

ಬೈಂದೂರು: ಸಿಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಹಯೋಗದಲ್ಲಿ ನವೆಂಬರ್ 7 ರಂದು ಸಿಐಟಿಯು ಕಛೇರಿ ಸಭಾಂಗಣದಲ್ಲಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಚಾಲಕರಿಗೆ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಯೋಜನೆಯ ಮಾಹಿತಿಯನ್ನು ನೀಡುವ ಮೂಲಕ ನೋಂದಣಿ ಮತ್ತು ಅರ್ಹತೆಗಳು ಹಾಗೂ ಯೋಜನೆಯಡಿಯಲ್ಲಿ ದೊರಕುವ ಸೌಲಭ್ಯಗಳ ಕುರಿತು ವಿವರಣೆ ನೀಡಿ ನೋಂದಾಯಿತ ಚಾಲಕರಿಗೆ ಮಂಡಳಿಯ ವತಿಯಿಂದ ನೀಡಿರುವ ಗುರುತು ಚೀಟಿಯನ್ನು ವಿತರಣೆ ಮಾಡಲಾಯಿತು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ರಾಜೀವ್ ಪಡುಕೋಣೆಯವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದು, ಸಿಐಟಿಯು ಸಂಚಾಲನಾ ಸಮಿತಿ ಸದಸ್ಯರು, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು,
ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.

