

ಶ್ರೀನಿವಾಸಪುರ : (ಟಿಪಿಎಪಿಎಂಸಿ) ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆಯಲ್ಲಿ 11 ಸದಸ್ಯರು ಇದ್ದು , ಅದರಲ್ಲಿ ಅಧ್ಯಕ್ಷ ಗಾಧೆಗೆ ಆಲವಾಟ ವಿ.ವೆಂಕಟರೆಡ್ಡಿರವರೊಬ್ಬರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರವನ್ನ ಪರಿಶೀಲಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಕ್ರಮಬದ್ದವಾಗಿ ಇದ್ದ ಕಾರಣ ಅವರನ್ನ ಮುಂದಿನ ಐದು ವರ್ಷಕ್ಕಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಶಿವಪುರ ಬಿ.ಗರ್ರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಕ್ರಮಬದ್ದವಾಗಿ ಇದ್ದ ಕಾರಣ ಅವರನ್ನ ಉಪಾಧ್ಯಕ್ಷರಾಗಿ ಐದು ವರ್ಷಕ್ಕಾಗಿ ಆಯ್ಕೆ ಮಾಡಲಾಗಿದೆ ಚುನಾವಣಾಧಿಕಾರಿ ಮುಸ್ತಾಕಅಹ್ಮದ್ ಮಾಹಿತಿ ನೀಡಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ಅಶೋಕ್ ಮಾತನಾಡಿ ಇತ್ತೀಚಿಗೆ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಿರ್ದೇಶಕರು ಆಯ್ಕೆಯಾಗಿದ್ದು, ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದ್ದು, ಈ ಎಲ್ಲವೂ ಸಹ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ರವರ ಮಾರ್ಗದರ್ಶನದಂತೆ ನಡೆಯುತ್ತಿದ್ದು,ಇದು ಸಂಪೂರ್ಣವಾಗಿ ರೈತರಿಗೆ ಸಂಬAದಿಸಿರುವುದಾಗಿದ್ದು, ಅಧ್ಯಕ್ಷರಾದಿಯಾಗಿ ಎಲ್ಲರೂ ಸಹ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನ ರೈತರಿಗೆ ಬೇಕಾದ ರೀತಿಯಲ್ಲಿ ಎಲ್ಲವನ್ನೂ ಪಕ್ಷತೀತಾವಾಗಿ ವ್ಯವಸ್ಥೆ ಮಾಡಿಕೊಡಲು ಸಲಹೆ ನೀಡಿದರು.
ನೂತನ ಅಧ್ಯಕ್ಷ ವಿ.ವೆಂಕಟರೆಡ್ಡಿ ಮಾತನಾಡಿ ಎಲ್ಲಾ ಸದಸ್ಯರ ಸಲಹೆ , ಸಹಕಾರದೊಂದಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನ ರೈತರ ಪರವಾಗಿ ನೀಡಲು ಸಿದ್ದನಿದ್ದೇನೆ ಎಂದರು.
ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬಿರೆಡ್ಡಿ, ಮುಖಂಡರಾದ ಸೀತರಾಮರೆಡ್ಡಿ, ಕೃಷ್ಣಾರೆಡ್ಡಿ , ಬಿ.ಎಂ.ಪ್ರಕಾಶ್, ಹರೀಶ್, ಮಾಜಿ ರೈತ ಸಂಘದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ, ಎಸ್.ವಿ.ಸುಧಾಕರ್, ವೆಂಕಟರೆಡ್ಡಿ, ಆಲವಾಟ ರವಿ ಹಾಗು ಮುಖಂಡರು ಇದ್ದರು.

