St Aloysius Gonzaga School Wins Overall Championship at National-Level Fest


ಮಂಗಳೂರು ನಗರದ ಸಂತ ಅಲೋಶಿಸ್ ಗೊನ್ಝಾಗ ಶಾಲೆಯು ರಾಷ್ಟ್ರೀಯ ಮಟ್ಟದ ಪಿಯು ವಿದ್ಯಾರ್ಥಿಗಳ ಉತ್ಸವದಲ್ಲಿ ಸಮಗ್ರ ಚಾಂಪಿಯನ್ ಶಿಪ್ ಗೆದ್ದು ಸಂಸ್ಥೆಗೆ ಕೀರ್ತಿಯನ್ನು ತಂದು ಕೊಟ್ಟಿದೆ. ಈ ಕಾರ್ಯಕ್ರಮವನ್ನು 2೦25ರ ಆಗಸ್ಟ್ 26 ರಂದು ಸಂತ ಅಲೋಶಿಯಸ್ ( ಡಿಮ್ಡ್ ಟು ಬಿ ಯೂನಿವರ್ಸಿಟಿ) ಆಯೋಜಿಸಿತ್ತು.
ಈ ಮಹಾ ಉತ್ಸವದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳ 64 ಕಾಲೇಜುಗಳನ್ನು ಪ್ರತಿನಿಧಿಸಿದ 2200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 36 ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಈ ಕಠಿಣ ಸ್ಪರ್ಧೆಯ ನಡುವೆ ಗೊನ್ಝಾಗೈಟ್ಸ್ ತಮ್ಮ ಆಸಾಧಾರಣ ಪ್ರತಿಭೆ, ಸೃಜನಶೀಲತೆ ಮತ್ತು ಕ್ರಿಯಾತ್ಮಕತೆಯನ್ನು ತೋರಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಶಾಲೆಯ ಪ್ರಾಂಶುಪಾಲರಾದ ಫಾ. ರೋಹನ್ ಡಿ ಅಲ್ಮೆಡಾ ಎಸ್ ಜೆ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಶ್ರಮವನ್ನು ಶ್ಲಾಘಿಸಿ ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಶಾಲೆಯ ಹಿರಿಮೆಯನ್ನು ಹೆಚ್ಚಿಸಲು ಕಾರಣಿಕರ್ತರಾದ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.
St Aloysius Gonzaga School Wins Overall Championship at National-Level Fest
St Aloysius Gonzaga School, Mangaluru, has brought laurels to the institution by winning the Overall Championship at the National-Level Fest for Pre-University students, hosted by St Aloysius (Deemed to be University) on August 26, 2025.
The mega event witnessed participation from over 2,200 students representing 64 colleges across Karnataka and neighbouring states in 36 academic and cultural competitions. Amidst this tough competition, the Gonzagaites displayed exceptional talent, creativity, and teamwork to secure the coveted title.
Principal Fr Rohan D’Almeida SJ congratulated the students and staff, applauding their dedication and excellence that enabled the school to shine at such a prestigious platform.

