

ಶ್ರೀನಿವಾಸಪುರ : ಈಗ ನಡೆಯುತ್ತಿರುವ ಯುದ್ದದ ಸೂಚನೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳೆದ 3 ತಿಂಗಳ ಹಿಂದೆಯೇ ಮಾಹಿತಿ ಇದ್ದರೂ ಸಹ ಗಂಭೀರ ಯೋಜನೆ ಮಾಡದೆ ನಿರ್ಲಕ್ಷ ವಹಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆರೋಪ ಮಾಡಿದರು. ನಮ್ಮ ರಾಜ್ಯವು ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ದೇಶಕ್ಕೆ ಎರಡು ಸ್ಥಾನ . ಹೀಗಿದ್ದರು ಸಹ ನಮ್ಮ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸರಬಾರಜು ಸಚಿವ ಕೆ.ಎಚ್.ಮುನಿಯಪ್ಪ
ಪಟ್ಟಣದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಕೇಂದ್ರ ಸರ್ಕಾರದಿಂದ ನಮಗೆ ಗ್ಯಾಸ್ ವಿತರಣೆಯಾದರೆ ಕ್ರಮಬದ್ದವಾಗಿ ವಿತರಣೆ ಮಾಡಬಹುದಾಗಿದೆ ಎಂದರು. ಸರ್ಕಾರಿ ಸ್ವಾಮ್ಯದಲ್ಲಿನ ಕಂಪನಿಗಳು ಅರ್ಧ ಸರಬಾರಜು ಮಾಡುತ್ತವೆ ಹಾಗು ಖಾಸಗಿ ಕಂಪನಿಗಳು ಪರವಾಣೆ ಪಡೆದು ಅರ್ಧ ಸರಬಾರಜು ಮಾಡಬೇಕು . ಆದರೆ ಖಾಸಗಿ ಕಂಪನಿಗಳು ಹೆಚ್ಚಿನ ಬೆಲೆಗಳಿಗೆ ಮಾರುತ್ತಿದ್ದಾರೆ ಎಂದು ಆರೋಪಿಸಿದರು. ಖಾಸಗಿ ಕಂಪನಿಗಳು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಗ್ಯಾಸ್ ಬೆಲೆ ಹೆಚ್ಚಾಗಿದೆ . ಆಟೋ ಚಾಲಕರಿಗೆ ಜೀವನೆವೇ ಕಷ್ಟ ಸಾಧ್ಯವಾಗಿಬಿಟ್ಟಿದೆ.
ಗ್ಯಾಸ್ ವಿತರಣೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹಾಗು ನಾನು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಿಗೆ ಪತ್ರವೊಂದನ್ನ ಬರೆದಿದ್ದೇವೆ ಎಂದರು. ಇದೇ ತಿಂಗಳು 10 ನೇ ತಾರೀಖು ನಂದು ಸರ್ಕಾರಿ ಸ್ವಾಮ್ಯದ ಕಂಪನಿಗಳ ಅಧಿಕಾರಿಗಳ, ಹಾಗು ಖಾಸಗಿ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಪತ್ರಕ್ಕೆ ಕೇಂದ್ರ ಸರ್ಕಾರ ಉತ್ತರವನ್ನು ಎದುರುನೋಡುತ್ತಿದ್ದೇನೆ. 3 ತಿಂಗಳ ಹಿಂದೆ ಯುದ್ದದ ಮುನಸ್ಸೂಚನೆ ಕೇಂದ್ರ ಸರ್ಕಾರಕ್ಕೆ ಗೂತ್ತಿತ್ತು, ಆದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕಿತ್ತು. ಈಗ ರಷ್ಯಾದಿಂದ ಪಯತ್ನ ಮಾಡಿ ತರಿಸಿಕೊಳ್ಳುತ್ತಿದೆ .ಒಟ್ಟಿನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲಿಯಂ ಪದಾರ್ಥಗಳನ್ನು ವ್ಯವಸ್ಥೆ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಪಟ್ಟಣದಲ್ಲಿ ಡೊಮಾಸ್ಟಿಕ್ ಗ್ಯಾಸ್ ನ್ನು 25 ದಿನಗಳಿಗೆ 1 ಸಿಲೆಂಡರ್ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ 45 ದಿನಕ್ಕೆ 1 ಸಿಲೆಂಡರ್ ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ವ್ಯಾಪಾಸ್ಥರು ಸಹಕಾರ ನೀಡಿದಾಗ ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗುವುದು.
