

ಕೋಟ:ಕ್ರೀಡೆಯ ಮೂಲಕ ಸ್ನೇಹ, ಪ್ರೀತಿ, ವಿಶ್ವಾಸ ಬೆಳೆಯುತ್ತದೆ. ಬಾಂಧವ್ಯ ಕ್ರೀಡಾಕೂಟದಲ್ಲಿ ಮಕ್ಕಳು,ಮಹಿಳೆಯರು,ಪುರುಷರು ಒಟ್ಟಾಗಿ ಸಂಭ್ರಮಿಸುತ್ತಿರುವುದು ಮನಸ್ಸಿಗೆ ಖುಷಿಕೊಡುತ್ತದೆ ಎಂದು ಶಿಕ್ಷಕ-ಪತ್ರಕರ್ತ ಚಂದ್ರಶೇಖರ ಬೀಜಾಡಿ ಹೇಳಿದರು.
ಅವರು ಬೀಜಾಡಿ ವಿಷ್ಣುಮೂರ್ತಿ ಫ್ರೆಂಡ್ಸ್ ಮತ್ತು ಅರಸರಬೆಟ್ಟು ಫ್ರೆಂಡ್ಸ್ ಇವರ ಆಶ್ರಯದಲ್ಲಿ ನಡೆದ ಬಾಂಧವ್ಯ ಕ್ರೀಡಾಕೂಟ-೨೦೨೬ರಲ್ಲಿ ಕಡಲೂರಿನ ವೀರ
ಯೋಧ ಅನೂಪ್ ಪೂಜಾರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಕ್ರೀಡಾಕೂಟವನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಜಿ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಕೀಲ ನಾಗೇಂದ್ರ ಪೈ, ನಿವೃತ್ತ ಶಿಕ್ಷಕ ಗಣಪಯ್ಯ ಚಡಗ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ವಾದಿರಾಜ ಹೆಬ್ಬಾರ್ ಬೀಜಾಡಿ, ಗುಲಾಬಿಯಮ್ಮ, ಚಂದ್ರ ಬಿ.ಎನ್, ಹಂಗಳೂರು ಆರ್ಜೆ ಮೋಟರ್ಸ್ ಮಾಲಿಕ ಅನೂಪ್ ಕುಮಾರ ಬಿ.ಆರ್., ಉದ್ಯಮಿ ರಾಜೇಶ್ ಸೇರಿಗಾರ್, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ,ಅರಸರಬೆಟ್ಟು ಫ್ರೆಂಡ್ಸ್ನ ಕೃಷ್ಣಾನಂದ ಭಟ್, ಮಂಜುನಾಥ ಆಚಾರ್ಯ, ವಿಷ್ಣುಮೂರ್ತಿ ಫ್ರೆಂಡ್ಸ್ನ ಉದಯ ಗಾಣಿಗ, ನಾಗರಾಜ ಬೀಜಾಡಿ, ಅಶೋಕ್ ಕುಂದರ್, ರಾಜೇಶ್ ಪೂಜಾರಿ, ನಾಗರಾಜ್ ಬೀಜಾಡಿ, ಲಕ್ಷ÷್ಮಣ್ ಮೊಗವೀರ, ಪ್ರಕಾಶ್ ಆಚಾರ್ಯ, ಗಿರೀಶ್ ಪೂಜಾರಿ ಅರಸರಬೆಟ್ಟು,ರಾಜೇಂದ್ರ ಬೀಜಾಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ
ನಾರಾಯಣ ಗಾಣಿಗ ಬೀಜಾಡಿ,ಮೋಕ್ಷ ಸುರೇಂದ್ರ ಸೇರಿಗಾರ್ ಬೀಜಾಡಿ, ನಾಗರಾಜ್ ಮೊಗವೀರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ಉಳಿದ ಹಣವನ್ನು ವಿಶೇಷ ಚೇತನ ಮಗುವಿನ ಚಿಕಿತ್ಸೆ ಹಾಗೂ ಎರಡು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿತರಿಸಲಾಯಿತು. ಸಂದೇಶ್ ಪೂಜಾರಿ ಮುದ್ದೇರ ಓಣಿ ಸ್ವಾಗತಿಸಿದರು. ಉಪನ್ಯಾಸಕ ಪಾಂಡುರAಗ ಕಾರ್ಯಕ್ರಮ ನಿರೂಪಿಸಿದರು.

