲ್ಟರ್ ಅಲ್ಬುಕರ್ಕ್ ಸ್ಮಾರಕ ಗಾಯನ ಬಳಗ ಸೇರಿದಂತೆ ಹಲವು ಸಂಘಟನೆಗಳು ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದವು.
ತಮ್ಮ ಪ್ರತಿಕ್ರಿಯೆಯಲ್ಲಿ ಫಾ. ಸುದೀಪ್ ಪಾಲ್ ಅವರು ಕಳೆದ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ದೇವರ ಮಾರ್ಗದರ್ಶನ ಮತ್ತು ಶಕ್ತಿಗೆ ಕೃತಜ್ಞತೆ ಸಲ್ಲಿಸಿದರು. ಹಿತೈಷಿಗಳು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಹಯೋಗಿಗಳ ಬೆಂಬಲದಿಂದ ಫೌಂಡೇಶನ್ನ ಗುರಿಗಳನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು. ಕಟ್ಟಡ ನವೀಕರಣ, ವಿದ್ಯಾರ್ಥಿಗಳ ಪ್ರೋತ್ಸಾಹ ಹಾಗೂ ಸಂಸ್ಕೃತಿ ಮತ್ತು ಶಿಕ್ಷಣದ ಅಭಿವೃದ್ಧಿಗೆ ಕೈಗೊಂಡ ವಿವಿಧ ಯೋಜನೆಗಳನ್ನು ಸ್ಮರಿಸಿದರು. ಏಕತೆ ಮತ್ತು ಸಮೂಹ ಪ್ರಯತ್ನದ ಫಲವಾಗಿ ಸಂದೇಶ ಫೌಂಡೇಶನ್ ಇಂದು ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು.
ನೂತನ ನಿರ್ದೇಶಕ ಫಾ. ರೋಷನ್ ರೊಸಾರಿಯೊ ಅವರನ್ನು ಸ್ವಾಗತಿಸಿ ಅಭಿನಂದಿಸಲಾಯಿತು. ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಫಾ. ರೋಷನ್ ಅವರನ್ನು ಪರಿಚಯಿಸಿ, ಅವರ ಧರ್ಮ ಗುರು ಸೇವೆಯ ಹಲವು ಸಾಧನೆಗಳನ್ನು ಉಲ್ಲೇಖಿಸಿದರು. ಸಂದೇಶ ಫೌಂಡೇಶನ್ ಶ್ರೀಮಂತ ಪರಂಪರೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಅವರ ನಾಯಕತ್ವದಲ್ಲಿ ಮತ್ತಷ್ಟು ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಫಾ. ರೋಷನ್ ರೊಸಾರಿಯೊ ಅವರು, ತಮಗೆ ವಹಿಸಲಾದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಹೇಳಿದರು. ಸಂದೇಶ ಫೌಂಡೇಶನ್ನ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಫಾ. ಸುದೀಪ್ ಪಾಲ್ ಅವರ ಸೇವೆಯನ್ನು ಶ್ಲಾಘಿಸಿ, ಅವರು ಆರಂಭಿಸಿದ ಉತ್ತಮ ಕಾರ್ಯಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂದೇಶ ಫೌಂಡೇಶನ್ಗೆ ಸಲ್ಲಿಸಿದ ಸಮರ್ಪಿತ ಸೇವೆಗಾಗಿ ಶ್ರೀಮತಿ ರಿಯಾನಾ ಬಂಗೇರ ಸೋನ್ಸ್ ಅವರನ್ನು ಸಹ ಸನ್ಮಾನಿಸಲಾಯಿತು.
ಪ್ರಾಂತಾಧ್ಯಕ್ಷರಾದ ಫಾ. ರಾಬಿನ್ ವಿಕ್ಟರ್ ಡಿಸೋಜಾ ಅವರು, ಯಾವುದೇ ಸಂಸ್ಥೆ ಸಮರ್ಪಣೆ ಮತ್ತು ಬದ್ಧತೆಯಿಂದ ಬೆಳೆಯುತ್ತದೆ ಎಂದು ಹೇಳಿದರು. ಫಾ. ಸುದೀಪ್ ಪಾಲ್ ಅವರ ಸೇವೆಯನ್ನು ಶ್ಲಾಘಿಸಿ, ಫಾ. ರೋಷನ್ ರೊಸಾರಿಯೊ ಅವರನ್ನು ಸ್ವಾಗತಿಸಿದರು. ಸಂತ ಆಂಥೋನೀಸ್ ಪಿಯು ಕಾಲೇಜಿನಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಮೆಚ್ಚಿ, ಅವರ ನಾಯಕತ್ವದಲ್ಲಿ ಸಂದೇಶ ಫೌಂಡೇಶನ್ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸ್ಟ್ಯಾನಿ ಅಲ್ವಾರಿಸ್ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು ಹಾಗೂ ನೂತನ ನಿರ್ದೇಶಕರಿಗೆ ಶುಭ ಹಾರೈಸಿದರು. ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿ ದರು
ಸಂದೇಶ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಂತರ ಸೌಹಾರ್ದ ಭೋಜನ ನಡೆಯಿತು. ಇದರೊಂದಿಗೆ ಸಂದೇಶ ಫೌಂಡೇಶನ್ನ ಪಯಣದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ದೊರೆಯಿತು
Sandesha Foundation Witnesses Leadership Transition at Farewell and Welcome Ceremony

Sandesha Foundation for Culture and Education, Mangaluru, witnessed a significant leadership transition as Rev. Fr. Sudeep Paul, MSFS, formally handed over the responsibilities of Director to Rev. Fr. Roshan Rosario, OFM, during a farewell and welcome ceremony held on Thursday, June 4. The programme was attended by Church leaders, dignitaries, representatives of various organisations, well-wishers, students and staff members.
