

ಶ್ರೀನಿವಾಸಪುರ : ಪಂಚೇಂದ್ರಯಗಳಲ್ಲಿ ಯಾವುದೇ ಅಂಗವು ಸ್ವಾದೀನ ಕಳೆದುಕೊಂಡರು ಸಹ ಸಮಾಜವು ಅವರನ್ನ ಬೇರೆ ರೀತಿಯಲ್ಲಿಯೇ ಕಾಣುತ್ತದೆ . ಅದನ್ನ ತಪ್ಪಿಸುವ ಸಲುವಾಗಿ ಇಲಾಖೆ ಸಹಯೋಗದಲ್ಲಿ ಉಚಿತವಾಗಿ ಶ್ರವಣ ಸಾಧನಾ ಸಲಕರಣೆಗಳ ವಿತರಿಸಲಾಗುತ್ತಿದೆ ಎಂದು ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ತಿಳಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ವಿವಿಧ ಸಂಘ ಸಂಸ್ಥೆಗಳಿಂದ ಉಚಿತವಾಗಿ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಈ ಹಿಂದೆ ವಿವಿಧ 21 ಶ್ರವಣ ನ್ಯೂನ್ಯತೆವುಳ್ಳ ವಿಧ್ಯಾರ್ಥಿಗಳಿಗೆ ಬೆಂಗಳೂರಿನ ಅಲಿಮಾಕೊ ಸಂಸ್ಥೆ ಅವರು ಶ್ರವಣ ಯಂತ್ರಗಳನ್ನು ನೀಡಿದ್ದು ಅವುಗಳಿಗೆ ಬ್ಯಾಟರಿ ಗಳನ್ನು ಉಚಿತ ವಾಗಿ ವ್ಯವಸ್ಥೆ ಮಾಡಿರುತ್ತಾರೆ. ಶ್ರವಣ ಯಂತ್ರದ ಬ್ಯಾಟರಿ ಗಳನ್ನು ಉಚಿತವಾಗಿ ನೀಡಿ ಸೂಕ್ಷ್ಮತೆಯನ್ನು ತಿಳಿಸಿ ಸೂಕ್ತ ಮಾರ್ಗದರ್ಶನ ಫಿಸಿಯೋಥೆರಪಿ ಡಾ.ಸಿಂಧು.ಪಿ.ಆರ್ ನೀಡಿದರು.
ಬಾಲಕೀಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಂಕರೇಗೌಡ , ಬಿಆರ್ಸಿ ಕೆ.ಸಿ.ವಸಂತ, ಇಸಿಒಗಳಾದ ಕೆ.ಸಿ.ಶ್ರೀನಿವಾಸ್, ಆರ್.ಸುಬ್ರಮಣಿ, ಕೋದಂಡಪ್ಪ, ವೆಂಕಟರಮಣಪ್ಪ, ಬಿಆರ್ಪಿ ವೆಂಕಟಾಚಲಪತಿ ಬಿಐಇಆರ್ಟಿಗಳಾದ ಜಿ.ವಿ.ಚಂದ್ರಪ್ಪ., ಪದ್ಮ, ಸಿಆರ್ಪಿಗಳಾದ ವರದರೆಡ್ಡಿ, ಕೆ.ಸಿ.ರೆಡ್ಡಪ್ಪ ರವರು ಹಾಜರಿದ್ದರು.

