

ಉಡುಪಿ ಧರ್ಮಪ್ರಾಂತ್ಯವು ಪ್ರತಿವರ್ಷವೂ ತನ್ನ ಪ್ರತಿ ವಲಯದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕ್ಯಾಥೊಲಿಕ್ ವಿದ್ಯಾರ್ಥಿಗಳಿಗಾಗಿ “ಜೀವನ್ ಜ್ಯೋತಿ” ಶಿಬಿರವನ್ನು ಆಯೋಜಿಸುತ್ತದೆ. ಈ ವರ್ಷವೂ ಕುಂದಾಪುರ ಸಂತ ಜೋಸೆಫ್ ವಾಜ್ ವಲಯವು ಈ ಶಿಬಿರವನ್ನು ಹಿಂದಿನ ವರ್ಷದಂತೆಯೇ ತಲ್ಲೂರಿನ ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯದ ಸಭಾಭವನದಲ್ಲಿ ನಡೆಸಿತು. ಮೂರು ದಿನಗಳ ಈ ಶಿಬಿರವನ್ನು 2025ರ ಅಕ್ಟೋಬರ್ 29 ರಿಂದ ನವೆಂಬರ್ 1ರವರೆಗೆ ವಂದನೀಯ ಫಾ. ಎಡ್ವಿನ್ ಡಿಸೋಜಾ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಅಕ್ಟೋಬರ್ 29 ರಂದು ಬೆಳಿಗ್ಗೆ 9 ಗಂಟೆಗೆ ಕುಂದಾಪುರ ವಲಯದ ಮುಖ್ಯ ಗುರು ಅತೀ ವಂದನೀಯ ಫಾ. ಪೌಲ್ ರೇಗೊ ಅವರು ದೀಪ ಬೆಳಗಿಸಿ ಪವಿತ್ರ ಬೈಬಲಿಗೆ ಗೌರವ ಸಲ್ಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶವನ್ನು ನೀಡಿ ಶಿಬಿರದ ಮಹತ್ವವನ್ನು ವಿವರಿಸಿದರು.
ಶಿಬಿರದ ಮೊದಲ ದಿನದ ಆಹ್ವಾನಿತ ಉಪನ್ಯಾಸಕರಾಗಿ ಉಡುಪಿ ಧರ್ಮಪ್ರಾಂತ್ಯದ ಆರಾಧನಾ ಕ್ರಮ ಆಯೋಗದ ಸಂಚಾಲಕರಾದ ವಂದನೀಯ ಫಾ. ವಿಲ್ಸನ್ ಡಿಸೋಜಾ, ತಲ್ಲೂರು ಜಯರಾಣಿ ಕಾನ್ವೆಂಟ್ನ ಸಂಚಾಲಕಿ ಧರ್ಮಭಗಿನಿ ಸಿ. ಜೂಲಿ, ಗಂಗೊಳ್ಳಿ ICYM ಸಂಯೋಜಕರಾದ ಶ್ರೀ ಓವಿನ್ ರೆಬೆಲ್ಲೊ ಹಾಗೂ ಬೈಂದೂರು ಹೊಲಿ ಕ್ರಾಸ್ ಚರ್ಚಿನ ಧರ್ಮಗುರು ವಂದನೀಯ ಫಾ. ವಿನ್ಸೆಂಟ್ ಕೊಯೆಲೊ ಉಪಸ್ಥಿತರಿದ್ದರು. ಅವರು ಆರಾಧನೆ, ಚಿಹ್ನೆಗಳು ಮತ್ತು ಸಂಕೇತಗಳು, ಮಾತೆ ಮರಿಯಾಳ ಪಾತ್ರ, ಪ್ಯಾರಿಷ್ನಲ್ಲಿ ನನ್ನ ಪಾತ್ರ ಮತ್ತು ಸಂಸ್ಕಾರಗಳ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಎರಡನೇ ದಿನದ ಉಪನ್ಯಾಸಕರಾಗಿ ಬಸ್ರೂರು ಸಂತ ಫಿಲಿಪ್ ನೆರಿ ದೇವಾಲಯದ ಧರ್ಮಗುರು ವಂದನೀಯ ಫಾ. ರೊಯ್ ಲೋಬೋ, MCC ಬ್ಯಾಂಕ್ ಕುಂದಾಪುರದ ಉದ್ಯೋಗಿ ಶ್ರೀ ಆಲ್ಡ್ರಿನ್ ಡಿಸೋಜ, ಕುಂದಾಪುರ ವಲಯದ ಮುಖ್ಯಗುರು ಅತೀ ವಂದನೀಯ ಫಾ. ಪೌಲ್ ರೇಗೊ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಂದನೀಯ ಫಾ. ರಿಚಾರ್ಡ್ ಡಿಸೋಜ ಉಪಸ್ಥಿತರಿದ್ದರು. ಅವರು ವಿದ್ಯಾರ್ಥಿಗಳಿಗೆ ಭಾನುವಾರದ ಕರ್ತವ್ಯಗಳು, ನಂಬಿಕೆಗೆ ಸಾಕ್ಷಿಯಾಗುವುದು, ವೈಯಕ್ತಿಕ ಪ್ರಾರ್ಥನೆ, ಪರಿಸರ ಮತ್ತು ಚರ್ಚ್ ಕುರಿತಂತೆ ಮಾರ್ಗದರ್ಶನ ನೀಡಿದರು.
ಕೊನೆಯ ದಿನದ ಉಪನ್ಯಾಸಕರಾಗಿ ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ರೆಕ್ಟರ್ ಅತೀ ವಂದನೀಯ ಫಾ. ಸುನಿಲ್ ವೇಗಸ್ ಹಾಗೂ ಕಟ್ಕೆರೆ ಬಾಲ ಏಸು ಪ್ರಾರ್ಥನಾ ಮಂದಿರದ ಗುರು ವಂದನೀಯ ಫಾ. ಪ್ರವೀಣ್ ಪಿಂಟೋ ಉಪಸ್ಥಿತರಿದ್ದರು. ಅವರು ಸಂತರು ಮತ್ತು ಅವರ ಮೂರ್ತಿ ಹಾಗೂ ಚಿತ್ರಗಳನ್ನು ಗೌರವಿಸುವುದು, ನನ್ನ ಕರೆ ಮತ್ತು ಯುಕ್ಯಾಟ್,ದುಷ್ಟ ಶಕ್ತಿಯ ಅಸ್ತಿತ್ವ, ಸತ್ತವರ ಪುನರುತ್ಥಾನ ಮತ್ತು ನಿತ್ಯ ಜೀವನ ಕುರಿತಂತೆ ವಿದ್ಯಾರ್ಥಿಗಳಿಗೆ ಆಳವಾದ ವಿಚಾರ ಹಂಚಿಕೊಂಡರು.ಯುಕ್ಯಾಟ್ ತರಬೇತಿಯನ್ನು , ಶಿಬಿರದ ನೇತೃತ್ವ ವಹಿಸಿದ ವಂದನೀಯ ಫಾ. ಎಡ್ವಿನ್ ಡಿಸೋಜಾರವರು ನೀಡಿ, ಯುಕ್ಯಾಟ್ ಪುಸ್ತಕದ ಪ್ರತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು.
