

ಕೋಲಾರ: ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಮುತವಲ್ಲಿಗಳು, ಆಡಳಿತಾಧಿಕಾರಿಗಳು ಹಾಗೂ ಕೇರ್ ಟೇಕರ್ಗಳು ತಕ್ಷಣವೇ “Umeed” ವೆಬ್ ಪೋರ್ಟಲ್ನಲ್ಲಿ ಮೇಕರ್ ಆಗಿ ನೋಂದಣಿ ಮಾಡಿ ತಮ್ಮ ಸಂಸ್ಥೆಗೆ ಸೇರಿದ ವಕ್ಫ್ ಆಸ್ತಿಗಳ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಶಮ್ಸ್ ಉಲ್ ಮೊಯಿಜ್ ತಿಳಿಸಿದ್ದಾರೆ.
Umeed ಕಾಯ್ದೆ–2025 ಮತ್ತು ಅದರ ನಿಯಮಾವಳಿಗಳ ಪ್ರಕಾರ ನಿಗದಿಪಡಿಸಿದ ದಾಖಲೆಗಳನ್ನು 30 ದಿನಗಳ ಒಳಗೆ ಅಪ್ಲೋಡ್ ಮಾಡಬೇಕಾಗಿದೆ. ಈ ಕುರಿತು ವಿಳಂಬ ಅಥವಾ ನಿರ್ಲಕ್ಷ್ಯ ತೋರಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮುತವಲ್ಲಿಗಳು, ಆಡಳಿತಾಧಿಕಾರಿಗಳು ಹಾಗೂ ಕೇರ್ ಟೇಕರ್ಗಳು ನಿಯಮಾನುಸಾರವಾಗಿ ಮೇಕರ್ ಆಗಿ ನೋಂದಣಿ ಮಾಡಿ ತಮ್ಮ ಸಂಸ್ಥೆಯ ವಕ್ಫ್ ಆಸ್ತಿಗಳ ಸಂಪೂರ್ಣ ದಾಖಲೆಗಳನ್ನು ಆನ್ಲೈನ್ ಮೂಲಕ ನವೀಕರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ತಾಂತ್ರಿಕ ನೆರವಿಗಾಗಿ ಕೋಲಾರ ಜಿಲ್ಲಾ ವಕ್ಫ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

