

ಕುಂದಾಪುರ,ನ,29; ನ. 28 ರಂದು ನಡೆದ ಪ್ರತಿಷ್ಠಿತ ಕುಂದಾಪುರದ ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ ನಡೆಯಿತು. ಇದರ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂತ ಮೇರಿ ಸಂಊಹ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಧರ್ಮಗುರು ವಂ।ಪೌಲ್ ರೇಗೊ ‘ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ, ನಡವಳಿಕೆ ದೊರೆಯುತ್ತದೆ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಡಿಮೆ ಅಂಕ ಗಳಿಸಿದವರನ್ನು ತೆಗೆದುಕೊಂಡು ಅವರನ್ನು ಅಧ್ಯಾಪಕರು ವೀಶೆಷವಾಗಿ ಕಾಳಜಿ ವಹಿಸಿ ಜೊತೆಗೆ ನಿಂತು ಕಲಿಸುತ್ತಾರೆ, ಪ್ರಾಂಶುಪಾಲರ ಮತ್ತು ಎಲ್ಲಾ ಅಧ್ಯಾಪಕರ ಪ್ರಯತ್ನದಿಂದ ಶೇ. ನೂರು ಫಲಿತಾಂಶ ದೊರಕಿದೆ. ಇದಕ್ಕಾಗಿ ಎಲ್ಲಾ ಅಧ್ಯಾಪಕರನ್ನು ವಿದ್ಯಾರ್ಥಿಗಳನ್ನು, ಹೆತ್ತವರನ್ನುಅಭಿನಂದಿಸುತ್ತೇನೆ ಎಂದು ಹೇಳುತ್ತಾ, ಸಮಾಜಕ್ಕೆ ಏನು ಸಂದೇಶ ಎಂದು ಗಾಂಧೀಜಿಯವರನ್ನು ಕೇಳಿಕೊಂಡಾಗ ನನ್ನ ಜೀವನವೇ ಸಂದೇಶ ಎಂದು ಹೇಳಿದರಂತೆ, ಅದರಂತೆ ಹೆತ್ತವರ ಜೀವನವೇ ನಿಮ್ಮ ಮಕ್ಕಳಿಗೆ ಸಂದೇಶವಾಗಲಿ, ವಿದ್ಯಾರ್ಥಿಗಳು ನಮ್ಮಲ್ಲಿ ಕಲಿತು ಸಮಾಜದ ಉತ್ತಮ ನಾಗರಿಕನಾಗಲಿ ಎಂಬುದೆ ನಮ್ಮ ಆಸೆ ಎಂದು ತಿಳಿಸಿ ಅತಿಥಿಗಳನ್ನು ಸನ್ಮಾನಿಸಿದರು ಅಲ್ಲದೆ, ಅತಿಥಿಗಳ ಜೊತೆ ಸಾಧಕ ಮಕ್ಕಳನ್ನು ಬಹುಮಾನ ವಿತರಿಸಿ ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಮಾತನಾಡಿ, “ನೀರಿಗೆ ಆಕಾರವಿಲ್ಲ, ಆದರೆ ಅದನ್ನು ಒಂದು ಪಾತ್ರೆಗೆ ಹಾಕಿದರೆ, ನೀರು ಪಾತ್ರೆಯ ಆಕಾರ ತೆಗ್ದುಕೊಳ್ಳುತ್ತದೆ. ಕೊಡಪಾಣಕ್ಕೆ ಹಾಕಿದರೆ ಕೋಡಪಾಣದ ಆಕಾರ ಪಡೆದು ಕೊಳ್ಳುತ್ತೆ, ಹಾಗೇ ನಾವು ಶಿಕ್ಷಕರು ಅಧ್ಯಾಪಕರು ವಿದ್ಯಾಥಿಗಳಿಗೆ ಆಕಾರ ನೀಡುವ ಬಹಳ ಜವಾಬ್ದಾರಿಯುತ ಸ್ಥಾನದಲಿದ್ದೇವೆ. ಹೆತ್ತವರು ತಮ್ಮ ಮಕ್ಕಳನ್ನು ಪರೀಕ್ಷಿಸಿಸುತ್ತಾ ಇರಬೇಕು, ಅವರಿಗೆ ಪ್ರೀತಿಯ ಜೊತೆ ಭಯವೂ ಇರುವಂತೆ ನೋಡಿಕೋಳ್ಳಬೇಕು” ಎಂದು ತಿಳಿಸಿದರು. ಇನ್ನೋರ್ವ ಅತಿಥಿ ಬ್ಯಾಂಕ್ ಆಫ್ ಬರೋಡ ಮಂಗಳೂರು ಶಾಖೆಯ ವ್ಯವಸ್ಥಾಪಕಿ ಜೇನ್ ಡಿಸೋಜಾ ಮಾತನಾಡಿ ಶಿಕ್ಷಣದಿಂದ, ಮತ್ತು ಪ್ರಯತ್ನದಿಂದ ‘ಅಸಾಧ್ಯವಾದದ್ದು ಸಾಧ್ಯವನ್ನಾಗಿಸ ಬಹುದು, ನಾನು ಸಂತ ಮೇರಿಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ನನ್ನ ಜೀವನವನ್ನು ರೂಪಿಸಿಕೊಂಡಿದ್ದೇನೆ. ಇಲ್ಲಿ ವಿದ್ಯಾರ್ಥಿಗೆ ಎನೆಲ್ಲಾ ಕಲಿಯಬೇಕೋ ಅದೆನೆಲ್ಲಾ ಕಲಿಸಿಕೊಡುತ್ತಾರೆ. ಎಂದು ತಿಳಿಸಿದರು.
ಉಪನ್ಯಾಸಕರಾದ ಬೀನು ಜಯಚಂದ್ರನ್, ನಾಗರಾಜ್ ಶೆಟ್ಟಿ, ಪ್ರೀತಿ ಕ್ರಾಸ್ತಾ, ಶರ್ಮಿಳಾ ಮಿನೇಜೆಸ್, ಯೋಗೆಶ್, ಶಿಲ್ಪಶ್ರೀ ಪ್ರಫುಲ್ಲಾ ಇವರು ವ್ಯಕ್ತಿ ಪರಿಚಯ ಹಾಗೂ ಬಹುಮಾನ ವಿತರಣೆ, ಗೌರವ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟರು. ವಿದ್ಯಾರ್ಥಿಗಳು ಹಲವಾರು ಬಗೆಯ ಮನೋರಂಜನೆಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ನಾಯಕ ಶಹನೀತ್ ವಾಜ್, ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿ, ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಚೆಲ್ ಲವೀಶಾ ಡಿಸೋಜಾ ವಂದಿಸಿದಳು, ವಿದ್ಯಾರ್ಥಿಗಳಾದ ವೀಯೊನಾ ಡಿಸೋಜ, ಆಲಿಸ್ಟನ್ ರೇಬೆರೊ, ನಿರೂಪಿಸಿದರು.




























































































