The programme commenced with a prayer hymn by the Fr. Walter Albuquerque Memorial Choir, followed by a welcome dance presented by Ms. Remona Pereira. The dignitaries were then escorted to the dais. The event was compered by Mr. Sunil Bajal, while Mr. Roy Castelino, Trustee of Sandesha Foundation, delivered the welcome address. The gathering also witnessed the ceremonial lighting of the lamp before the formal handover of charge.
Among those present on the dais were Most Rev. Dr. Henry D’Souza, Bishop of Bellary and Chairman of Sandesha Foundation; Most Rev. Dr. Peter Paul Saldanha, Bishop of Mangalore and Vice Chairman of the Commission for Social Communications, KRCBC; Most Rev. Dr. Gerald Isaac Lobo, Bishop Emeritus of Udupi and Trustee of Sandesha Foundation; Rev. Fr. Robin Victor D’Souza, Provincial Superior; Mr. Stany Lobo, Convenor of the programme; Mr. Stany Alvares, President of Konkani Sahitya Academy; Rev. Fr. Sudeep Paul, MSFS, outgoing Director; and Rev. Fr. Roshan Rosario, OFM, incoming Director.
Addressing the gathering, Most Rev. Dr. Henry D’Souza described the occasion as both emotional and significant, noting that saying goodbye is always difficult. He praised Fr. Sudeep Paul for his outstanding service as Director, highlighting his strengths in communication, motivation, encouragement, and his calm and observant nature. Bishop Henry acknowledged Fr. Sudeep’s achievements and contributions during his tenure, thanked him for his dedicated service, and wished him success in his future mission. He also extended his best wishes to the incoming Director, Fr. Roshan Rosario.
The outgoing Director, Rev. Fr. Sudeep Paul, was honoured during the programme. Ms. Concepta Fernandes (Alva) read out the citation highlighting his contributions and achievements during his tenure. Following the honouring ceremony, several organisations and associations, including Mother Teresa Vichara Vedike, Konkani Sahitya Academy, Konkani students of St. Aloysius Deemed to be University, the Fr. Walter Albuquerque Memorial Choir and many others, offered floral greetings and felicitations.
In his response, Fr. Sudeep Paul thanked God Almighty for guiding and strengthening him throughout his four-year tenure. Reflecting on his journey, he said that the support of well-wishers, students, employees and collaborators had been instrumental in achieving the Foundation’s goals. He recalled various initiatives ranging from renovations to encouraging students and promoting culture and education. Looking back on the achievements and relationships built over the years, he remarked that Sandesha Foundation stands as a testament to what unity and collective effort can accomplish. He expressed gratitude to Most Rev. Dr. Henry D’Souza, Most Rev. Dr. Peter Paul Saldanha and Most Rev. Dr. Gerald Isaac Lobo for their mentorship and guidance. He also thanked everyone who had contributed to the Foundation’s growth and congratulated Fr. Roshan Rosario on his appointment as Director.
The incoming Director, Rev. Fr. Roshan Rosario, was welcomed through a felicitation ceremony. Most Rev. Dr. Peter Paul Saldanha introduced Fr. Roshan to the gathering and highlighted several achievements from his priestly ministry. Referring to Sandesha Foundation as an institution with a rich legacy, Bishop Peter Paul expressed confidence that it would continue to grow under the new leadership and wished Fr. Roshan success in his new responsibility.
Addressing the gathering, Fr. Roshan Rosario said that he was ready to take on the responsibility entrusted to him and called upon everyone to work together for the betterment of Sandesha Foundation. He thanked Fr. Sudeep Paul for his dedicated service and assured the gathering that he would continue the good work undertaken by his predecessor.
The programme also included the felicitation of Ms. Riyana Bangera Soans in recognition of her dedicated service to Sandesha Foundation.
Rev. Fr. Robin Victor D’Souza, Provincial Superior, stated that every institution grows through dedication and commitment. He thanked Fr. Sudeep Paul for his valuable service and welcomed Fr. Roshan Rosario as the new Director. Appreciating Fr. Roshan’s service at St. Anthony’s PU College, he expressed confidence that Sandesha Foundation would continue to flourish under his leadership.
The vote of thanks was delivered by Mr. Stany Alvares, President of Konkani Sahitya Academy, who thanked everyone involved in organising the event and acknowledged the presence of the distinguished guests. He also conveyed his best wishes to the incoming Director.
The programme concluded with the Sandesha Anthem and a fellowship meal, marking the beginning of a new chapter in the journey of Sandesha Foundation for Culture and Education.


























































