

ಶ್ರೀನಿವಾಸಪುರ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕೀಯರ ಕಾಲೇಜು ವತಿಯಿಂದ ಶನಿವಾರ ತಾಲೂಕು ಆರೋಗ್ಯ ಕೇಂದ್ರ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಲ್ಸ್ ಪೋಲಿಯೋ ಲಸಿಕಾ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ 16 ಸಾವಿರ ಮೇಲ್ಪಟ್ಟು ಮಕ್ಕಳಿಗೆ ಇದ್ದು, 4 ದಿನಗಳ ಕಾಲ ಪಲ್ಸ್ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು 0 ಯಿಂದ 5 ವರ್ಷ ಮಗುವಿಗೆ ಎರಡು ಹನಿ ಲಸಿಕೆಯನ್ನು ಹಾಕುವುದರ ಮೂಲಕ ಯಶಸ್ವಿಗೊಳಿಸಲು ಈಗಾಗಲೇ ಟಾಸ್ಕ್ ಫೋರ್ಸ್ನ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿವಿಧ ರೂಪರೇಷಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟಿಎಚ್ಒ ಮಹ್ಮದ್ಶರೀಫ್ ಮಾಹಿತಿ ನೀಡಿದರು. ಉಪಪ್ರಾಂಶುಪಾಲ ಶ್ರೀಧರ್, ಬಿಐಇಆರ್ಟಿ ಜಿ.ವಿ.ಚಂದ್ರಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ ಆಂಜಲಮ್ಮ ಇದ್ದರು.

