

ಪಡುಕೋಣೆ; ದಿನಾಂಕ 7.12.2025 ರಂದು ಸಂತ ಅಂತೋನಿ ಚರ್ಚಿನಲ್ಲಿ ಸಮುದಾಯ ದಿನಾಚರಣೆ ಹಾಗೂ ಅಮಲೋದ್ಭವಿ ಮಾತೆಯ ಹಬ್ಬದ ದಿನ ವನ್ನು ತುಂಬಾ ಆಚರಿಸಲಾಯಿತು. ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ಹಾಗೂ ಅತಿಥಿಗಳಾಗಿ ಆಗಮಿಸಿದ ಬೈಂದೂರು ಚರ್ಚಿನ ಸಹಾಯಕ ಗುರುಗಳಾದ ಜೆಜ್ವಿತ್ ವಂದನೀಯ ಫಾ! ಪ್ರಥ್ವಿ ಮತ್ತು ಸ್ಥಳೀಯ ಕ್ರೈಸ್ತ ಭಕ್ತರ ಜೊತೆಗೂಡಿ ಅಮಲೋದ್ಭವಿ ಮಾತೆಯ ಪಲ್ಲಕ್ಕಿಯಲ್ಲಿದ್ದ ವಿಗ್ರಹದ ಮೆರವಣಿಗೆಯ ಮೂಲಕ ಚರ್ಚಿನ ಒಳಗಡೆ ಪ್ರವೇಶಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಬಲಿಪೂಜೆಯ ಕೊನೆಯ ಹಂತದಲ್ಲಿ ಭಕ್ತಾಧಿಗಳ ವಾಹನಗಳನ್ನು ಗುರುಗಳ್ಳಿಬ್ಬರು ಆಶೀರ್ವಾದಿಸಿದರು.
ಅಂದು ಅಪರಾಹ್ನ 5.00 ಗಂಟೆಗೆ ಆ ದಿನದ ಸಭಾಕಾರ್ಯ ಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ, ಕುಂದಾಪುರ ವಲಯದ ಹೋಲಿ ರೋಜರಿ ಮಾತೆಯ ಚರ್ಚಿನ ಪ್ರಧಾನ ಗುರುಗಳಾದ ಅತೀ ವಂದನೀಯ ಫಾ| ಪಾವ್ಲ್ ರೇಗೊರವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, “ಚರ್ಚಿನ ಈ ಸಮುದಾಯವು ಒಂದೇ ಹೃದಯ, ಒಂದೇ ಮನಸ್ಸಿನಿಂದ ಮುನ್ನೆಡೆಯುವ, ಪವಿತ್ರ ಸಭೆಯ ಸಮುದಾಯವಾಗಿದೆ, ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ,ಶುಭಾಶಯವನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷ ರಾದ ವಂದನೀಯ ಫಾ| ಪ್ರಾನ್ಸಿಸ್ ಕರ್ನೆಲಿಯೊರವರು,ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಚರ್ಚಿನ ಜನರ ಪ್ರೀತಿ,ವಿಶ್ವಾಸ,ಇಲ್ಲಿಯ ಒಗ್ಗಟ್ಟೇ, ನನಗೆ ಪ್ರತಿ ಕಾರ್ಯದಲ್ಲಿ ಸ್ಫೂರ್ತಿ ಎಂದು ತಮ್ಮ ಮನದಾಳದ ಮಾತಿನಲ್ಲಿ ನುಡಿದರು.ಸಂತ.ಅಂತೋನಿ ಕಾನ್ವೆಂಟಿನ್ ಸುಪೀರಿಯರ್ ಸಿ.ಪಾವನ, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪ್ರಭು ಕೆನಡಿ ಪಿರೇರಾ, ಕಾರ್ಯದರ್ಶಿ ಅಲೆಕ್ಸ್ ಎಂಟನಿ ಡಿ’ಸೋಜ, ಸರ್ವ ಅಯೋಗಾದ ಮೇಲ್ವಿಚಾರಕರಾದ ವಿನ್ಸೆಂಟ್ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು ಆಟೋಟ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ನೀಡಿ ಸನ್ಮಾನಿಸಿದರು. ಹೆಚ್ಚಿನ ಧನ ಸಹಾಯ ನೀಡಿದ ದಾನಿಗಳಾದ ವೆಲೆನ್ಸಿಯಸ್ ಪಿರೇರಾ, ಸ್ಟೀವನ್ ಗೊನ್ಸಾಲೀಸ್ ಗ್ರೇಶನ್ ಪಾಯಸ್ ಹಾಗೂ ಇತರ ದಾನಿಗಳನ್ನು ಸನ್ಮಾನಿಸಲಾಯಿತು.ಸಂತ ಅಂತೋನಿ ಚರ್ಚಿನ 9 ವಾಳೆಗಳ, ಪ್ರತಿಯೊಬ್ಬ ಸದಸ್ಯರು ಒಗ್ಗಟ್ಟಿನಿಂದ ವಿವಿಧ ರೀತಿಯ ಚಟುವಟಿಕೆಗಳಾದ ನೃತ್ಯ, ಕಿರುಹಾಸ್ಯಮಯ ನಾಟಕ,ಇತ್ಯಾದಿಗಳನ್ನು ಪ್ರದರ್ಶನ ನೀಡಿದರು. ಭೋಜನನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

















