

ಕುಂದಾಪುರ, ಅ, 6: 455 ವರ್ಷಗಳ ಐತಿಹಾಸಿಕ ಇತಿಹಾಸವುಳ್ಳ ಕುಂದಾಪುರ ಭಾಗ್ಯವಂತೆ ರೋಜರಿ ಚರ್ಚಿನ, 97 ವರ್ಷ ಇತಿಹಾಸ ಇರುವ ಸಂತ ಫ್ರಾನ್ಸಿಕನ್ ಸಭಾದಿಂದ ಅವರ ಪೋಷಕ ಸಂತ ಫ್ರಾನ್ಸಿಸ್ ಆಸೀಸಿಯವರ ಹಬ್ಬದ ಆಚರಣೆಯನ್ನು 5 ರಂದು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ “ಸಂತ ಫ್ರಾನ್ಸಿಸ್ ಆಸೀಸಿ ಬಹಳ ಶ್ರೀಮಂತರಾದರೂ, ಬಹಳ ಬಡತನವನ್ನು ಆರಿಸಿ ಜೀವಿಸಿದರು. ತನ್ನದೆಲ್ಲವನ್ನು ಬಡವರಿಗೆ ಹಂಚಿದವರು, ಪ್ರಕ್ರತಿಯನ್ನು ಪ್ರೀತಿಸಿದರು, ಯೇಸು ಕ್ರಿಸ್ತರು ಕುಷ್ಟ ರೋಗಿಗಳನ್ನು ಗುಣ ಪಡಿಸಿತಿದ್ದರು, ಅದಾದ ನಂತರ ಸಂತರು ಪವಾಡ ಮಾಡಿ ಕುಷ್ಟ ರೋಗವನ್ನು ಗುಣ ಪಡಿಸುತಿದ್ದರು. ಸಂತ ಫ್ರಾನ್ಸಿಸ್ ಆಸೀಸಿ ೧೩ ನೇ ಶತಮಾನದ ಸಂತರು ಅವಾಗಲೂ ಕುಷ್ಟ ರೋಗಕ್ಕೆ ಓಷಧವನ್ನು ಕಂಡು ಹಿಡಿದಿರಲಿಲ್ಲ, ಕುಷ್ಟ ರೋಗ ಎನ್ನುವುದು ಬಹಳ ಅಪಾಯಕಾರಿಯಾದ ಆದರೂ ಅವರ ಕಾಲದಲ್ಲಿ ಸಂತ ಫ್ರಾನ್ಸಿಸ್ ಆಸೀಸಿ ಕುಷ್ಟ ರೋಗಿಯನ್ನು ಬಿಗಿದಪ್ಪಿ, ಅವರನ್ನು ಮುತ್ತು ಕೊಡುತಿದ್ದರು. ಕುಷ್ಟ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆ ಕಟ್ಟಿದ ಅವರು ಮೂರು ದೀಕ್ಷೆಗಳನ್ನು ರಚಿಸಿದರು, ಒಂದುನೇಯದು ಧರ್ಮಗುರುಗಳಿಗಾಗಿ, ಎರಡೆನೇಯದು ಧರ್ಮ ಭಗಿನಿಯರಿಗಿಗಾಗಿ, ಮೂರನೇಯದು ಸಾಮಾನ್ಯ ಜನರಿಗಾಗಿ ಆರಂಭಿಸಿದ 3 ನೇ ದೀಕ್ಷೆ ಇದುವೇ ನೀವು ಇಂದು ಆಚರಿಸುತ್ತೀರುವ ಹಬ್ಬ’ ಎಂದು ವಿವರಿಸಿದರು.
ಅತಿಥಿಯಾಗಿ ಆಗಮಿಸಿದ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಒಳಾಂಗಿಣ ಆಟಗಳಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ಅಧ್ಯಕ್ಷೆ ಡಾ|ಸೋನಿ ಡಿಕೋಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಐವಿನ್ ಡಿಸೋಜಾ ವರದಿ ವಾಚಿಸಿದರು. ಉಪಾಧ್ಯೆಕ್ಷೆ ಆಲಿಸ್ ಬಾಂಜ್ ವಂದಿಸಿದರು. ಡಾಯಾನಾ ಡಿಆಲ್ಮೇಡಾ ನಿರೂಪಿಸಿದರು.









































