Pope Leo 14 about him U.S. Condemnation by Mangalore Diocese for President Donald Trump’s statement


ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ರೈಸ್ತ ಜಗದ್ಗುರು ಪರಮ ಪೂಜ್ಯ ಪೋಪ್ 14ನೇ ಲಿಯೋ ರವರ ವಿರುದ್ಧ ಇತ್ತೀಚೆಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಮಂಗಳೂರು ಧರ್ಮಪ್ರಾಂತ್ಯವು ತೀವ್ರವಾಗಿ ಖಂಡಿಸುತ್ತದೆ.
ಪರಮೋಚ್ಛ ಗುರುಗಳ ವಿರುದ್ಧದ ಇಂತಹ ಮಾತುಗಳು ಮಂಗಳೂರಿನ, ಭಾರತದ ಮತ್ತು ವಿಶ್ವದಾದ್ಯಂತದ ಕ್ಯಾಥೊಲಿಕರಿಗೆ ಅತೀವ ನೋವುಂಟುಮಾಡಿವೆ. ಏಕೆಂದರೆ ಅವರು ಪೋಪರನ್ನು ಸಂತ ಪೇತ್ರರ ಉತ್ತರಾಧಿಕಾರಿ ಮತ್ತು ಕ್ರೈಸ್ತ ಧರ್ಮಸಭೆಯ ಮುಖ್ಯಸ್ಥರೆಂದು ಗೌರವಿಸುತ್ತಾರೆ. ಪೋಪ್ ರವರನ್ನು ಅವಮಾನಿಸುವ ಮೂಲಕ ಕೋಟ್ಯಂತರ ಕ್ರೈಸ್ತ ವಿಶ್ವಾಸಿಗಳ ನಂಬಿಕೆ ಮತ್ತು ಭಾವನೆಗಳನ್ನು ಘಾಸಿಗೊಳಿಸಲಾಗಿದೆ.
ಸಾರ್ವಜನಿಕ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆ ಪ್ರಜಾಪ್ರಭುತ್ವದ ಭಾಗವಾಗಿದ್ದರೂ, ಧಾರ್ಮಿಕ ಮುಖಂಡರ ಮೇಲೆ ವೈಯಕ್ತಿಕ ದಾಳಿಗಳು ನಾಗರಿಕ ಸಂವಾದದಲ್ಲಿ ಸ್ಥಾನ ಪಡೆಯಬಾರದು. ಅವು ಪರಸ್ಪರ ಗೌರವವನ್ನು ಕುಂದಿಸುತ್ತವೆ, ಅಂತರಧರ್ಮೀಯ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಮತ್ತು ಸಾರ್ವಜನಿಕ ಜೀವನದ ಘನತೆಯನ್ನು ಕುಗ್ಗಿಸುತ್ತವೆ.
ಎಲ್ಲಾ ನಾಯಕರು ಮತ್ತು ಪ್ರಭಾವಿ ವ್ಯಕ್ತಿಗಳು ಸಾರ್ವಜನಿಕ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ಮತ್ತು ಇತರರ ಧಾರ್ಮಿಕ ನಂಬಿಕೆಗಳನ್ನು ಕೀಳಾಗಿ ಕಾಣುವ ಮಾತುಗಳಿಂದ ದೂರವಿರಬೇಕೆಂಬುದು ನಾವು ಬಲವಾಗಿ ಪ್ರತಿಪಾದಿಸುತ್ತೇವೆ. ಮಂಗಳೂರು ಧರ್ಮಪ್ರಾಂತ್ಯವು ಪೋಪ್ 14ನೇ ಲಿಯೋ ರವರಿಗೆ ತನ್ನ ಅಚಲ ಧಾರ್ಮಿಕ ನಿಷ್ಟೆ ಹಾಗೂ ವಿಧೇಯತೆಯನ್ನು ಪುನರುಚ್ಚರಿಸುತ್ತದೆ ಮತ್ತು ಶಾಂತಿ, ನ್ಯಾಯ ಹಾಗೂ ಬಡವರ ಸೇವೆಗಾಗಿ ಅವರ ನಾಯಕತ್ವವು ಜಗತ್ತಿಗೆ ಮಾರ್ಗದರ್ಶಿಯಾಗಲಿ ಎಂದು ಪ್ರಾರ್ಥಿಸುತ್ತದೆ.
ಇಂತಹ ಸಂದರ್ಭಗಳಲ್ಲಿ ನಮ್ಮ ಪರಮಪೂಜ್ಯ ಪೋಪ್ ಹಾಗೂ ಅಧಿಕಾರ ಸ್ಥಾನದಲ್ಲಿರುವ ಎಲ್ಲಾ ಪ್ರಭಾವಿ ವ್ಯಕ್ತಿಗಳು ಸತ್ಯ ಮತ್ತು ಪರಸ್ಪರ ಗೌರವದ ಹಾದಿಯಲ್ಲಿ ನಡೆಯುವಂತೆ, ಅವರಿಗಾಗಿ ಪ್ರಾರ್ಥಿಸಲು ನಾವು ಕ್ರೈಸ್ತ ವಿಶ್ವಾಸಿಗಳನ್ನು ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಎಲ್ಲಾ ವಿಶ್ವಾಸಿಗಳ ಪರವಾಗಿ – ವಂ. ಡಾ. ಜೆ. ಬಿ. ಸಲ್ಡಾನ್ಹಾ
ರೊಯ್ ಕ್ಯಾಸ್ತೆಲಿನೊ – ಪಿ.ಆರ್.ಒ. ಮಂಗಳೂರು ಡಯಾಸಿಸ್
Pope Leo 14 about him U.S. Condemnation by Mangalore Diocese for President Donald Trump’s statement

The Diocese of Mangalore strongly condemns the recent disparaging comments made by the U.S. President Mr Donald Trump against His Holiness Pope Leo XIV.
Such remarks directed at the Supreme Pontiff are deeply hurting Catholics who revere the Holy Father as the successor of St. Peter and the visible head of the Church. To insult the Pope is to disrespect the faith and sentiments of millions of the faithful.
While healthy debate on public issues is part of democracy, personal attacks on religious leaders have no place in civil discourse. They undermine mutual respect, wound interfaith harmony, and diminish the dignity of public life.
We call upon all leaders and persons of influence to uphold decorum and refrain from speech that demeans the religious convictions of others. The Diocese of Mangalore reaffirms its filial loyalty to Pope Leo XIV and prays that his ministry of peace, justice, and care for the poor may continue to inspire the world.
We urge the faithful to respond to such moments with prayer for our Holy Father and for all those in positions of authority, that they may be guided by truth and respect.
On behalf of the clergy, religious, and faithful of the Diocese of Mangalore – Fr J B Saldanha
Roy Castelino – PROs Diocese of Mangalore


