

ಕುಂದಾಪುರ: ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕುಂದಾಪುರ, ಇದರ ವಾರ್ಷಿಕ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಕೂಡ ಮಾಡುವ 2024-25ನೇ ವರ್ಷದ ಸಾಧನ ಪ್ರಶಸ್ತಿ ಲಭಿಸಿದೆ.
ಆ.30ರಂದು ಮಂಗಳೂರಿನಲ್ಲಿ ಎಸ್.ಸಿ.ಡಿ.ಸಿಸಿ ಬ್ಯಾಂಕಿನ ಸಭಾಭವನದಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಖ್ಯಾಂಕಿನ 111ನೇ ವಾರ್ಷಿಕ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಮ್ ಎನ್.ರಾಜೇಂದ್ರ ಕುಮಾರ್ ಅವರು ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜೋನ್ಸನ್. ಡಿಅಲ್ಮೇಡಾ ಮತ್ತು ಮುಖ್ಯ ಕಾರ್ಯಸಿರ್ವಹಣಾಧಿಕಾರಿ ಮೇಬಲ್ ಡಿಅಲ್ಮೇಡಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

