Founder’s Day celebration at Kundapur branch of MCC Bank Limited


ಕುಂದಾಪುರ; ಎಂಸಿಸಿ ಬ್ಯಾಂಕ್ ಲಿಮಿಟೆಡ್ನ ಕುಂದಾಪುರ ಶಾಖೆಯಲ್ಲಿ ಮೇ 08, 2026 ರಂದು ಸಂಸ್ಥಾಪಕರ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು.
ಶಾಖೆಯ ಬೆಂಬಲ ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ ಅವರು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ಸಂಸ್ಥಾಪಕರರಿಗೆ ನಮನ ಸಕಲ್ಲಿಸಿ, ಬ್ಯಾಂಕ್ ಸ್ಥಾಪನೆಯಾದ ಬಗ್ಗೆ ತಿಳಿಸುತ್ತಾ, “ಎಂಸಿಸಿ ಬ್ಯಾಂಕಿನ ಸಂಸ್ಥಾಪಕರಾದ ಪಿ ಎಫ್ ಎಕ್ಸ್ ಸಲ್ಡಾನ್ಹಾ ಮತ್ತು ಅವರ ಸಂಗಾತಿಗಳಿಂದ ಸಮುದಾಯದ ಒಳಿತಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪನೆ ಬಗ್ಗೆ ವಿಚಾರ ಮಂಥನ ಮಾಡಿ, ಪಿ ಎಫ್ ಎಕ್ಸ್ ಸಲ್ಡಾನ್ಹಾ ಇತರ 67 ಸದಸ್ಯರಿಂದ ಮೇ 08, 1912 ರಂದು ಇದು ಸ್ಥಾಪನೆ ಆಯಿತು.2018 ರಿಂದ ಇಲ್ಲಿಯವರೆಗಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರ ನೇತೃತ್ವದಲ್ಲಿ ಬ್ಯಾಂಕಿನ ಭಾರೀ ಪ್ರಗತಿಯಲ್ಲಿದ್ದು, 1500 ಕೋಟಿ ವ್ಯವಹಾರದ ಸಾಧನೆ ಮಾಡಿದಲ್ಲದೆ, ಹಲವು ಶಾಖೆಗಳನ್ನು ಆರಂಭಿಸಲಾಗಿದೆ, ಶೀಘ್ರದಲ್ಲಿ ಇನ್ನೂ ಎರಡು ಶಾಖೆಗಳು ಆರಂಭವಾಗುವುದೆಂದು ತಿಳಿಸುತ್ತಾ, ಉದ್ಯಮಗಳು ಮತ್ತು ಬ್ಯಾಂಕಿನ ಬೆಳವಣಿಗೆಯ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಅವರು ತಿಳಿಸಿದರು. ಹಾಜರಿದ್ದ ಎಲ್ಲಾ ಅತಿಥಿಗಳು ಸಂಸ್ಥಾಪಕರಿಗೆ ಪುಷ್ಪನಮನ ಸಲ್ಲಿಸಿದರು
ಶಾಖೆಯ ವ್ಯವಸ್ಥಾಪಕರಾದ ಸಂದೀಪ್ ಕ್ವಾಡ್ರಾಸ್, ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಬ್ಬಂದಿ ಸದಸ್ಯೆ ಲವೀನಾ ಲೂಯಿಸ್ ಅವರು ಧನ್ಯವಾದಗಳನ್ನು ಅರ್ಪಿಸಿದರು. ಉಪಸ್ಥಿತರೆಲ್ಲರೂ ಉಪಹಾರ ಮತ್ತು ಸಿಹಿತಿಂಡಿ ನೀಡಲಾಯಿತು.
Founder’s Day celebration at Kundapur branch of MCC Bank Limited

Kundapur; Founder’s Day was celebrated with great enthusiasm on May 08, 2026 at the Kundapur branch of MCC Bank Limited.
Branch Support Director Elroy Kiran Crasto laid a wreath at the portrait of the founder, paid homage to the founders and informed about the establishment of the bank, saying, “The founder of MCC Bank, P.F.X. Saldanha and his associates brainstormed about the establishment of a cooperative bank for the benefit of the community, and it was established on May 08, 1912 by P.F.X. Saldanha and 67 other members. Since 2018, under the leadership of the President, Cooperative Ratna Anil Lobo, the bank has made tremendous progress and has achieved a business of 1500 crores, many branches have been opened, and two more branches will be opened soon, he informed about the growth and plans of the enterprises and the bank. All the guests present paid floral tributes to the founders. Branch Manager Sandeep Quadras welcomed and presented the program. Staff member Lavina Lewis proposed a vote of thanks. All those present were served breakfast and Dessert was served.









