

ಪುತ್ತೂರು;ದಿನಾಂಕ 28- 12- 2025 ನೇ ಆದಿತ್ಯವಾರ ಸಂತ ಫಿಲೋಮಿನಾ ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್, ದರ್ಬೆ ಪುತ್ತೂರು ಇಲ್ಲಿ ನಿರಂತರ ಪ್ರಕಾಶನ ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಗಜೇಂದ್ರಗಡ ಗದಗ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು ಇವರ ” ಸಖೀ ಸೂಸಿದ ಸೌಗಂಧ ” ಕೃತಿಯ ಲೋಕರ್ಪಣೆ ಮತ್ತು ” ನಿರಂತರ ಸಾಹಿತ್ಯ ಪುರಸ್ಕಾರ” ಅವರ ಕನ್ನಡ ಸಾಹಿತ್ಯಕ್ಕಾಗಿ ಪ್ರಧಾನಿಸಲಾಯಿತು.
ಈ ಕಾರ್ಯಕ್ರಮ ದ ರೂವಾರಿ ಶ್ರೀ ಎ ಎಸ್ ಮಕಾನದಾರ ಇವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ವೀಕ್ಷಾ ಮತ್ತು ಮೈತ್ರಿ ಪ್ರಾರ್ಥನೆ ಹಾಡಿದರು.
ಕಾರ್ಯಕ್ರಮದ ಅತಿಥಿಗಳಲ್ಲಿ ಆಶಯ ಭಾಷಣ ನೀಡಿದಂತಹ
ಶ್ರೀ ವಿ. ಪುರಂದರ ಭಟ್ ಹಿರಿಯ ವಕೀಲರು,ಲೇಖಕರು ಮತ್ತು ಸಂಘಟಕರು ಇವರು ಚೆಂಡೆ ನಿನಾದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೊಡಗಿನ ಹಾಸ್ಯ ಚುಟುಕು ಕವಿ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿಯಾದ ಹಿರಿಯರು ಶ್ರೀ ಹಾ.ತಿ.ಜಯಪ್ರಕಾಶ್ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು .
ಅನಾರ್ಕಲಿ ಸಲೀಂ, ಮಂಡ್ಯ
ವಿಶ್ವನಾಥ ಕುಲಾಲ್ ಪುತ್ತೂರ್
ಜೂಲಿಯೆಟ್ ಮೋರಸ್ ಮಂಗಳೂರು
ಜಯಾನಂದ ಪೆರಾಜೆ ಬಂಟ್ವಾಳ
ಪದ್ಮನಾಭ ಪೂಜಾರಿ ಬಂಟ್ವಾಳ
ಅಮೃತ ರಶ್ಮಿ ಫೆನಾರ್ಂಡಿಸ್ ಅರ್ವಾ
ಅಬ್ದುಲ್ ಸಮದ್ ಬಾವಾ ಪುತ್ತೂರ್
ಮರಿಯಾ ಪಿಂಟೊ ಮಂಗಳೂರು
ಬನವಾಸಿ ಫೆಲಿಕ್ಸ್
ಸವಿತಾ ಕರ್ಕೇರಾ,
ಸುರೇಶ್ ಬಿಳಿಯೂರು ಹೀಗೆ 10 ಕ್ಕಿಂತ ಮಿಕ್ಕಿ ಕವಿಗಳು ತಮ್ಮ ವಿಶಿಷ್ಟ ಶೈಲಿಯ ಚುಟುಕುಗಳನ್ನು ಓದಿ ಜನರ ಮನಸ್ಸನ್ನು ಮುದಗೊಳಿಸಿದರು.
ವಿಟ್ಲ ಅರಸು ಮನೆತನದ ಕುಡಿ ,ಉಪನ್ಯಾಸಕರು ಶ್ರೀ ರಾಜಾರಾಮ್ ವರ್ಮಾ ವಿಟ್ಲ ಇವರು ರಾಜ್ಯ ಮಟ್ಟದ ಬಹುಭಾಷಾ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಉತ್ತಮ ಸಂದೇಶವನ್ನು ನೀಡಿ ತಮ್ಮ ಕವಿತೆಯನ್ನ ವಾಚಿಸಿದರು ಇಲ್ಲಿ ವಿವಿಧ ಜಿಲ್ಲೆಗಳಾದ ಧಾರವಾಡ .ಬೆಂಗಳೂರು,ಕೊಡಗು.ಗದಗ್.ಶಿವಮೊಗ್ಗ.ಉಡುಪಿ ಮಂಗಳೂರಿನಿಂದ ಬಂದ ಅಲ್ಬುಕರ್ಕ್ ರವರ ಅಭಿಮಾನಿ ಕವಿ ಮಿತ್ರರಾದ ಶಾಂತಾ ಡಾ.ಪುತ್ತೂರು,(ತುಳು) ಡಾ.ರೇಣುಕಾ ತಾಯಿ ಸಂತಬಾ, (ಹಿಂದಿ)ಧಾರವಾಡ