ಸಧ್ಯಕ್ಕೆ ನಮಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಗಳು. ನಮಗೆ ಹೈಕಾಂಡ್ ನಿರ್ಧಾರ ಮುಖ್ಯ. ಅವರು ಏನು ನಿರ್ಧಾರ ತಗೆದುಕೊಳ್ಳುತ್ತಾರೊ ಅದಕ್ಕೆ ಬದ್ದರಾಗಿರುತ್ತೇವೆ.ಗೊಂದಲ ಬೇಡ.
ತಾಲೂಕಿನಲ್ಲಿ ಅರಣ್ಯ ಇಲಾಖೆಯು ಬಹುತೇಕ ರೈತರ ಜಮೀನುಗಳನ್ನ ವಶಪಡಿಸಿಕೊಂಡಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಅರಣ್ಯ ಇಲಾಖೆಯ ಕಾನೂನು ತುಂಬಾ ಕಟ್ಟನಿಟ್ಟಾಗಿದೆ. ಕಂದಾಯ ಇಲಾಖೆ ಹಾಗು ಅರಣ್ಯ ಇಲಾಖೆ ಸಮನ್ವಯ ಸಮಿತಿ ರಚನೆ ಮಾಡಿ ಅದರ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕಿದೆ. ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಮುನ್ನ ಅರಣ್ಯ ಇಲಾಖೆಯೇ ಆ ಭೂಮಿಯನ್ನು ತನ್ನ ವಶದಲ್ಲಿ ಇಟ್ಟಕೊಂಡು ಅಲ್ಲಿ ಗಿಡಗಳನ್ನ ನೆಟ್ಟಿದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದರು . ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಬಹುತೇಕರು ಪಡಿತರ ಚೀಟಿ ರದ್ದುಆಗಿದ್ದು, ಮನೆ ಕಟ್ಟಲು ಬ್ಯಾಂಕ್ನಲ್ಲಿ ಸಾಲ ಪಡೆಯುತ್ತಿರುವ ವೇಳೆ ಇನಕ್ಮ್ ಟ್ಯಾಕ್ಸ್ ಕಟ್ಟರೆ ನಾವು ಬ್ಯಾಂಕ್ನಿAದ ಸಾಲಕೊಡುತ್ತೇವೆ ಎಂದು ಹೇಳಿರುತ್ತಾರೆ ಅದರಿಂದ ಪಡಿತರ ಚೀಟಿ ರದ್ದಾಗಿರುತ್ತದೆ. ಈ ವಿಚಾರವಾಗಿ ಅಸಂಬ್ಲಿಯಲ್ಲಿ ಹೇಳಿದ್ದೇನೆ . ಆಡಳಿತ ಸುದಾರಣೆ ಆಯೋಗ ಅಧ್ಯಕ್ಷ ದೇಶಪಾಂಡೆ ರವರು ಈ ವಿಚಾರವಾಗಿ ಚೆರ್ಚೆ ಮಾಡಿ 3 ಲಕ್ಷದ ವರೆಗೂ ಆದಾಯ ಇದ್ದರೆ ಅನುಕೂಲ ಎಂದು ಹೇಳಿದ್ದಾರೆ. ಇಂದು ಕೂಲಿ ಮಾಡುವವನಿಗೂ ವರ್ಷಕ್ಕೆ 1-50 ಲಕ್ಷದ ವರೆಗೂ ಸಂಪಾದನೆ ಮಾಡಬಹುದು. ಕ್ಯಾಬಿನಿಟ ನಲ್ಲಿ ಚೆರ್ಚೆ ಮಾಡಲಾಗುವುದು . ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಹಕ್ಕನ್ನು ಜಿಲ್ಲಾಧಿಕಾರಿ ಹಾಗು ಉಪವಿಭಾಗಧಿಕಾರಿ ಹೊಂದಿರುತ್ತಾರೆ. ನಿಜವಾದ ಅರ್ಹರಿದ್ದಾರೆ ಅಂತವರು ಬಿಪಿಎಲ್ ಕಾರ್ಡ್ ರವರಿಗೆ 15 ದಿನಗಳಲ್ಲಿ ಬಿಪಿಲ್ಕಾರ್ಡ್ನ್ನ ತಹಶೀಲ್ದಾರ್ ವಿತರಣೆ ಮಾಡುವ ಹಕ್ಕು ಹೊಂದಿದ್ದಾರೆ. ಈಗಾಗಲೇ ಸೊಸೈಟಿಯಲ್ಲಿ ಇಂದಿರಾ ಕಿಟ್ನಲ್ಲಿ ಅಕ್ಕಿ, ಎಣ್ಣೆ, ಸಕ್ಕರೆ ,ಬೇಳೆ ಕೊಡುತ್ತೇವೆ.
