

ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಕ್ರೈಸ್ತ ನೀತಿ ಶಿಕ್ಷಣ ದಿನಾಚರಣೆ ಪ್ರಯುಕ್ತ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೊ ಬಲಿ ಪೂಜೆ ನಡೆಸಿ ಕ್ರೈಸ್ತ ನೀತಿ ಶಿಕ್ಷಣದ ಮಹತ್ವ ಹಾಗೂ ಈ ಶಿಕ್ಷಣ ಮುಂದಿನ ಜೀವನಕ್ಕೆ ದಾರಿ ಆಗಲಿ ಎಂದರು. ಮುಖ್ಯ ಅತಿಥಿಯಾಗಿ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಒಳ್ಳೆಯ ಮನಸ್ಸಿನಿಂದ ಕರ್ತವ್ಯ ನಿರ್ವಹಿಸಿದಾಗ ಭಗವಂತ ಒಲಿಯುತ್ತಾನೆ ಆದ್ದರಿಂದ ದೇವರನ್ನು ಪರೀಕ್ಷಿಸಬಾರದು ಎಂದು ನುಡಿದರು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು ವೇದಿಕೆಯಲ್ಲಿ ಸಹಾಯಕ ಧರ್ಮಗುರುಗಳಾದ ಫಾದರ್ ಶರೂನ್ ಡಿಸೋಜ, ಪಾಲನ ಮಂಡಳಿ ಉಪಾಧ್ಯಕ್ಷ ರೂಫಸ್ ಬರೆಟ್ಟೊ, ಕಾರ್ಯದರ್ಶಿ ಪಿಯೂಸ್ ಡಿಸೋಜ, ಆಯೋಗದ ಸಂಚಾಲಕರಾದ ಲೋರೆನ್ಸ್ ಬರೆಟ್ಟೊ, ಸಚತೇಕಿ ಸಾರಾ ಡಿ ಕೋಸ್ಟಾ ಹಾಜರಿದ್ದರು. ಅನೂಷಾ ಡಿಕೋಷ್ಟಾ ಸರ್ವರಿಗೆ ಸ್ವಾಗತಿಸಿದರು ಹಾಗೂ ಮರಿಯಾ ಡಿಸಿಲ್ವ ಧನ್ಯವಾದ ಸಮರ್ಪಿಸಿದರು ಶರ್ಮಿಳಾ ಬರೆಟ್ಟೊ ಕಾರ್ಯಕ್ರಮ ನಿರೂಪಿಸಿದರು.

























