

ಬೈಂದೂರು: ಶಿರೂರಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ 77 ನೇ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವ ಹಾಗೂ ದೇಶಭಕ್ತಿಯೊಂದಿಗೆ ಆಚರಿಸಲಾಯಿತು ಜ್ಞಾನದಾ ಶಿಕ್ಷಣ ಟ್ರಸ್ಟ್ (ರಿ) ಶಿರೂರು ಇದರ ಕಾರ್ಯದರ್ಶಿ ಧೀರಜ್ ಆರ್ ಶಿರೂರ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು ನಂತರ ಮಾತನಾಡಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪೂರಕವಾಗಿದೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಲವು ಸಂಸ್ಕೃತಿಗಳ ತವರು ಭಾರತ ಸಂವಿಧಾನವೇ ಭಾರತಕ್ಕೆ ಆಧಾರ ನಮ್ಮ ನಮ್ಮ ಪ್ರತಿಜ್ಞೆಯನ್ನ ಮರೆಯಬಾರದು ಧರ್ಮ,ಮತ, ಜಾತಿ,ಭಾಷೆಗಳ ಅಂತರ ಅಳಿದು ಸಾಮಾಜಿಕ ಮತ್ತು ಆರ್ಥಿಕವಾಗಿ ಮುನ್ನಡೆಯಬೇಕು ನಾವು ಭಾರತೀಯ ಸಂಸ್ಕೃತಿ ಅಭಿಮಾನ ಬೆಳೆಸಿಕೊಂಡು ಆದರ್ಶ ಪ್ರಜೆಗಳಾಗಿ ಸಂವಿಧಾನದ ಗೌರವ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣ. ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಾಭಿಮಾನ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡಾಗ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ದೇಶದ ಪ್ರಜೆಗಳು ತಮ್ಮ ಹಕ್ಕುಗಳನ್ನು ಅರಿತು ಆನಂದಿಸಬೇಕು, ಕರ್ತವ್ಯವನ್ನು ಎಂದು ಮರೆಯಬಾರದು ಧ್ವಜದ ಬಣ್ಣಗಳು ನಮ್ಮ ತ್ಯಾಗ ಶಾಂತಿ ಮತ್ತು ಸಸ್ಯ ಶ್ಯಾಮಲತೆ ಪ್ರಗತಿಗಳ ಸಂಕೇತ ನಮ್ಮಲ್ಲಿರುವ ಭಿನ್ನತೆಯನ್ನು ಗೌರವಿಸಬೇಕು ಆದರೆ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮರೆಯಬಾರದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಸಾರ್ವಭೌಮರು ಇಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾರು ನಡೆದುಕೊಳ್ಳಬಾರದು ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು
ಸಂಸ್ಥೆಯ ಪ್ರಾಂಶುಪಾಲ ಡಾ. ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಖಜಾಂಚಿ ಚಂಪಾ ಆರ್ ಶಿರೂರ್ಕರ್ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದರು
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ವಿದ್ಯಾರ್ಥಿಗಳಾದ ಭುವಿತ್, ಜಾನವಿ ಮತ್ತು ಮಾನ್ಯತಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು
ವಿದ್ಯಾರ್ಥಿನಿಯಾರಾದ ಸೃಜನಿ ಸ್ವಾಗತಿಸಿದರು ಮಾನ್ವಿ ವಂದಿಸಿದರು ಅನನ್ಯ ಕಾರ್ಯಕ್ರಮ ನಿರೂಪಿಸಿದರು
ವಿದ್ಯಾರ್ಥಿಗಳು ಆಕರ್ಷಕ ಡ್ರಿಲ್ ಹಾಗೂ ನೃತ್ಯಗಳನ್ನು ಮನಮುಟ್ಟುವಂತೆ ಪ್ರದರ್ಶಿಸಿದರು.










