

ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕೊಸೆಸಾಂವ್ ಮಾತೆಯ ಚರ್ಚ್ ಘಟಕದ ಆಶ್ರಯದಲ್ಲಿ ಕಥೊಲಿಕ್ ಸ್ತ್ರಿ ಸಂಘಟನೆ, ಗಂಗೊಳ್ಳಿ, ಭಾರತೀಯ ಕಥೊಲಿಕ್ ಯುವ ಸಂಘಟನೆ(ICYM), ಗಂಗೊಳ್ಳಿ ಹಾಗೂ ವೈಸಿಎಸ್(YCS), ಗಂಗೊಳ್ಳಿಯ ಸಹಭಾಗಿತ್ವದಲ್ಲಿ, ಗುಜ್ಜಾಡಿ ಗ್ರಾಮ ಪಂಚಾಯತ್ ನ ಸಹಕಾರದೊಂದಿಗೆ, ಕಳೆದ ಹಲವಾರು ವರ್ಷಗಳಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆಯುವ ಸಾರ್ವಜನಿಕ ಸ್ಥಳದ ಸ್ವಚ್ಚತಾ ಕಾರ್ಯಕ್ರಮವು ಗುಜ್ಜಾಡಿಯಲ್ಲಿ ನಡೆಯಿತು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ಮಾರ್ಗದರ್ಶನದೊಂದಿಗೆ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫರ್ನಾಂಡಿಸ್ ರವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಥೋಲಿಕ್ ಸಭಾ ಉಡುಪಿ ಪ್ರದೇಶ್(ರಿ) ಇದರ ಕೇಂದ್ರಿಯ ಸಮಿತಿಯ ಪ್ರಥಮ ಅಧ್ಯಕ್ಷರಾದ ಶ್ರೀ ಎಲ್ರೊಯ್ ಕಿರನ್ ಕ್ರಾಸ್ಟೊ, ಗುಜ್ಜಾಡಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಗುಜ್ಜಾಡಿ ಪೇಟೆಯಿಂದ ಆರಂಭಿಸಿ ನಾಯಕ್ವಾಡಿ ತನಕದ ರಸ್ತೆಯ ಎರಡೂ ಇಕ್ಕೆಲಗಳಲ್ಲಿಯ ಹಾಗೂ ಗುರುವಾರದ ನಾಯಕ್ವಾಡಿ ಸಂತೆ ಹಾಗೂ ಮೀನು ಮಾರ್ಕೆಟ್ನಲ್ಲಿಯ ಪ್ಲಾಸ್ಟಿಕ್ ಹಾಗೂ ಇತರೆ ಕಸವನ್ನು ಸಂಗ್ರಹಿಸಿ, ಗುಜ್ಜಾಡಿ ಪಂಚಾಯತಿನ ಕಸ ವಿಲೇವಾರಿ ವಾಹನದಲ್ಲಿ ವಿಲೇವಾರಿ ಮಾಡಲಾಯಿತು.
ಕಥೊಲಿಕ್ ಸ್ತ್ರಿ ಸಂಘಟನೆ, ಗಂಗೊಳ್ಳಿ ಇದರ ಅಧ್ಯಕ್ಷರಾದ ಶ್ರೀಮತಿ ಅನಿತಾ ಫೆರ್ನಾಂಡಿಸ್, ಶ್ರೀ ಓವಿನ್ ರೆಬೆಲ್ಲೊ, ಶ್ರೀ ರೋಶನ್ ಲೋಬೊ, ಶ್ರೀಮತಿ ಜೆನ್ನಿ ಬುತ್ತೆಲ್ಲೊ, ಶ್ರೀಮತಿ ಪ್ರೀತಿ ಫೆರ್ನಾಂಡಿಸ್ ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ಎಲ್ಲರನ್ನೂ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಎಲೋಶಿಯಸ್ ಫೆರ್ನಾಂಡಿಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆಗಳ ಹಲವಾರು ಮಂದಿ ಭಾಗವಹಿಸಿ , ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.













