

ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ನಾಲ್ಕನೇ ಸೆಮಿಸ್ಟರ್ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಸೆಪ್ಟೆಂಬರ್ 25 ರಂದು ಆಧಿತ್ಯ ಗೆರುಬೀಜ ಕಾರ್ಖಾನೆ, ಮೂಡ್ಲಕಟ್ಟೆಯಲ್ಲಿ ವಿಶ್ವ ಶ್ವಾಸಕೋಶ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮವು ದೀಪ ಬೆಳಗಿಸುವದರ ಮೂಲಕ ಆರಂಭಗೊಂಡಿತು.ಈ ಸಂದರ್ಭದಲ್ಲಿ ಗೇರುಬೀಜ ಕಾರ್ಖಾನೇಯ ಮೇಲ್ವಿಚಾರಕರಾದ ಕೇಶವ, ಮೂಡ್ಲಕಟ್ಟೆ ಕಾಲೇಜಿನ ಉಪನ್ಯಾಸಕರಾದ ಕುಮಾರಿ ಕೀರ್ತನಾ ಹಾಗೂ ಕುಮಾರಿ ರಕ್ಷಿತಾ , ಗೇರುಬೀಜ ಕಾರ್ಖಾನೆಯ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಕಾರ್ಮಿಕರಿಗೆ ಶ್ವಾಸಕೋಶದ ರಚನೆ, ಶ್ವಾಸಕೋಶದ ಕಾಯಿಲೆಗಳು ಹಾಗೂ ತಡೆಗಟ್ಟುವ ಮಾರ್ಗಗಳ ಕುರಿತು ಜಾಗೃತಿ ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳು ಜೀವನಶೈಲಿಯ ಬದಲಾವಣೆಯ ಅಗತ್ಯವನ್ನು ಹಬ್ಬಿಸುವ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗೇರುಬೀಜ ಕಾರ್ಖಾನೆಯ ಕಾರ್ಮಿಕರು ಉತ್ಸಾಹದಿಂದ ಪಾಲ್ಗೊಂಡು ಶ್ವಾಸಕೋಶವನ್ನು ಕಾಪಾಡುವ ಆರೋಗ್ಯ ಮಾಹಿತಿ ಪಡೆದರು. ಕುಮಾರಿ ಸಿಂಚನಾ ಕಾರ್ಯಕ್ರಮವನ್ನು ನಿರ್ವಹಿಸಿದರು.

