

ಕುಂದಾಪುರ,ನ.4: “ನನ್ನ ಕಿರಿ ಸಹೋದರ ಸಹೋದರರಿಯರಿಗೆ ನೀವು ಎನು ಮಾಡುತ್ತೀರೊ, ಅದನ್ನು ನನಗೆ ಮಾಡಿದಂತೆ” ಎಂಬುದು ಈ ಹಬ್ಬದ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನ ವಾರ್ಷಿಕ ಮಹಾಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ನವೆಂಬರ್ 4 ರಂದು ಆಚರಿಸಲಾಯಿತು.
ಬಲಿದಾನದ ನೇತ್ರತ್ವವನ್ನು ಋಷಿವನದ ನಿರ್ದೇಶಕರಾದ ವಂ।ಫಾ। ಡೊಮಿನಿಕ್ ವಾಜ್ ವಹಿಸಿಕೊಂಡು ತಮ್ಮ ಪ್ರವಚನದಲ್ಲಿ, ಈ ಇಗರ್ಜಿ ಸಂತ ಅಂತೋನಿಯವರಿಗೆ ಸಮರ್ಪಿಸಲ್ಪಟ್ಟಿದ್ದು, ಸಂತ ಅಂತೋನಿಯವರಿಗೆ ಬಡಬಗ್ಗರ ಮೇಲೆ ಬಹಳ ಪ್ರೀತಿ ಇದ್ದವರು, ಅವರು ಮಾತಿನಲ್ಲಿ ಅಲ್ಲದೆ ಬಡವರನ್ನು, ಅನಾಥರನ್ನು, ಕಶ್ಟದಲ್ಲಿದ್ದವರನ್ನು, ತುಂಬ ಸಹಾಯ ಮಾಡಿದವರು, ನಾವು ಕೂಡ ಬರೇ ಪ್ರಾರ್ಥನೆ ಮಾಡದೆ, ಅದರಂತೆ ನಮ್ಮ ಅಸಕ್ತ ಸಹೋದರ ಸಹೋದರರಿಯರಿಗೆ ಬಡವರಲ್ಲಿ ಮಮತೆಯುಳ್ಳವರಾಗಿ ಸಹಾಯ ಮಾಡಬೇಕು.
ನಾವು ಸಹಾಯ ಮಾಡಬೇಕು ಮಾಡುತ್ತೀರಬೇಕು. ನಮ್ಮಲ್ಲಿ ಆಸ್ತಿ, ಸಂಪತ್ತು, ಉಣ್ಣಲು ತಿನ್ನಲು ಇದ್ದರೂ, ಸಮಾಧಾನ ಸಂತೋಷ ನಮ್ಮಲ್ಲಿ ಇರುವುದಿಲ್ಲ, ಕಶ್ಟದಲ್ಲಿದ್ದವರಿಗೆ, ಅನಾಥರಿಗೆ ಅಸಹಾಯಕರಿಗೆ, ಸಹಾಯ ಮಾಡಿದಲ್ಲಿ, ನೀಜವಾದ ಸಮಾಧಾನ ಸಂತೋಷ ಸಿಗುತ್ತೆ. ನಾವು ಹಿಂದುಳಿದವರನ್ನು ಜೊತೆಗೆ ಕರೆದುಕೊಂಡು ದೇವರ ಸಾಮ್ರಾಜ್ಯದೆಡೆ ಸಾಗಬೇಕು’’ ಎಂದು ಸಂದೇಶ ನೀಡಿದರು.
“ಸಂಭ್ರಮದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನರಾದ ಅ|ವಂ| ಪೌಲ್ ರೇಗೊ ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಪ್ರವೀಣ್ ಪಿಂಟೊ ಬಲಿದಾನದಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದರು. ಇದೇ ದಿನ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಚರ್ಚಿನ ಪರವಾಗಿ ಶುಭ ಕೋರಲಾಯಿತು.
ಈ ಹಬ್ಬದ ಬಲಿಪೂಜೆಯಲ್ಲಿ ಫಾ।ಜೋ ತಾವ್ರೊ, ಎಪಿಸ್ಕೊಪಲ್ ವಿಗಾರ್, ಉಡುಪಿ ಧರ್ಮಪ್ರಾಂತ್ಯ, ಈ ಹಿಂದೆ ಸೇವೆ ಸಲ್ಲಿಸಿದ ಫಾ।ಸಿರಿಲ್ ಮಿನೆಜೆಸ್, ಕುಂದಾಪುರ ಸಂತ ಜುಜೆ ವಾಜ್ ವಲಯದ ಎಲ್ಲಾ ಇಗರ್ಜಿಯ ಧರ್ಮಗುರುಗಳು, ಕಾರ್ಮೆಲ್ ಸಭೆಯ ಅತಿಥಿ ಧರ್ಮಗುರುಗಳು, ಕಟ್ಕರೆ ಬಾಲ ಯೇಸುವಿನ ಆಶ್ರಮದ ಧರ್ಮಗುರುಗಳು, ಚರ್ಚಿನ ಉಪಾಧ್ಯಕ್ಷ, ಸಂತೋಷ್ ಮಾರ್ಟಿಸ್, ಕಾರ್ಯದರ್ಶಿ, ಮರಿಯಾ ಮಸ್ಕರೇನ್ಹಾಸ್ ಆಯೋಗಗಳ ಸಂಯೋಜಕಿ ಲೀನಾ ಡಿಮೆಲ್ಲೊ ಮತ್ತು ಧರ್ಮಭಗಿನಿಯರು ಹಾಗೂ ಚರ್ಚಿನ ಭಕ್ತಾಧಿಗಳು ಬಲಿದಾನದಲ್ಲಿ ಭಾಗಿಯಾಗಿದ್ದರು.




































































