ದಯಾ ವಿಕ್ಟರ್ ಲೋಬೊ (ಕೊಂಕಣಿ)
ಗಣೇಶ್ ಪವಾರ್ ಗದಗ್(ಪಟ್ಟಿಗಾರ)
ಮನ್ಸೂರ್ ಮುಲ್ಕಿ(ಕನ್ನಡ)
ಎಡ್ವರ್ಡ್ ಲೋಬೊ ತೊಕ್ಕೊಟ್ಟು(ಬ್ಯಾರಿ)
ಮೂಗಪ್ಪ ಗಾಳೇರ ವಿಜಯನಗರ( ಕನ್ನಡ)
ಹೆಚ್ಚು ಭೀಮರಾವ್ ವಾಷ್ಟರ್(ಮರಾಠಿ)
ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು( ಕೊಂಕಣಿ) ಹೀಗೆ ಹತ್ತಕ್ಕಿಂತ ಹೆಚ್ಚಿನ ಕವಿವರ್ಯರು ಕನ್ನಡ ,ಕೊಂಕಣಿ.ತುಳು.ಹಿಂದಿ .ಬ್ಯಾರಿ.ಪಟ್ಟೀ ಗಾರ, ಮರಾಠಿ ಭಾಷೆಯ ಕವಿತೆ ವಾಚನ ಮಾಡಿದರು.
ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಸಾಹಿತಿಗಳಿಗೆ ನಮ್ಮ ಹಿರಿಯ ಕವಿ ಶಿವರಾಮ ಕಾರಂತರ ಕರ್ಮಭೂಮಿಯಲ್ಲಿ ಪ್ರೋತ್ಸಾಹ ದೊರೆಯುವ ಕೆಲಸ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ನುಡಿದರು.
ಮಾಯಿದೆ ದೇವುಸ್ ಚರ್ಚ್ ಪುತ್ತೂರು ಇಲ್ಲಿಯ ಪ್ರಧಾನ ಧರ್ಮ ಗುರುಗಳು ಅತೀ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಶುಭ ಶಂಸನೆ ಯ ಮಾತುಗಳನ್ನಾಡಿ ಒತ್ತಡದ ಜೀವನದ ನಡುವೆಯೂ ಬೇರೆ ಬೇರೆ ಅಭಿರುಚಿಗಳನ್ನು ರೂಡಿಸಿಕೊಂಡರೆ ಜೀವನಕ್ಕೆ ಅರ್ಥ ಬರುತ್ತದೆ.ನಮ್ಮ ಶಾಲೆಯ ಶಿಕ್ಷಕಿಯ ಸಾಹಿತ್ಯದ ಸೇವೆ ಗುರುತಿಸಿ ಗದಗ್ ನಿಂದ ಇಲ್ಲಿ ಬಂದು ಪುರಸ್ಕಾರ ಕೊಡುವುದು ಹೆಮ್ಮೆಯ ವಿಷಯ ಎಂದು ಕೃತಜ್ಞತೆ ಸಲ್ಲಿಸಿದರು . ಮುಂದೆಯೂ ಇನ್ನೂ ಹೆಚ್ಚಿನ ಕೃತಿಗಳು ಬರಲೆಂದು ಶಿಕ್ಷಕಿಗೆ ಶುಭ ಹಾರೈಸಿದರು.
ವೇದಿಕೆ ಮೇಲೆ ಇದ್ದ ಗಣ್ಯರು ಹಾಗೂ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ರವರ ಮಧ್ಯಸ್ಥಿಕೆಯಲ್ಲಿ ಶ್ರೀ ಮುಹಮ್ಮದ್ ಬಡ್ದೂರು ಬಹುಭಾಷಾ ಕವಿ, ಚಲನಚಿತ್ರ ನಟರು, ಮಂಗಳೂರು ಇವರು
ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ರವರ ‘ ಸಖಿ ಸೂಸಿದ ಸೌಗಂಧ”
