

ಕೋಟೇಶ್ವರ : ಬೀಜಾಡಿಯಲ್ಲಿ ಮಿತ್ರ ಸಂಗಮ ಸಂಘಟನೆ ಕಳೆದ 29 ವರ್ಷಗಳಿಂದ ನಿರಂತರ ಸಮಾಜಪರ ಚಟುವಟಿಕೆಯ ಮೂಲಕ ಬೆಳಗಿರುವುದು ಸ್ವಾಗತಾರ್ಹವಾಗಿದೆ.ಇದನ್ನು ಇನ್ನೂ ಮುಂದೆಯು ನೂರಾರು ವರ್ಷಗಳ ಕಾಲ ಉಳಿಯುವ ಹಾಗೇ ನೋಡಿಕೊಳ್ಳಬೇಕಾದದ್ದು ಊರಿನವರ ಕರ್ತವ್ಯವಾಗಿದೆ ಎಂದು ಪ್ರಸಂಗಕರ್ತ, ಕಲ್ಮಾಡಿ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪವನ್ ಕಿರಣಕೆರೆ ಹೇಳಿದರು.
ಅವರು ಬೀಜಾಡಿ ಮಿತ್ರಸೌಧ ವಠಾರದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 29ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮಾಜ ಸೇವಕ,ಕೋಟೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರಿಗೆ ಸಂಸ್ಥೆಯ ವತಿಯಿಂದ ಕೊಡಮಾಡುವ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ವಹಿಸಿದ್ದರು. ಇದೇ ಸಂದಭದಲ್ಲಿ ಸಾಧಕರಾದ ಉಡುಪಿ ಜಿಲ್ಲಾ ಶಿಕ್ಷಕ ತರಬೇತಿ ಕೇಂದದ್ರ ನಿವೃತ್ತ ಉಪನ್ಯಾಸಕ ಪ್ರಭಾಕರ ಮಿತ್ಯಾಂತ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪೂಜಾರಿ, ಕುಂಭಾಶಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ, ಕ್ರೀಡಾಪಟುಗಳಾದ ಕು.ಜನನಿ, ಕು.ಅನನ್ಯ, ಯಶಸ್ ವೈ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಏಳು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಎರಡು ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮಹೇಶ್ ಮೊಗವೀರ,ಪ್ರಧಾನ ಕಾರ್ಯದರ್ಶಿ ಗಿರೀಶ್ ಕೆ.ಎಸ್ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಸ್ವಾಗತಿಸಿದರು. ಅನೂಪ್ ಕುಮಾರ್ ಬಿ.ಆರ್ ವಾರ್ಷಿಕ ವರದಿ ವಾಚಿಸಿದರು. ಚಂದ್ರ ಬಿ.ಎನ್ ಸನ್ಮಾನ ಪತ್ರ ಓದಿದರು.ಪ್ರದೀಪ್ ದೇವಾಡಿಗ ಪ್ರತಿಭಾ ಪುಸ್ಕಾರದ ಪಟ್ಟಿ ವಾಚಿಸಿದರು.ಉಪನ್ಯಾಸಕ ಪಾಂಡುರಂಗ ವಂದಿಸಿದರು.
ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಕುಂದಾಪುರದ ಕಲಾ ಸ್ಪೂರ್ತಿ ಹವ್ಯಾಸಿ ನಾಟಕ ತಂಡದ ಸದಸ್ಯರಿಂದ ಕುಂದಗನ್ನಡದ ಹಾಸ್ಯಮಯ ನಗೆ ನಾಟಕ ದೈವ ಸಂಕಲ್ಪ ಜರುಗಿತು.

