

ಕುಂದಾಪುರ, ಅ.24: ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 34 ನೇ ವಾರ್ಷಿಕ ಸಾಮಾನ್ಯ ಸಭೆಯು ಕೋಟೇಶ್ವರದ ಸಹನಾ ಕನ್ ವೆನ್ಶನ್ ಸೆಂಟರ್ ಸಭಾಂಗಣದಲ್ಲಿ ಭಾನುವಾರ (ಅ. 24 ರಂದು) ನಡೆಯಿತು. ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ ಅಲ್ಮೇಡಾ ಅಧ್ಯಕ್ಷತೆ ವಹಿಸಿ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದರು.
ಸಭೆಯ ಅಧ್ಯಕ್ಶತೆ ವಹಿಸಿದ್ದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜೊನ್ಸನ್ ಡಿಆಲ್ಮೇಡಾ ಮಾತನಾಡಿ ‘ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ತನ್ನ 34ನೇ ವರ್ಷದ ಯಶಸ್ವೀ ಪಯಣವನ್ನು ಪೂರೈಸುತ್ತಿರುವ ಸಮಯದಲ್ಲಿ ನಮ್ಮ ಸಂಘವು ರೂ.190 ಕೋಟಿಗೂ ಮೀರಿದ ಶ್ರೇಷ್ಠ ಸಾಧನೆಗಳತ್ತ ಪಯಣ ಮಾಡಿದೆ. ಈ ಅವಧಿಯಲ್ಲಿ ಒಟ್ಟು ವ್ಯವಹಾರ ರೂ.1000 ಕೋಟಿಯನ್ನು ಮೀರಿದ್ದು ಈ ಆರ್ಥಿಕ ವರ್ಷದಲ್ಲಿ ರೂ. 4.13 ಕೋಟಿ ಲಾಭ ಗಳಿಸಿರುವುದು ಎಲ್ಲರ ಒಟ್ಟು ಗೂಡಿದ ಶ್ರಮದ ಫಲವಾಗಿದೆ. ಸೊಸೈಟಿಯು ಕುಂದಾಪುರದ ಹ್ರದಯ ಭಾಗದಲ್ಲಿ 44 ಸೆಂಟ್ಸ್ ಜಾಗವನ್ನು ಖರೀದಿಸುತ್ತದೆ” ಎಂದು ತಿಳಿಸುತ್ತಾ “ನಮ್ಮ ಸಂಸ್ಥೆಗೆ ಕೇವಲ ಲಾಭವನ್ನು ಗಳಿಸುವ ಉದ್ದೇಶ ಆಗಿರದೆ ಅಸಕ್ತರಿಗೆ ಸಹಾಯ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವಂತಹ ಸಾಮಾಜಿಕ ಕಳಕಳಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಈ ಸೊಸೈಟಿಯಿಂದ ಉನ್ನತ ಶಿಕ್ಷಣಕ್ಕೆ, ಉದ್ಯೋಗ ಮಾಡುವರಿಗೆ, ವಾಹನಗಳನ್ನು ಖರೀದಿಸುವರಿಗೆ, ಮನೆಕಟ್ಟಲು ಇನ್ನಿತರ ಯೋಜನೆಗಳಿಗೆ ಸಾಲ,ನೀಡುತ್ತೆ. ಇದರಿಂದ ಹಲವರ ಅಭಿವ್ರದ್ದಿಗೆ ಕಾರಣವಾಗಿದೆ, ಸೊಸೈಟಿ ಕೂಡ ಅಭಿವ್ರದ್ದಿಯತ್ತ ದಾಪು ಗಾಲು ಹಾಕುತ್ತ ಇದೆ. ಇದಕ್ಕೆಲ್ಲ ಕಾರಣ, ಸದಸ್ಯರು, ಸಿಬಂದಿ ವರ್ಗ ಮತ್ತು ನಿರ್ದೇಶಕರು ಕಾರಣಿಕರ್ತರಾಗಿದ್ದಾರೆ.“ ಎಂದು ಹೇಳಿದರು.
ಸೊಸೈಟಿಯ ಆಧ್ಯಾತ್ಮಿಕ ನಿರ್ದೇಶಕರಾದ ಕುಂದಾಪುರ ರೋಜರಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಅವರು ಆಶೀರ್ವಚನ ಮಾಡಿ ವಿದ್ಯಾರ್ಥಿ ವೇತನ ಪಡೆದ ಸೊಸೈಟಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಂಚಿದರು.
ಸೊಸೈಟಿಯ ನಿರ್ದೇಶಕರಾದ ನಿವ್ರತ್ತ ಡಿ ವೈ ಎಸ್ ಪಿ ವಲೈಂಟನ್ ಡಿಸೋಜಾ ‘ಆನ್ ಲೈನ್ ವಂಚನೆಯಲ್ಲಿ ಜಾಗರುಕರಾಗಿರಬೇಕು, ಸುಳ್ಳು ಸುದ್ದಿ ನಂಬಬಾರದು, ಅಪಪ್ರಚಾರ ಮಾಡಬಾರದು ಎಂದು ತೀಳಿ ಹೇಳಿದರು.
ಎಸ್.ಎಸ್.ಎಲ್.ಸಿ., ದ್ವೀತಿಯ ಪಿಯುಸಿ, ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ಮೆಡಿಕಲ್ ಮಾಡಿ, 50% ಅಂಕಗಳನ್ನು ಪಡೆದ ಸದಸ್ಯರ ಮಕ್ಕಳಿಗೆ , ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ವಿದ್ಯಾರ್ಥಿ ವೇತನ ಪಡೆದವರ ಹೆಸರುಗಳನ್ನು ನಿರ್ದೇಶಕಿ ಶಾಂತಿ ಆರ್.ಕರ್ವಾಲ್ಲೊ ವಾಚಿಸಿದರು.
ವೇದಿಕೆಯಲ್ಲಿ, ವಿನೋದ್ ಕ್ರಾಸ್ಟೊ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಡಯಾನಾ ಡಿ ಅಲ್ಮೇಡಾ, ಶಾಂತಿ ಡಾಯಾಸ್, ವಿಲ್ಸನ್ ಡಿಸೋಜಾ, ಸಂತೋಷ್ ಓಝೊವಲ್ಡ್ ಡಿ ಸಿಲ್ವಾ, ಟೆರೆನ್ಸ್ ಸುವಾರಿಸ್, ಡೆರಿಕ್ ಡಿಸೋಜಾ, ರೋವನ್ ಡಿಕೋಸ್ತಾ, ಲಿಪ್ಡನ್ ಒಲಿವೇರಾ ಉಪಸ್ಥಿತರಿದ್ದರು.
ಸೊಸೈಟಿಯ ಮುಖ್ಯಕಾರ್ಯ ನಿರ್ವಹಣ ಅಧಿಕಾರಿ ಮೇಬಲ್ ಡಿ ಆಲ್ಮೇಡಾ ಸದಸ್ಯರ ಅಭಿಪ್ರಾಯಗಳನ್ನು ಅನಾವರಣ ಮಾಡಿದರು, ಅಧ್ಯಕ್ಷರು ಉತ್ತರ ನೀಡಿದರು. ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊ ವಂದಿಸಿದರು. ನಿರ್ದೇಶಕ ಮೈಕಲ್ ಪಿಂಟೊ, ನಿರೂಪಿಸಿದರು.









































