ಕೃತಿಯ ಲೋಕಾರ್ಪಣೆಗೈದರು.ಶ್ರೀ ಮುಹಮ್ಮದ್ ಬಡ್ಡೂರು ರವರು ಮಾತನಾಡಿ”ಪ್ರತಿಯೊಂದು ಸಾಹಿತ್ಯದ ರೂಪುರೇಷೆ ಹಳೆಯದೆ ಆದರೆ ಅದನ್ನು ಬರೆಯುವ ರೀತಿಯಲ್ಲಿ ಹೊಸ ಶೈಲಿಯನ್ನು ಹೊಸತನ ಕಾಣಬಹುದು.ಈ ನಿಟ್ಟಿನಲ್ಲಿ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ರವರ ಚುಟುಕು ಕೃತಿ ವಿಶಿಷ್ಟತೆಯನ್ನು ಪಡೆದಿದೆ ಎಂದು ಲೇಖಕಿಗೆ ಶುಭ ಹಾರೈಸಿದರು.
ಅದೇ ರೀತಿ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರ್ ಇವರಿಗೆ ನಿರಂತರ ಸಾಹಿತ್ಯ ಪುರಸ್ಕಾರ ನಿರಂತರ ಪ್ರಕಾಶನ ಗದಗ್ ನ ಪ್ರಕಾಶಕರು ,ನಿವೃತ್ತ ನ್ಯಾಯಾಂಗ ಇಲಾಖೆಯ ಉದ್ಯೋಗಿ ಶ್ರೀ ಎ.ಎಸ್ ಮಕಾನದಾರ ರಿಂದ ಕೊಡಮಾಡುವ ಪುರಸ್ಕಾರವನ್ನು ಪ್ರಧಾನಿಸಲಾಯಿತು.
ಶ್ರೀಮತಿ ಕುಮುದಾಕ್ಷಿ ವಿ ಸಂತ. ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಕೃತಿಕಾರರ ಪರಿಚಯ ನೀಡಿ, ಡಾ. ಹಸೀನಾ ಹೆಚ್. ಖಾದ್ರಿ ಉಪನ್ಯಾಸಕರು ಕವಿಗಳು ಶಿವಮೊಗ್ಗ ಇವರು ಕೃತಿ ಪರಿಚಯ ನೀಡಿದರು. ಪ್ರಶಸ್ತಿ ಪುರಸ್ಕಾರದ ಕುರಿತು ಡಾ. ರೇಣುಕಾ ತಾಯಿ ಸಂತಬಾ,ಹುಬ್ಬಳ್ಳಿ ಇವರು ಮಾತನಾಡಿದರು.
ಶ್ರೀ ಉಮೇಶ್ ನಾಯಕ ಅಧ್ಯಕ್ಷರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರು ಮಾತನಾಡಿ”. “ಅತ್ಯಂತ ಸುಂದರಮಯ ವಾದಂತಹ, ಶೃಂಗಾರಮಯವಾದಂತಹ ಈ ಒಂದು ಚುಟುಕು ಕವಿತೆಯ ಪ್ರತಿಯೊಂದು ಚುಟುಕಿನಲ್ಲೂ ಫ್ಲಾವ್ಯ ಅವರ ವ್ಯಕ್ತಿತ್ವ ಗೋಚರವಾಗುತ್ತದೆ ಮತ್ತು ಒಂದು ಚುಟುಕನ್ನು ಓದಿದರೆ ಅದು 408ನೇ ಚುಟುಕಿನಲ್ಲಿ ನಮ್ಮನ್ನು ತಂದು ನಿಲ್ಲಿಸುತ್ತದೆ.ಎಂದು ಸಖಿ ಸೂಸಿದ ಸೌಗಂಧ ಕೃತಿಯ ವಿಮರ್ಶೆಯನ್ನು ಮಾಡಿ ಶುಭನುಡಿದರು. ಕವಯಿತ್ರಿ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ಮಾತನಾಡಿ ಆಗಮಿಸಿದ ಎಲ್ಲರನ್ನು ಕೃತಜ್ಞತಾ ಭಾವದಿಂದ ಸ್ಮರಿಸಿದರು. ಸಖಿ ಯಾರೆಂದು ಹಲವರ ಮನಸ್ದಿನಲ್ಲಿದ್ದ ಗೊಂದಲಗಳಿಗೆ ಉತ್ತರವಾಗಿ ಈ ವೇದಿಕೆ ಸಾಕ್ಷಿಯಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಶ್ರೀ ಎ ಎಸ್ ಮಕಾನದಾರ ಇವರು ತಮ್ಮ ಅಧ್ಯಕ್ಷೀಯ ಭಾಷಣಗೈದರು.ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರುಗಳೆಲ್ಲರೂ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕುಮಾರಿ ರೆನಿಷಾ ಡಿಸೋಜಾ ಮತ್ತು ರಿಶಿತಾ ತಂಡದವರಿಂದ ನೃತ್ಯ,
