

ಕು೦ದಾಘುರ, ಜ. 31: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯ ಅಂಗವಾಗಿ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜ. 30 ರಂದು ಸಂಜೆ ಮಹಾತ್ಮ ಹುತಾತ್ಮ ಸೌಹಾರ್ದ ಕಾರ್ಯಕ್ರಮ ನಡೆಯಿತು.
ಮಣಿಪಾಲದ ಗಾಂಧೀ ಕೇಂದ್ರದ ಸ್ಥಾಪಕ ನಿರ್ದೇಶಕ ಪ್ರೊ. ವರದೇಶ ಹಿರೆಗಂಗೆ ಮಾತನಾಡಿ ಮಹಾತ್ಮ ಗಾಂಧಿ ತತ್ವಗಳು ಎಂದಿಗೂ ಪ್ರಸ್ತೂತವಾಗಿವೆ, ಗಾಂಧಿಜಿಯವರನ್ನು ಕೊಂದವರು ಗಾಂಧಿಜಿಯ ಹತ್ಯೆಯ ಜೊತೆಗೆ ಅವರ ತತ್ವಗಳು ಅಳಿದು ಹೋಗುತ್ತವೆ ಎಂದು ಎಣಿಸಿಕೊಂಡರು, ಆದರೆ ಅವರ ತತ್ವಗಳು ಅಳಿಯದೆ ಇನ್ನೂ ಬಲಿಷ್ಥಗೊಂಡವು, ಇತ್ತೀಚಿನ ದಿನಗಳಲ್ಲಿ ಗಾಂಧಿಜಿಯ ತತ್ವಗಳಿಗೆ ಕೆಲವರು ಹಿನ್ನೆಡೆಯನ್ನು ಆಗುವಂತೆ ವರ್ತಿಸುತ್ತಾರೆ, ಆದರೆ ಇದು ಕ್ಷಣಿಕ ಸತ್ಯಕ್ಕೆ ಯಾವತ್ತೂ ಸೋಲಿಲ್ಲವೋ ಹಾಗೇ ಗಾಂಧಿಜಿ ತತ್ವಗಳು ಗಾಂಧಿಜಿ ಅಮರರಾಗಿದ್ದಾರೆ’ ಎಂದು ಪ್ರತಿಪಾದಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಪ್ರಗತಿಪರ ಚಿಂತಕ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪೊ: ಹಯವದನ ಮೂಡುಸಗ್ರಿ ಮಾತನಾಡಿ ಗಾಂಧಿಜಿಯನ್ನುಅಪಾರ್ಥ ಮಾಡಿಕೊಂಡಿದ್ದೆ ಹೆಚ್ಚು ಜನ, ಗಾಂಧಿಜಿ ಹೇಳಿದರು ನಾನು ನೀಜವಾದ ವೈಷ್ಣವ, ಅಂದರೆ ನಾಮ ಹಾಕಿಕೊಂಡು ತಿರುಗಾಡುವುದಲ್ಲ, ವೈಷ್ಣವ ಜನೋತೊ ಅಂದರೆ ಯಾರು, ಪರರ ದುಖಕ್ಕೆ ಮಿಡೀಯುವರೊ ಅವರು ನೀಜವಾದ ವೈಷ್ಣವರು. ಗಾಂಧಿಜಿಯ ಮೂಲಕ ನಾವು ಅಭಿವ್ರದ್ದಿಕಡೆಗೆ ಗಮನ ಕೊಡಬೇಕು, ಅಂದು ಗಾಂಧಿಜಿಯನ್ನು ಒಂದೇ ಸಲ ಕೊಂದರು, ಇಂದು ಕೆಲವರು ನಿತ್ಯವೂ ಕೊಲ್ಲುತ್ತಾರೆ, ಆದರೆ ಅವರ ತತ್ವಗಳನ್ನು ಕೊಲ್ಲಲಾಗುವುದಿಲ್ಲ’
ಕುಂದಾಪುರ ತಾಲೂಕು ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಆಶಾ ಕರ್ವಾಲೋ ವೇದಿಕೆಯಲ್ಲಿ ಉಪಸ್ಥಿತರಿದ್ದರು ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷವಿನೋದ್ ಕ್ರಾಸ್ತ್ರ ವಿವಿಧ ಸಂಘಟನೆಗಳ ಪ್ರಮುಖರು, ಧರ್ಮಗುರುಗಳು, ಧರ್ಮಭಗಿನಿಯರು, ರಾಜಕೀಯ ಪ್ರಮುಖರು, ಸಮಾನ ಮನಸ್ಕರು ಸಭೆಯಲ್ಲಿ ಹಾಜರಿದ್ದರು.
ಸೌಹಾರ್ದ ಕರ್ನಾಟಕ ಕುಂದಾಪುರ, ಸಹಬಾಳ್ವೆ ಕುಂದಾಪುರ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಮಿತಿ, ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಮುಸ್ಟಿಂ ಒಕ್ಕೂಟ, ಸಮುದಾಯ ಕುಂದಾಪುರ, ಕಥೋಲಿಕ್ ಸಭಾ, ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ಭಾರತ ಜ್ಞಾನ ವಿಜ್ಞಾನ ಸಮಿತಿ, ಡಿವೈಎಫ್ ಐ, ಮಾನವ ಬಂಧುತ್ವ ವೇದಿಕೆ ಕುಂದಾಪುರ, ಮುಸ್ಲಿಂ ಜಮಾತ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ, ಭಾರತ ವಿದ್ಯಾರ್ಥಿ ಫೆಡರೇಶನ್ ಕುಂದಾಪುರ, ದಲಿತ ಹಕ್ಕುಗಳ ಸಮಿತಿ, ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಹಾಗೂ ಸುನ್ನಿ ಯುವಜನಸಂಘ, ಈ ಸಂಘಟನೇಗಳ ಸಂಯುಕ್ತಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದಯ ಗಾಂವ್ಕರ್ ನಿರೂಪಿಸಿದರು. ಜಿಲ್ಲಾ ಸಂಚಾಲಕರು ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕರಾದ ಚಂದ್ರಶೇಖರ ದೇವಾಡಿಗ ವಂದಿಸಿದರು.





















