

ಶ್ರೀನಿವಾಸಪುರ : ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆದರೆ ಅದನ್ನ ಯಾರು ಕದಿಯಲು ಸಾಧ್ಯವಿಲ್ಲ. ಆಸ್ತಿ, ಅಂತಸ್ತು ಮಾಡಿದರೆ ಅವುಗಳನ್ನು ಕಾಪಾಡಲು ನಾವು ಕಾವಲು ಇದಬೇಕು ಎಂದು ನಿವೃತ್ತ ಲೋಕಾಯುಕ್ತ ಎನ್.ಎಸ್.ಸಂತೋಷಹೆಗ್ಗಡೆ ತಿಳಿಸಿದರು.
ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಶುಕ್ರವಾರ ದಾನಿಗಳಾದ ವಕೀಲ ಎಂ.ಶಿವಪ್ರಕಾಶ್ ಹಾಗು ಎಸ್.ಶಿವಸ್ವರೂಪ ರವರು ತಂದೆ ದಿ. ಕೆ.ಮುನಿಸ್ವಾಮಿಗೌಡ ಹಾಗು ತಾಯಿ ರಮದೇವಿರವರ ಜ್ಞಾನಪಕಾರ್ಥವಾಗಿ ಉಚಿತವಾಗಿ ನೋಟ್ ಪುಸ್ತಕಗಳು ಹಾಗು ಲೇಖನಿ ಸಾಮಾಗ್ರಿಗಳನ್ನು ವಿತರಿಸಿ ಹಾಗು ರೋಜರಹಳ್ಳಿ ಕ್ರಾಸ್ನಲ್ಲಿ ಶುದ್ದನೀರಿನ ಘಟಕವನ್ನು ಉದ್ಗಾಟಿಸಿ ಮಾತನಾಡಿರು.
ಮುಂದಿನ ದಿನಗಳಲ್ಲಿ ಅದನ್ನ ಲೋಕಾಯುಕ್ತ ಅಥವಾ ಬೇರೆ ಟ್ಯಾಕ್ಸ್ನ ಅಧಿಕಾರಿಗಳು ಬಂದು ನೀವು ಯಾವ ರೀತಿಯಲ್ಲಿ ಸಂಪಾನೆ ಮಾಡಿದ್ದೀರಿ ಎಂದು ನಿಮ್ಮ ಪ್ರಶ್ನೆ ಕೇಳಬಹುದು ಆದರೆ ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಯುಕ್ತವಾದ ಶಿಕ್ಷಣವನ್ನು ಕೊಡಿಸಿದರೆ ಸಮಾಜವು ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತದೆ. ಇದೇ ಸಮಯದಲ್ಲಿ ತಮ್ಮ ತಂದೆ ತಾಯಿ ಹೇಳಿಕೊಟ್ಟ ಸಂಸ್ಕಾರದ ಬಗ್ಗೆ ಮೆಲಕು ಹಾಕಿದರು.
ಇಂದಿನ ಪರಿಸ್ಥಿತಿಯಲ್ಲಿ ಕೋರ್ಟ್ ನೀಡುವ ಶಿಕ್ಷಗೆ ಯಾರು ಭಯಪಡುವುದಿಲ್ಲ. ಕಾರಣ ಶಿಕ್ಷೆ ಅನುಮೋದಾನೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಇಂದು ಕೋರ್ಟ್ ನೀಡುವ ಶಿಕ್ಷಗೆ ಯಾರು ಭಯಪಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಆರೋಪಿಗಳನ್ನು ಸಮಾಜದಲ್ಲಿ ಮುಂದೆ ಇಟ್ಟರೇ ನ್ಯಾಯಸಿಗಬಹುದೆಂಬುದ ನನ್ನ ಅನಿಸಿಕೆ ಎಂದರು.
