

ಪಡುಕೋಣೆ : ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ದಿನಾಂಕ 21.2.2026 ರಂದು ಬೆಂಕಿ ಇಲ್ಲದೆ ಅಡುಗೆ ತಯಾರಿ ಎಂಬ ಸ್ಫರ್ಧೆಯನ್ನು ಅಯೋಜಿಸಲಾಗಿತ್ತು. ಎಲ್ಲಾ ಮಕ್ಕಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಒಂಬತ್ತು ತಂಡಗಳನ್ನು ರಚಿಸಿ ಸ್ಪರ್ಧೆಯನ್ನು ನಡೆಸಲಾಗಿತ್ತು. ಹಸಿ ತರಕಾರಿ, ಹಣ್ಣು ಮತ್ತು ಇತರೆ ಪದಾರ್ಥಗಳನ್ನು ಬಳಸಿ ಆರೋಗ್ಯಕರ ಖಾದ್ಯಗಳಾದ ಸಲಾಡಗಳು, ಪ್ರುಟ್ ಸಲಾಡ್ ಗಳು, ಲಸ್ಸಿ, ಚರಮುರಿ, ಕೇಕ್, ವಿವಿಧ ರೀತಿಯ ಲಡ್ಡು, ಬರ್ಫಿ, ಖಟ್ಟಾಮಿಟ್ಟಾ ಕ್ಯಾಂಡಿ, ಗೊಜ್ಜು, ಉಪ್ಪಿನಕಾಯಿ ಇನ್ನೂ ಹಲವಾರು ಖಾದ್ಯಗಳನ್ನು ವಿದ್ಯಾರ್ಥಿಗಳು ಒಂದು ಗಂಟೆಯ ಸಮಯದಲ್ಲಿ ತಯಾರಿಸಿ ಜೋಡಿಸಿಟ್ಟರು. ಏಫ್ರಾನ್, ಟೋಪಿ ತಾವೇ ತಯಾರಿಸಿ ತಮ್ಮ ಕೌಶಲ್ಯ ಮೆರೆದರು.
ನಿರ್ಣಯಕರಾಗಿ ಶ್ರೀ ಜೋಸೆಫ್ ಡಿ’ಸಿಲ್ವ, ಶ್ರೀಮತಿ ಡೇರಿ ಸುವಾರಿಸ್, ಶ್ರೀಮತಿ ಪಿಲೋಮಿನಾ ಡಿ’ಸೋಜಾ. ರುಚಿ, ಪ್ರದರ್ಶನ, ತಯಾರಿಸಿದ ಆಹಾರ ಸಂಖ್ಯೆ, ಸ್ವಚತೆ, ಬಳಸಿದ ವಸ್ತುಗಳು ನೋಡಿ ಅಂಕಗಳನ್ನು ನೀಡಲಾಯಿತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತ್ರತೀಯ ಸ್ಥಾನ ಬಂದ ತಂಡಕ್ಕೆ ಶಾಲಾ ಸಂಚಾಲಕರಾದ ವಂ. ಫಾ. ಪ್ರಾನ್ಸಿಸ್ ಕರ್ನೆಲಿಯೊರವರು ಬಹುಮಾನ ನೀಡಿದರು. ಇತರ ತಂಡಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಿ ಮಕ್ಕಳ ಕೖ ಚಳಕದ ಕೌಶಲ್ಯಕ್ಕೆ ಪ್ರಶಂಸಿ ಸರ್ವ ಮಕ್ಕಳನ್ನು ಅಭಿನಂದಿಸಿದ ಅವರು “ಇಂತಹ ಕಾರ್ಯಕ್ರಮಗಳು ಶಾಲೆಯಲ್ಲಿ ನಡೆಸುವುದು ಮಕ್ಕಳಿಗೆ ಒಂದು ಉತ್ತಮ ಆರೋಗ್ಯಕರ ಶಿಸ್ತು, ಅಲ್ಲದೇ ಮಕ್ಕಳು ತಾವೇ ಮನೆಯಲ್ಲಿ ತಯಾರಿಸಲು ಪ್ರಯತ್ನಿಸುವರು. ಹೊರಗಡೆ ಸಿಗುವ ಯಾಂತ್ರಿಕೃತ ಮತ್ತು ಸಂಸ್ಕರಿಸಿದ ಆಹಾರಗಳ ಬಗ್ಗೆ (ಜಂಕ್ ಪುಡ್ )ಮೇಲೆ ಪ್ರಭಾವ ಮಾಡುವುದನ್ನು ತಕ್ಕ ಮಟ್ಟಿಗೆ ನಿಲ್ಲಿಸಲು ಮತ್ತು ಆರೋಗ್ಯದ ಬಗ್ಗೆ ಗಮನ ಕೊಡಲು ಈ ಶಾಲೆಯ ಶಿಕ್ಷಕರು ತೋರಿಸುವ ಮುತುವರ್ಜಿ ಉತ್ತಮ ಮಾರ್ಗದರ್ಶನವಾಗಿದೆಯೆಂದು” ತಿಳಿಸಿದರು. ನಿರ್ಣಾಯಕರು ತಮ್ಮ ಅನ್ನಿಸಿಕೆಯನ್ನು ವ್ಯಕ್ತ ಪಡಿಸಿ ಶಿಕ್ಷಕರಿಗೂ, ಮಕ್ಕಳಿಗೂ ಪ್ರಶಂಸಿದರು.