ಮೂರು ದಿನಗಳ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಅತಿಥಿ ಸ್ವಾಗತ, ಧನ್ಯವಾದ ಪ್ರದಾನ, ವರದಿ ಮಂಡನೆ, ಗುಮ್ಮಾಟ್ ಹಾಡು ಮುಂತಾದ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಯಿತು. YCS ಮತ್ತು ICYM ಸದಸ್ಯರು ಪ್ರತಿದಿನ ಮನರಂಜನಾ ಆಟಗಳು, ಗುಂಪು ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
ಶಿಬಿರದ ಅಂತ್ಯದಲ್ಲಿ ವಂದನೀಯ ಫಾ. ಎಡ್ವಿನ್ ಡಿಸೋಜಾ ಚಟುವಟಿಕೆಗಳ ಮೌಲ್ಯಮಾಪನ ನಡೆಸಿದರು. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅತ್ಯುತ್ತಮವಾಗಿ ಭಾಗವಹಿಸಿದ ನಾಲ್ವರು ವಿದ್ಯಾರ್ಥಿಗಳನ್ನು ಧರ್ಮಗುರುಗಳು ಹಣ್ಣಿನ ಗಿಡ ನೀಡಿ ಸನ್ಮಾನಿಸಿದರು. ಈ ಶಿಬಿರದ ಮೂಲಕ ಕುಂದಾಪುರ ವಲಯದ 75 ವಿದ್ಯಾರ್ಥಿಗಳು ಆತ್ಮೀಯತೆ, ಶಿಸ್ತಿನ ಜೀವನ ಮತ್ತು ನಂಬಿಕೆಯ ಅರಿವನ್ನು ಗಾಢಗೊಳಿಸಿದರು.
“Jeevan Jyoti” camp of St. Joseph Vaz (Kundapur) Deanery in Tallur

Every year, the Diocese of Udupi organizes the “Jeevan Jyothi” camp for Catholic students studying in Grade 10 in each deanery. This year too, the Kundapur St. Joseph waz Deanery conducted the camp at St. Francis Assisi Church Hall, Tallur, from October 29 to November 1, 2025, under the leadership of Rev. Fr. Edwin D’Souza.
The camp was inaugurated on October 29 at 9 a.m. by Very Rev. Fr. Paul Rego, Dean of the Kundapur Deanery, who lit the lamp and honored the Holy Bible. In his inaugural address, he inspired the students and explained the purpose and value of the camp.
On the first day, the resource persons included Rev. Fr. Wilson D’Souza (Director, Diocesan Commission for Liturgy), Sr. C. Julie (Superior, Jayerani Convent, Tallur), Mr. Ovin Rebello (ICYM Gangolli Coordinator), and Rev. Fr. Vincent Coelho (Parish Priest, Holy Cross Church, Byndoor). They spoke on topics such as Liturgy, Signs and Symbols, Role of Mother Mary in Life, Role in the Parish, and Importance of Sacraments.
The second day’s sessions were led by Rev. Fr. Roy Lobo (Parish Priest, St. Philip Neri Church, Basrur), Mr. Aldrin D’Souza (Staff, MCC Bank, Kundapur), Very Rev. Fr. Paul Rego, and Rev. Fr. Richard D’Souza (Mangalore Diocese). They guided the students on Sunday obligations, witnessing faith, personal prayer, and ecology and the Church.
On the final day, Very Rev. Fr. Sunil Vegas (Rector, St. Anthony Shrine, Kerekatte) and Rev. Fr. Praveen Pinto (Bala Yesu Prayer Hall, Katkere) addressed the students on Honoring Saints and Sacred Images, My Calling and YOUCAT, Existence of Evil, Resurrection of the Dead, and Eternal Life. The YOUCAT training program was conducted by the camp incharge Rev Fr. Edwin Dsouza who also distributed a copy of the YOUCAT book free of cost to all the students.
Throughout the three-day camp, participants were trained in various activities such as welcome, vote of thanks, report presentation, and traditional group songs. Members of YCS and ICYM organized fun games, group activities, and cultural programs daily.
At the conclusion, Rev. Fr. Edwin D’Souza conducted an evaluation of the camp. All those who contributed to the success of the camp were presented with souvenirs and mementos. Four students who showed exemplary participation were honored by the parish priests with fruit saplings. A total of 75 students from the Kundapur Deanery benefited spiritually, morally, and intellectually from this enriching faith formation camp.























