

ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಬೆಳೆಯುವ ಬೆಳೆಗಳಿಗೆ ಯಾವ ರೀತಿಯಲ್ಲಿ ಕೀಟನಾಶಕಗಳನ್ನು ಸಿಂಪಡಣೆ ಮಾಡಬೇಕು ಎಂಬುದರ ಬಗ್ಗೆ ಹೊಗಳಗೆರೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ/ಬಿ. ಆಂಜನೇಯರೆಡ್ಡಿ ಮಾಹಿತಿ ನೀಡಿದರು.
ಪಟ್ಟಣದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ರೈತ ದಿನಚಾರಣೆಗೆ ಚಾಲನೆ ನೀಡಿ ಮಾತನಾಡಿ ಸಮಗ್ರ ಕೃಷಿ ಪದ್ದತಿ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ.ಮಹೇಶ್ಬಾಬು ಮಾತನಾಡಿ ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ವಿಸ್ತರಾವಾಗಿ ತಿಳಿಸುತ್ತಾ, ಸರ್ಕಾರ ಸೌಲಭ್ಯಗಳನ್ನು ಅರ್ಹ ಅಭ್ಯರ್ಥಿಗಳು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ನೈಸರ್ಗಿಕ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.ರೈತರು ತಾವು ಬೆಳೆಯುತ್ತಿರುವ ಬೆಳೆಗಳ ಬಗ್ಗೆ ಇಲಾಖೆಯ ಸಲಹೆ ಪಡೆದುಕೊಂಡು ಹೆಚ್ಚಿನ ರೀತಿಯಲ್ಲಿ ಫಸಲು ಪಡೆದುಕೊಂಡು ಆರ್ಥಿಕ ಸಭಲರಾಗಬೇಕು ಎಂದು ಸಲಹೆ ನೀಡಿದರು.
ಮಾವು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ರೈತಸಂಘ ರಾಜ್ಯ ಉಪಾಧ್ಯಕ್ಷ ದಳಸನೂರು ವೀರಭದ್ರಸ್ವಾಮಿ, ರೈತ ಮುಖಂಡರಾದ ಚಲ್ದಿಗಾನಹಳ್ಳಿ ವಿ.ಪ್ರಭಾಕರಗೌಡ ಮಾತನಾಡಿದರು.
ಈ ಸಮಯದಲ್ಲಿ ಪ್ರಗತಿಪರ 10 ರೈತರನ್ನ ಸನ್ಮಾನಿಸಿ ಗೌರವಿಸಿ, ಸನ್ಮಾನಿಸಲಾಯಿತು. ಕೃಷಿ ಪರಿಕರ ಮಾರಟಗಾರರ ಅಧ್ಯಕ್ಷ ನೀಲಟೂರು ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೆಶಕ ವೆಂಕಟರೆಡ್ಡಿ, ರೈತ ಸಂಘದ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಮಾಸ್ತೇನಹಳ್ಳಿ ಬಿ.ನಾರಾಯಣಸ್ವಾಮಿ, ಯಲವಕುಂಟೆ ಬೈರಾರೆಡ್ಡಿ, ಸಹಾಯಕ ತೋಟಗಾರಿಕೆ ಅಧಿಕಾರಿ ನವೀನ್ ಕುಮಾರ್, ತಾಲೂಕು ತಾಂತ್ರಿಕ ವ್ಯವಸ್ಥಾಪಕ ಸುರೇಶ್, ಕೃಷಿ ಅಧಿಕಾರಿಗಳಾದ ಈಶ್ವರ್ , ನಳಿನಾಕ್ಷಿ,ಬಿ.ರಘು, ಕೃಷಿ ಇಲಾಖೆ ಸಿಬ್ಬಂದಿ ಶಾಂತರಾಜ್, ಪ್ರಾಂತ ರೈತಸಂಘದ ಜಿಲ್ಲಾ ಪ್ರದಾನಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.