ಸಂತ .ಅಲೋಶಿಯಸ್ ಸ್ವಾಯತ್ತ ವಿಶ್ವವಿದ್ಯಾಲಯ ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರ ಕೊಂಕಣಿ ವಿಭಾಗದ ವಿದ್ಯಾರ್ಥಿಗಳು ಪದ್ಯ ಬಂಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು .ನೆರೆದ ಸಭಿಕರೂ ಅವರೊಂದಿಗೆ ಕೂಡಿ ಹಾಡಿ ಕಾರ್ಯಕ್ರಮಕ್ಕೆ ಕಳೆ ತಂದರು. ಒಟ್ಟಾರೆ ಕಾರ್ಯಕ್ರಮ ವು ಹಬ್ಬದ ಕಳೆಯನ್ನು ತಂದಂತೆ ಇತ್ತು. ಅಲ್ಬುಕರ್ಕ್ ರವರ ಸಹೋದ್ಯೋಗಿಗಳು. ಸಹಪಾಠಿಗಳು.ವಿದ್ಯಾರ್ಥಿಗಳು ಮತ್ತು ಅವರ ಪೋಷಕರು.ಬಂಧು ಮಿತ್ರರು.ಆತ್ಮೀಯರು ಸಂತೋಷ ವನ್ನು ದ್ವಿಗುಣಗೊಳಿಸಿದರು.
ಪ್ರಶಸ್ತಿ ಸ್ವೀಕೃತೆ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರ್ ರವರ ತಾಯಿ ರೀಟಾ ತೋರಸ್
ಪತಿ ಸಿಪ್ರಿಯನ್ ಮೊರಾಸ್
ಅಕ್ಕ ಮೋನಿಕಾ ವೀಣಾ ಅಲ್ಬುಕರ್ಕ್
ಬಾವಾ ಸೂರಜ್ ನೊರೊನ್ಹಾ
ತಮ್ಮ ಜೀವನ್ ಅಲ್ಬುಕರ್ಕ್
ಮಗಂದಿರು: ಕೆಲ್ವಿನ್ ಫೆಭಿಯನ್ಮೊರಾಸ್
ವಿಯೋನ್ ಕೆಲೊಲ್ ಮೊರಾಸ್
ಕಾರ್ಯಕ್ರಮ ದ ಯಶಸ್ವಿಗಾಗಿ ಶ್ರಮಿಸಿದರು. ಅಲ್ಬುಕರ್ಕ್ ರವರ ಕುಟುಂಬಸ್ಥರಿಂದ ಇವರಿಗೆ ಗೌರವಾರ್ಪಣೆಯನ್ನು ನೀಡಲಾಯಿತು.ಸಹಪಾಠಿ ,ಉಪನ್ಯಾಸಕರು ಪದವಿ ಪೂರ್ವ ಕಾಲೇಜು ಬೆಳ್ತಂಗಡಿ
ಡಾ. ಅಮೃತ ರಶ್ಮಿ ಫೆರ್ನಾಂಡಿಸ್ ಇವರು ಸ್ವಾಗತಿಸಿ ಮಾಯ್ ದೆ ದೇವುಸ್ ಶಾಲಾ ಶಿಕ್ಷಕಿ ಸೌಮ್ಯ ಟೀ ಪುತ್ತೂರು ಇವರು ವಂದನಾರ್ಪಣೆಗೈದರು ನಿರೂಪಣ ಕಾರ್ಯಕ್ರಮವನ್ನು ಶ್ರೀಮತಿ ಕುಮದಾಕ್ಷಿ ವಿ ಪುತ್ತೂರು ವಹಿಸಿದ್ದರು.
ಬೆಳಗಿನ ಉಪಹಾರ ದೊಂದಿಗೆ ಪ್ರಾರಂಭವಾದ ಈ ದಿನವೂ ಮಧ್ಯಾಹ್ನದ ಸಹಭೋಜನದೊಂದಿಗೆ ಕೊನೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ನನ್ನ ಆತ್ಮೀಯರು ಉಳ್ಳಾಲ ಪೋಲಿಸ್ ಠಾಣೆಯ ASI ಹೃದಯ ಕವಿ ಮನ್ಸೂರ್ ಮುಲ್ಕಿ ಮತ್ತು ಇತಿಹಾಸ ಪ್ರಾದ್ಯಾಪಕರು ಶಿವಮೊಗ್ಗ ಡಾ ಹಸೀನಾ ಖಾದ್ರಿ ಸಹೃದಯೊಂದಿಗೆ.

