

ಬಸ್ರೂರು ; ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಫೆ. 11 ರಂದು ಲೂರ್ದ ಮಾತೆಯ ಹಬ್ಬ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಲೂರ್ದ ಮಾತೆಯ ಹಬ್ಬದ ಪ್ರಯುಕ್ತ ಸಂಜೆ ಚರ್ಚಿನ ಗ್ರೋಟ್ಚೊ ಬಳಿ ಜಪಮಾಲೆಯ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಬಳಿಕ ಬಲಿ ಪೂಜೆಯನ್ನು ತ್ರಾಸಿ ಡೊನ್ ಬೋಸ್ಕೊ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಂ। ಫಾದರ್ ಅರ್ನಾಲ್ಡ್ ಮಥಾಯಿಸ್ ಅರ್ಪಿಸಿ ಲೂರ್ದ ಮಾತೆಯ ಆದರತೆ ಹಾಗೂ ಆದರ್ಶ ಗಳು ನಮಗೆಲ್ಲಾ ಇಂದು ದಾರಿದೀಪ ವಾಗಿದ್ದು ಆ ಕಾಲದಲ್ಲಿ ಯೇಸು ಕ್ರಿಸ್ತನ ಜೀವನಕ್ಕೆ ಮಾದರಿ ಆಗಿದ್ದರು ಎಂದು ನುಡಿದರು ಚರ್ಚಿನ ಪ್ರಧಾನ ಧರ್ಮ ಗುರುಗಳಾದ ವಂ। ರೋಯ್ ಲೋಬೊ ಸಹ ಪೂಜೆ ಯಲ್ಲಿ ಪಾಲ್ಗೊಂಡಿದ್ದರು ಬಳಿಕ ಲೂರ್ಡ್ಸ ಮಾತೆಯ ಪ್ರತಿಮೆಯನ್ನು ಮೇಣದಬತ್ತಿ, ಗಾಯನದೊಂದಿಗೆ ಮರವಣಿಗೆ ನಡೆಸಲಾಯಿತು. ಧರ್ಮಗುರುಗಳು ಭಕ್ತಾಧಿಗಳ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು.