ಇದು ನನ್ನ ೧೮೬೫ ನೇ ಶಾಲಾ ಕಾರ್ಯಕ್ರಮ ಪ್ರತಿ ದಶಕದಲ್ಲಿ ಒಂದು ಒಂದು ರೀತಿಯಲ್ಲಿ ಭ್ರಷ್ಟಚಾರಗಳು ನಡೆಯತ್ತಿದೆ. . ಇಂದು ಸಾವಿರಾರು ಕೋಟಿಗಳು ಭ್ರಷ್ಟಚಾರದಲ್ಲಿ ನಡೆಯುತ್ತಿದೆ. ಇದನ್ನ ಯುವಕರು ಸ್ವಲ್ಪ ಯೋಚನೆ ಮಾಡಬೇಕು. ಇದರ ಪರಿಣಾಮ ಪ್ರತಿಯೊಬ್ಬ ಮನಷ್ಯನಲ್ಲಿ ತೃಪ್ತಿ ಇರಬೇಕು .ತೃಪ್ತಿ ಇಲ್ಲದಿದ್ದರೆ ಅದು ಜೀವನವಲ್ಲ. ದುರಾಸೆಗೆ ಮುದ್ದು ಎಂದರೆ ತೃಪ್ತಿ ಎಂದರು. ಮನಾವೀಯತೆ ಎನ್ನುವುದು ನಮ್ಮ ಹಿರಿಯರು ಹೇಳಿಕೊಟ್ಟ ಜೀವನದ ವಿದ್ಯೆ. ಅದನ್ನ ಎಲ್ಲರೂ ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಸರ್ವೋಚ್ಚ ನ್ಯಾಯಾದೀಶ ಆರ್.ನಟರಾಜ್ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳನ್ನು ಒಳ್ಳೆಯ ಶಿಕ್ಷಣವನ್ನು ಪಡೆಯಬೇಕೆಂಬ ಆಸಕ್ತಿಯಿಂದ ತಮ್ಮ ಎಲ್ಲಾ ಸಮಯವನ್ನು ತಮ್ಮಲ್ಲಿರುವ ವಿದ್ಯೆಯನ್ನು ಧಾರೆ ಎಳೆಯುತ್ತಾರೆ. ಶಿಕ್ಷಕ ಎಂಬ ವಿದ್ಯೆ ಹೇಳಿಕೊಟ್ಟ ಶಿಷ್ಯ ಒಳ್ಳೇಯ ಜವಾಬ್ದಾರಿ ಸ್ಥಾನದಲ್ಲಿ ಇದ್ದರೆ ತುಂಬಾ ಖುಷಿಪಡುತ್ತಾನೆ ಎಂದರು. ಪೋಷಕರು ತಮ್ಮ ಮಕ್ಕಳೊಂದಿಗೆ ನಿಕಟ ಸಂಪರ್ಕ ಇರುವಂತೆ ಸಲಹೆ ನೀಡಿದರು. ಇಂದು ಮೊಬೈಲ್ನಿಂದ ಯುವ ಪೀಳಿಗೆ ಹಾಳಗುತ್ತಿದ್ದು, ತಕ್ಷಣ ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಿ ಎಂದರು.
ತಮ್ಮದೇ ಯಾವುದೇ ಕೆಲಸ ಮಾಡಿಸಿಕೊಳ್ಳಲು ಲಂಚ. ಇದರಿಂದ ದೇಶ ಗುಲಾಮಗಿರಿಯಲ್ಲಿ ಮುಳಗಿಹೋಗಿದೆ. ಸಂತೋಷಹೆಗ್ಗಡೆರವರು ದೇಶದಲ್ಲಿ ಭ್ರಷ್ಟಾರವನ್ನು ನಿರ್ಮಲನೆ ಮಾಡಲು ತುಂಬಾ ಪ್ರಯತ್ನ ಪಟ್ಟರು.
ನಿವೃತ್ತ ತೋಟಗಾರಿಕೆ ನಿರ್ದೇಶಕ ಡಾ.ಹಿತ್ತಲಮನೆ, ರೈತ ಹೋರಾಟಗಾರ್ತಿ ಸುನಂದಜಯರಾಮ್, ಎಂ.ಶಿವಪ್ರಕಾಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್..ಶ್ರೀನಿವಾಸ್, ಕಾರ್ಯದರ್ಶಿ , ಕೆ.ವಿಆದರ್ಶ, ಜಿಲ್ಲಾ ಸರ್ಕಾರಿ ಅಬಿಯೋಜಕ ಫಯಾಜ್ಅಹ್ಮದ್, ವಕೀಲ ಅರ್ಜುನ್,ತೌಸೀಪ್, ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಪಿಡಿಒ ಗೋಪಾಲರೆಡ್ಡಿ, ಅಶೋಕ್ ಕುಮಾರ್,ಸೀತಾರಾಮಯ್ಯ, ನಿವೃತ್ತ ಶಿಕ್ಷಕ ಗಾಂಡ್ಲಹಳ್ಳಿ ಸಂಪತ್ಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಶ್ಯಾಗತ್ತಾರು ಸುಧಕಾರ್, ಶಿಕ್ಷಕರಾದ ಕಲಾಶಂಕರ್,ಎನ್.ಮುರಳಿ, ಶಿವಮೂರ್ತಿ,ಓಬಲೇಶ, ಗೋವಿಂದಪ್ಪ, ಶಾರಧ, ಅನುರಾಧ, ಊರಿನ ಗ್ರಾಮಸ್ಥರು ಇದ್ದರು.

