

ಉರ್ವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ವಿವಿದ ಕ್ಲಬ್ಗಳ ಸಹಯೋಗದಲ್ಲಿ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಉತ್ತೇಜಿಸಲು ಕಲಿಕೆಯ ಅನುಭವವನ್ನು ವಿಸ್ತರಿಸಲು ಮತ್ತು ತಂಡ ಭಾವವನ್ನು ಬೆಳೆಸುವುದನ್ನು ಉದ್ದೇಶವಾಗಿಸಿ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಈ ಪ್ರದರ್ಶನವನ್ನು ಗಣೇಶ್ ಸೋಮಯಾಜಿಯವರು ಉದ್ಛಾಟಿಸಿ ಆಶೀರ್ವದಿಸಿದರು. ಮುಖ್ಯ ಅತಿಥಿಯಾಗಿ ಲೇಡಿಹಿಲ್ ಆಂಗ್ಲ ಮಾಧ್ಯಮ ಶಾಲೆ (IಅSಇ) ಮುಖ್ಯೋಪಾಧ್ಯಾಯಿನಿ ಸಿಸ್ಟ್ರ್ ಜೆನಿಫರ್ ಮೊರಾಸ್ (ಂ ಅ) ವಹಿಸಿ, ಅತಿಥಿಗಳಾಗಿ ಶಾಲಾ ಸಂಚಾಲಕರಾದ ರೆ.ಫಾ. ಬೆಂಜಮಿನ್ ಪಿಂಟೊ ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಗಣೇಶ್ ಸೋಮಯಾಜಿ, ಚರ್ಚ್ ಆಡಳಿತ ಮಂಡಳಿಯ ನಿರ್ಗಮನ ಉಪಾಧ್ಯಕ್ಷರಾದ ಲಾಯ್ಡ್ ಲೋಬೊ, ಆಗಮನ ಉಪಾಧ್ಯಕ್ಷರಾದ ಮೇಕ್ಸಿಂ ಕ್ಯಾಸ್ಟಾಲಿನೊ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀಮತಿ ಪುಷ್ಪಾಂಜಲಿ, ಹಿರಿಯ ಶಿಕ್ಷಕಿಯಾರಾದ ಲವೀನ ಪಿಂಟೊ, ಲವೀನ ಡಿಕುನ್ಹಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶಿಕ್ಷಕಿ ಸೋನಿಯಾ ಸಲ್ಡಾನ ನಿರೂಪಿಸಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಅಲೋಶಿಯಸ್ ಡಿಸೋಜ ಸ್ವಾಗತಿಸಿ, ಶಾಲಾ ನಾಯಕಿ ಸುರಭಿ ಪಿ ಗಟ್ಟಿ ಧನ್ಯವಾದ ಸಮರ್ಪಿಸಿದರು.























