

ಶ್ರೀನಿವಾಸಪುರ : ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಕೆಲವರು ಪವಿತ್ರ ನದಿ ತೀರಗಳಲ್ಲಿ ಜಲ ಸ್ನಾನ ಮಾಡುತ್ತಾರೆ. ವಿಶೇಷವಾಗಿ ಕಾರ್ತಿಕಮಾಸದಲ್ಲಿ ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.
ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಲಕ್ಷ ದೀಪೋತ್ಸವ ಸಮಿತಿ ಹಾಗು ಭಕ್ತಮಂಡಲಿವತಿಯಿಂದ ಹಮ್ಮಿಕೊಳ್ಳಲಾದ ಪಕ್ಷಾತೀತವಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಇಂದು ದೇವಸ್ಥಾನಗಳು ನೆಮ್ಮದಿ ತಾಣಗಲಾಗಿದ್ದು, ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎನ್ನುತ್ತಾ, ಪಟ್ಟಣದ ಪುರಾತನ ದೇವಾಲಯವಾದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ತಿಕಮಾಸದ ಅಂಗವಾಗಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಲಕ್ಷ ದೀಪೋತ್ಸವ ಸಮಿತಿ ಹಾಗು ಭಕ್ತಮಂಡಲಿವತಿಯಿಂದ ಶ್ಲಾಘನೀಯ ಕೆಲಸವಾಗಿದ್ದು, ತಾಲೂಕಿನಲ್ಲಿ ಸಮೃದ್ಧಿ ಮಳೆಯಾಗಿದ್ದು, ರೈತರಿಗೆ ಹಾಗು ಎಲ್ಲಾ ನಾಗರೀಕ ಬಂದುಗಳಿಗೆ ಒಳ್ಳೇಯದಾಗಲಿ ಎಂದು ನನ್ನ ಆಶಯ. ಶಿಥಲವಾಗಿರುವ ಯಾವುದೇ ದೇವಾಲಯಗಳು ಇದಲ್ಲಿ ಅದನ್ನ ಸರಿಪಡಿಸಲು ದಾನಿಗಳು ಇದ್ದೇ ಇರುತ್ತಾರೆ . ದಾನಿಗಳಿಗೆ ನಾವು ಸಹಕಾರ ನೀಡಲು ಸನ್ನದ್ದರಾಗಿದ್ದೇವೆ ಎಂದರು.
ನನ್ನ ಅನುದಾನದಲ್ಲಿ 1 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಮಾಡುವುದರೊಂದಿಗೆ ಹಾಗು ಸರ್ವತೋಮುಖ ಅಭಿವೃದ್ಧಿಗಾಗಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದೇನೆ . ಅನುದಾನ ಬಂದ ತಕ್ಷಣವೇ ದೇವಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆಳ್ಳಿ ರಥದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಹೂವಿನೊಂದಿಗೆ ಅಲಂಕರಿಸಿ ವಿವಿಧ ಜಾನಪದ ತಂಡಗಳೊಂದಿಗೆ ಹಾಗು ಪಟಾಕಿಗಳನ್ನು ಸಿಡಿಸಿ ವಿಜೃಂಬಣೆಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮೆರವಣಿಗೆಗೆ ಸಾಕ್ಷಿಭೂತರಾದರು. ನೆರದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಿನಲ್ಲಿ ಪಟ್ಟಣದಲ್ಲಿ ಹಬ್ಬದ ವಾತವರಣವು ಸೃಷ್ಟಿಯಾಗಿತ್ತು.
ಕೆ.ಆರ್.ರಮೇಶ್ಕುಮಾರ್ರವರ ಕುಟುಂಬದ ಸದಸ್ಯರು ಪಾಲ್ಗುಂಡಿದ್ದರು. ಪೂಜಾ ಕಾರ್ಯಕ್ರಮವನ್ನು ಅರ್ಚಕ ಸುಬ್ರಮಣ್ಯಂ ನೆರವೇರಿಸಿದರು. ಮುಖಂಡರಾದ ಕೆ.ಆರ್.ಕೃಷ್ಣಮೂರ್ತಿ, ಕೆ.ಆರ್.ಹರ್ಷ , ಎನ್.ಜಿ.ಬ್ಯಾಟಪ್ಪ, ತೂಪಲ್ಲಿ ಆರ್.ನಾರಾಯಣಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ಸಂಜಯ್ರೆಡ್ಡಿ, ದಿಂಬಾಲ್ ಅಶೋಕ್, ಕೆ.ಕೆ.ಮಂಜುನಾಥ್, ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಉಪಾಧ್ಯಕ್ಷೆ ಸುನಿತ, ಬಂಡಪಲ್ಲಿ ಕೃಷ್ಣಾರೆಡ್ಡಿ, ಬಿ.ಎಲ್.ಪ್ರಕಾಶ್, ಆರ್.ಎನ್.ಚಂದ್ರಶೇಖರ್, ಮನೋಹರ್, ಗಂಗಾದರ್, ಎನ್ಎನ್ಆರ್.ನಾಗರಾಜ್, ಮುನಿರಾಜು, ಹೇಮಂತಕುಮಾರ್, ಶಿವರಾಜ್, ನರಸಿಂಹಮೂರ್ತಿ, ಥಿಯೇಟರ್ಲಕ್ಷ್ಮಣರೆಡ್ಡಿ, ವೈ.ಆರ್.ಶಿವಪ್ರಕಾಶ್, ರಾಘವರೆಡ್ಡಿ, ಸೀತಾರಾಮರೆಡ್ಡಿ, ಪೂಲ್ಶಿವಾರೆಡ್ಡಿ, ಜೆ.ಕೆ.ಮಂಜುನಾಥ್, ಮಂಜುನಾಥರೆಡ್ಡಿ, ಎಸ್.ಡಿ.ವೆಂಕಟೇಶ್, ಕೋಡಪಲ್ಲಿ ಶ್ರೀನಿವಾಸರಡ್ಡಿ, ಕಾರ್ಬಾಬು, ಸಿಮೆಂಟ್ರಮೇಶ್, ವೆಂಕಟೇಶ್, ಬದ್ರಿ, ಸುಬ್ಬಿರೆಡ್ಡಿ, ಗೋಪಾಲಗೌಡ , ನಂಬಿಹಳ್ಳಿ ಶ್ರೀರಾಮರೆಡ್ಡಿ, ಡಾ|| ವೆಂಕಟೇಶ್, ಕೃಷ್ಣಾರೆಡ್ಡಿ, ನಾಗದೇನಹಳ್ಳಿ ಶ್ರೀನಿವಾಸ್, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.