ಒಳಮೀಸಲಾತಿಗೆ ಸಂಬಂದಿಸಿದಂತೆ ಬೋವಿ, ಲಂಬಾಣಿ, ಎಸ್ಸಿಯಲ್ಲಿ ಬಲ, ಎಡ ಪರಿಷ್ಕರಣೆ ಬಗ್ಗೆ ತಿಳಿಸಿಲಾಗಿದೆ. ಉಪಚುನಾವಣೆ ಆದ ಮೇಲೆ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಹೈಕೋರ್ಟ್ 50% ಮೇಲೆ ಬರಬಾರದು ಎಂದು ತೀರ್ಮಾನ ನೀಡಿದೆ. ಇದರ ಬಗ್ಗೆ ನೋಟಿಫಿಕೇಶನ್ ಮಾಡಿಲ್ಲ. ಇದರ ಬಗ್ಗೆ ಸರ್ಕಾರ ಬದ್ದವಾಗಿದೆ ಮುಖ್ಯಮಂತ್ರಿಗಳು , ಉಪಮುಖ್ಯಮಂತ್ರಿಗಳು ಎಲ್ಲಾ ಸಚಿವರು ಒಗ್ಗಟ್ಟಾಗಿ ಮಾಡಬೇಕು ಎಂದು ತೀರ್ಮಾನವಾಗಿದೆ. 2 ಸಧನದಲ್ಲಿ , ರಾಜ್ಯಪಾರಿಂದ ಗ್ರೀನ್ಸಿಗನಲ್ ದೊರೆತಿದೆ. 15% ಇರುವುದನ್ನು 18 % ಹೆಚ್ಚಿಸಬೇಕಿದೆ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದರು.
2027 ಇಸ್ವಿಯಲ್ಲಿ ರಾಜ್ಯದ ಕಡೆ ಗ್ರಾಮವಾದ ನಂಗಲಿ ಕರೆಗೆ ಕುಡಿಯುವ ನೀರನ್ನ ಹರಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬೆಂಗಳೂರು ಗ್ರಾಮಾಂತರ, ಅವಳಿ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸಲಾಗುವುದು. ಪೈಪ್ಲೈನ್ ಕಾಮಗಾರಿ ಚುರುಕಾಗಿ ನಡೆಯುತ್ತಿದೆ ದೊಡ್ಡಬಳ್ಳಾಪುರದ ಬಳಿ ನೀರು ಶೇಖರಣೆ ಘಟಕ ಇದ್ದು, ಅಲ್ಲಿಂದ 3 ಲೈನ್ ಮಾಡಿ ಒಂದು ಕೋಲಾರ , ಕೆಜಿಎಫ್, ಶಿಡ್ಲಘಟ್ಟ ಮೇಲೆ ಶ್ರೀನಿವಾಸಪುರಕ್ಕೆ , ಬಾಗೇಪಲ್ಲಿ ಕಡೆ ಹೋಗುತ್ತದೆ. ಈಗಾಗಲೇ ಗೌರಿಬಿದನೂರಿನಲ್ಲಿ ಪೈಪ್ಲೈನ್ ಕಾಮಗಾರಿ ಮುಗಿದಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ದಳಸನೂರು ರೇಷ್ಮ ಬೆಳಗಾರರ ಸಂಘದ ನಿರ್ದೇಶಕ ಎಸ್.ಶಿವಾರೆಡ್ಡಿ, ಗ್ರಾ.ಪಂ.ಮಾಜಿ ಸದಸ್ಯೆ ವಿ.ಸುಮಿತ್ರ, ಮುಖಂಡರಾದ ಸಿ.ಎಂ.ವೆAಕಟೇಶ್ಗೌಡ, ನಾಗದೇನಹಳ್ಳಿ ಚೌಡರೆಡ್ಡಿ, ಚಕ್ಕರ್ಲಪಲ್ಲಿ ಬಿಫಿನ್, ಗಿರೀಶ್, ಮನು, ಗೊರವಮಾಕಲಪಲ್ಲಿ ಶ್ರೀನಿವಾಸ್, ಗುತ್ತಿಗೆದಾರ ಶ್ರೀನಿವಾಸ್,ರಮೇಶ್, ಹಳೇಪೇಟೆ ಮುರಳಿ, ಬದ್ರಿ ಇದ್ದರು.

