

ಬೈಂದೂರೂ; ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ತೆನೆ ಹಬ್ಬ ಮೊಂತಿ ಫೆಸ್ತ್ ನ್ನು ಉಡುಪಿಯ ರೆ. ಫಾ. ಅಶ್ವಿನ್ ಆರಾನ್ಹಾ , ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್ ಕುವೆಲ್ಲೊ ಮತ್ತು ಬ್ರದರ್ ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಎಲ್ಲಾ ಕುಟುಂಬದವರಿಗೆ ಹೊಸ ತೆನೆಗಳನ್ನು ಹಂಚಲಾಯಿತು. ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು. ಹಬ್ಬದ ಬಲಿದಾನದಲ್ಲಿ, ಪಾಲನ ಮಂಡಳಿ ಉಪಾಧ್ಯಕ್ಷರು ಕಾರ್ಯದರ್ಶಿ, ಆಯೋಗಗಳ ಸಂಚಾಲಕಿ, ವಾಳೆಯ ಗುರಿಕಾರರು, ಪ್ರತಿನಿಧಿಗಳು, ಧರ್ಮಭಗಿನಿಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.


























































