

ಕುಂದಾಪುರ ; ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 5 ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದರು ಶಾಸಕರು ಶ್ರೀ ಜಯಪ್ರಕಾಶ್ ಹೆಗ್ಡೆಯವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸನ್ಮಾನ್ಯ ಜಯಪ್ರಕಾಶ್ ಹೆಗ್ಡೆ ಯವರು ,ಶಿಕ್ಷಕರು ಯಾವತ್ತೂ ನಿವ್ರತ್ತಿಗೊಳ್ಳುವುದಿಲ್ಲ. ತಮ್ಮ ಸುತ್ತ ಇರುವವರಿಗೆ ಜ್ಞಾನ ನೀಡುತ್ತ ತಮ್ಮ ಸುತ್ತಲಿನ ಪ್ರದೇಶದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುತ್ತಾರೆ.ತಮ್ಮ ಶಾಲೆಗೆ ಬರುವ ಎಲ್ಲಾ ಮಕ್ಕಳೂ ಒಳ್ಳೆಯ ರೀತಿಯಲ್ಲಿ ಕಲಿಯುವಂತೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಶ್ರೀಮತಿ ಸುಮಿತ್ರ ಜಯಕುಮಾರ್ ಕುಂದಾಪುರ, ಶ್ರೀಮತಿ ರತ್ನಾವತಿ ಶೆಟ್ಟಿ ಹೊಂಬಾಡಿ ಮಂಡಾಡಿ, ಶ್ರೀಮತಿ ಭಾರತಿ ಕೋಟೆಶ್ವರ, ಶ್ರೀಮತಿ ಡೋರತಿ ಸುವಾರಿಸ್ ಕುಂದಾಪುರ, ಶ್ರೀಮತಿ ಸೂರ್ಯಕಾಂತಿ ಬೀಜಾಡಿ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.
ನಾಯಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ , ದೇವಾನಂದ ಶೆಟ್ಟಿ, ಸದಾನಂದ ಶೆಟ್ಟಿ ಕೆದೂರು, ವಿಕಾಸ್ ಹೆಗ್ಡೆ, ಶೇಖರ್ ಚಾತ್ರಬೆಟ್ಟು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಹೆಬ್ಬಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾ ವಾಗ್ಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸನ್ಮಾನಿತಗೊಂಡ ಶಿಕ್ಷಕಿಯರು ತಮ್ಮ ಅನುಭವ ಹಂಚಿಕೊಂಡರು ಹಾಗೂ ತಮ್ಮನ್ನು ಗುರುತಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮೀನಾಕ್ಷಿ ಮಾಧವ್, ಪ್ರಧಾನ ಕಾರ್ಯದರ್ಶಿಯರಾದ ಪುಷ್ಪ ಅಂಚನ್ , ಕುಂದಾಪುರ ಮಹಿಳಾ ಕಾಂಗ್ರೆಸ್ಸಿನ ಪದಾಧಿಕಾರಿಗಳಾದ ಜ್ಯೋತಿ ಪುತ್ರನ್ ವಾಣಿ ಆರ್ ಶೆಟ್ಟಿ, ಶೋಭ ಸಚ್ಚಿದಾನಂದ,ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ಗುಲಾಬಿಯಮ್ಮ, ಸವಿತಾ ಆನಗಳ್ಳಿ , ಗೀತಾ ಆನಗಳ್ಳಿ , ಜೆಸಿಂತ ಡಿಮೊಲ್ಲೊ, ಸೌಮ್ಯ ಮೊಗವೀರ ಹಾಗೂ ಕಾರ್ಯಕರ್ತರಾದ ಹೇಮ ಹೆಗ್ಡೆ ,ಯಶೋಧ ಆಚಾರ್ತಿ, ಚಂದ್ರಾವತಿ ಶೆಟ್ಟಿ, ಭಾರತಿ ,ವಿಜಯ ಮುತ್ತು ,ಪುಷ್ಪ ,ಲೀಲಾ ಭಾರತಿ ವಿ ಪಿ , ಲೀಲಾವತಿ ಶೆಟ್ಟಿ, ಸುಮಿತ್ರ ಬಾಯಿ, ಗಿರಿಜಾ ಶಂಕರ್ , ಮೀನಾಕ್ಷಿ, ಲಲಿತಾ, ಕಮಲ, ವೀಣಾ ಎನ್ ರಾವ್ ,ಸುಶೀಲಾ, ಸುವರ್ಣ ಭಾರತಿ ದೇವಾಡಿಗ, ಪಾರ್ವತಿ ಕಾಳವರ, ಸಾವಿತ್ರಿ, ಆಶಾ ನಾಗರಾಜ್, ಅಶೋಕ್ ಸುವರ್ಣ ಅಭಿಜಿತ್ ಪೂಜಾರಿ ಸುನಿಲ್ ಪೂಜಾರಿ,ಜೋಸೆಫ್ ರೆಬೆಲ್ಲೊ, ಶಶಿ ಬಳ್ಕೂರು ಉಪಸ್ಥಿತರಿದ್ದರು.
ಶ್ರೀಮತಿ ಮೂಕಾಂಬಿಕಾ ಪ್ರಾರ್ಥನೆ ನೆರವೇರಿಸಿದರು. ಮಹಿಳಾ ಬ್ಲಾಕ್ ಅಧ್ಯಕ್ಷೆ ಶ್ರೀಮತಿ ದೇವಕಿ ಸಣ್ಣಯ್ಯ ಸ್ವಾಗತಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಶ್ರೀಮತಿ ಆಶಾ ಕರ್ವಾಲ್ಲೊ ನಿರೂಪಿಸಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಸುಮನ ಬಿದ್ಕಲ್ ಕಟ್ಟೆ ವಂದಿಸಿದರು.