ನನ್ನ ಕುಟುಂಬಸ್ಥರಿಂದ ಅನಿರೀಕ್ಷಿತ ಸನ್ಮಾನ..ನನಗಿಂತ ಅವರ ಸಂಭ್ರಮ ಮಿಗಿಲಾಗಿತ್ತು.

ನನ್ನ ಅಭಿಮಾನಿ ಸಂತ ಎಲೋಶಿಯಸ್ ಕಾಲೇಜು ಮಂಗಳೂರಿನ ವಿದ್ಯಾರ್ಥಿಗಳಿಂದ ಪದ್ಯಬಂಡಿ…ಕಾರ್ಯಕ್ರಮದಲ್ಲಿ ನೆರೆದವರು ಜೊತೆಯಾಗಿ ಹಾಡಿ ಸಂಭ್ರಮಿಸಿದರು… ಮರೆಯಾಗದ ಹಬ್ವದ ವಾತಾವರಣ

ನನ್ನ ಕುಟುಂಬದ ಧರ್ಮಗುರು ಅಣ್ಣ ಫಾದರ್ ಹೆರಿ ಡಿಸೋಜರಿಂದ ಶುಭಾಶಗಳು

ಪ್ರೀತಿಯ ಶಿಷ್ಯರಿಂದ ನೃತ್ಯ

ಎ ಎಸ್ ಮಕಾನದಾರ ಸರ್ ನನ್ನ ಮಾರ್ಗದರ್ಶಕರು.ಮುಖತಃ ಮೊದಲ ಭೇಟಿ

ನನ್ನ ಆತ್ಮೀಯ ಸಹದ್ಯೋಗಿ ಸೌಮ್ಯ ಟಿ ಯವರಿಂದ ವಂದನಾರ್ಪಣೆ

ಹಾಸ್ಯ ಚುಟುಕು ಕವಿ.ಹಾ.ತಿ ಕೊಡಗು ನನ್ನ ಆತ್ಮೀಯರು

ನನ್ನ ಸಹಪಾಠಿಯಿಂದ ನೆರೆದವರಿಗೆ ಸ್ವಾಗತ

ನನ್ನ ಮುದ್ದು ಮಕ್ಕಳಿಂದ ಪ್ರಾರ್ಥನೆ

ನನ್ನ ಆತ್ಮೀಯ ಗೆಳತಿ ಶಿಕ್ಷಕಿಯಿಂದ ಕಾರ್ಯಕ್ರಮ ನಿರ್ವಹಣೆ

ಮಾನ್ಯ ಹಿರಿಯ ವಕೀಲರು ಸಾಹಿತಿಗಳು ಶ್ರೀ ಬಿ ಪುರಂದರ ಭಟ್ ರವರಿಂದ ಆಶಯ ನುಡಿಗಳು


