

ತಲ್ಲೂರು, ಜನವರಿ 11, 2026: ತಲ್ಲೂರಿನ ಸಂತ ಫ್ರಾನ್ಸಿಸ್ ಆಸ್ಸಿಸಿ ರ್ಚಿನಲ್ಲಿ 2026ರ ಜನವರಿ 11ರಂದು ಸಾಮಾನ್ಯ ವಿಶ್ವಾಸಿಗಳ ದಿನವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಬೆಳಿಗ್ಗೆ 7:30ಕ್ಕೆ ನಡೆದ ದಿವ್ಯ ಬಲಿ ಪೂಜೆಯಿಂದ ಆರಂಭವಾಯಿತು. ಮಂಗಳೂರು ಜೆಪ್ಪು ಸೆಮಿನರಿಯ ಪ್ರಾಧ್ಯಾಪಕರಾದ ವಂದನೀಯ ಫಾ. ಹೆರಾಲ್ಡ್ ಡಿಸೋಜಾ ಅವರು ಪ್ರಧಾನ ಯಾಜಕರಾಗಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಧರ್ಮಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾ ಅವರು ಪೂಜೆಗೆ ಸಹಕರಿಸಿದರು. ಸಾಮಾನ್ಯ ವಿಶ್ವಾಸಿಗಳ ಆಯೋಗದ ಸದಸ್ಯರು ಪ್ರರ್ಥನಾ ವಿಧಿಗಳನ್ನು ನರ್ವಹಿಸಿದರು.
ದಿವ್ಯ ಬಲಿಪೂಜೆಯ ನಂತರ ಉಪಹಾರವನ್ನು ಎರ್ಪಡಿಸಲಾಯಿತು. ಬಳಿಕ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಪಕರಾದ ವಂ। ಫಾ. ಹೆರಾಲ್ಡ್ ಡಿಸೋಜಾ ಸಾಮಾನ್ಯ ವಿಶ್ವಾಸಿಗಳು ತಮ್ಮ ಉತ್ತಮ ಕರ್ಯಗಳ ಮೂಲಕ ಶುಭ ವಾರ್ತೆಯನ್ನು ಹರಡಬೇಕು, ಧರ್ಮಕೇಂದ್ರ, ಕುಟುಂಬ, ವಾಳೆ ಹಾಗೂ ಸಮಾಜದಲ್ಲಿ ಬೆಳಕು ಮತ್ತು ರುಚಿ ನೀಡುವವರಾಗಬೇಕು, ಹಾಗೂ ಸಮಾಜದ ಜನರಿಗೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು. ಸಾಮಾನ್ಯ ವಿಶ್ವಾಸಿಗಳ ಆಯೋಗದ ಸದಸ್ಯರಾಗಿರುವುದರಿಂದ ಕುಟುಂಬ, ವಾಳೆ ಮತ್ತು ಸಮಾಜದ ಸಂಬಂಧಗಳು ಇನ್ನಷ್ಟು ಬಲಗೊಳ್ಳುತ್ತವೆ, ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು. ವಂ। ಫಾ. ಎಡ್ವಿನ್ ಡಿಸೋಜಾ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2026–2028ರ ಅವಧಿಗೆ ಹೊಸದಾಗಿ ಆಯ್ಕೆಯಾದ ಪಾಲನಾ ಮಂಡಳಿಯ ಸದಸ್ಯರನ್ನು ಹೂವಿನ ಗೀಡಗಳನ್ನು ನೀಡಿ ಅಭಿನಂದಿಸಲಾಯಿತು.









































