

ಕುಂದಾಪುರ : ದಿನಾಂಕ 30/09/25 ರಂದು ಇಲ್ಲಿನ ಭಂಡಾರ್ಕರ್ಸ್ ಕಾಲೇಜಿನಲ್ಲಿ ಬಿ. ಬಿ. ಎ ವಿಭಾಗ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಅದರ ಪ್ರಾಮುಕ್ಯತೆ ಬಗ್ಗೆ ಮಾಹಿತಿ ಶಿಬಿರ ವನ್ನು ಆಯೋಜಿಸಿದ್ದರು. ಸ್ಮಾರ್ಟ್ ಅಕಾಡೆಮಿ ಪುತ್ತೂರು ಇದರ ಮುಕುಂದ ಕೃಷ್ಣ ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿ ವಿಶೇಷ ಮಾಹಿತಿ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶುಭಕರಾಚಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತಯಾರಿ ನಡೆಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ಎಂದು ಶುಭ ಹಾರೈಸಿದರು.
ಬಿ. ಬಿ. ಎ ವಿಭಾಗ ಮುಖ್ಯಸ್ಥೆ ಶ್ರೀಮತಿ ಅರ್ಚನಾ ಅರವಿಂದ್ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಿಂಕು ಕಾರ್ಯ ಕ್ರಮ ನಿರ್ವಹಿಸಿದರು. , ದೇವಿಕಾ ಸ್ವಾಗತಿಸಿದರು, ಅಪೇಕ್ಷ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರೀತಿ ವಂದಿಸಿದರು.


