Bunny Movement Investiture Ceremony held at St Aloysius Gonzaga School


ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಕಿಂಡರ್ ಗಾರ್ಡನ್ ಮಕ್ಕಳಿಗಾಗಿ ಬನ್ನಿ ದೀಕ್ಷಾ ಪ್ರಧಾನ ಸಮಾರಂಭವು a.21 ರಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಸೀ ಸ್ಕೌಟ್ ಕೇಂದ್ರ ಕಚೇರಿಯ ಆಯುಕ್ತರಾದ ಶ್ರೀ ರಾಹುಲ್ ತೋನ್ಸೆ ಗಣೇಶ್ ಅವರು ಬನ್ನಿ ಘಟಕವನ್ನು ಉದ್ಘಾಟಿಸಿ, ಭವಿಷ್ಯದಲ್ಲಿ ಕಬ್ಸ್ ಗಳಾಗಿ ಮತ್ತು ಬುಲ್ಬುಲ್ಗಳಾಗಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿ ಅಲ್ಮೇಡ ಎಸ್.ಜೆ ಅವರು ಮಾತನಾಡಿ, ” ದೇವರ ಮೇಲಿನ ಪ್ರೀತಿ, ಪ್ರಕೃತಿಯ ಮೇಲಿನ ಕಾಳಜಿ, ಸೃಜನಶೀಲ ಕಲಿಕೆ ಹಾಗೂ ಜೊತೆಗೂಡಿ ಆಡುತ ಕಲಿಯೋಣ” ಎಂಬ ಬನ್ನಿ ಚಟುವಟಿಕೆಯ ನಾಲ್ಕು ಅಂಶಗಳ ಮಹತ್ವದ ಬಗ್ಗೆ ತಿಳಿ ಹೇಳಿದರು ಹಾಗೂ ಬನ್ನಿ ಆಂದೋಲನದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲೆ ಶ್ರೀಮತಿ ಅಪರ್ಣ ಸುರೇಶ್ ಹಾಗೂ ಶಾಲಾ ಕಬ್ ಮಾಸ್ಟರ್ ಶ್ರೀಮತಿ ಶಶಿಕಲ, ಗೈಡ್ ಕ್ಯಾಪ್ಟನ್ ಶ್ರೀಮತಿ ಆಗ್ನೆಸ್ ಸಲ್ಡಾನ ಉಪಸ್ಥಿತರಿದ್ದರು. ಶ್ರೀಮತಿ ಚರಿತ ಕೆ.ಆರ್ ದಿನದ ಮಹತ್ವದ ಬಗ್ಗೆ ತಿಳಿಸಿದರು. ಶ್ರೀಮತಿ ಪೆಟ್ರಿಶಿಯಾ ಎಸ್. ಆರ್. ಡಿಸೋಜ ಸ್ವಾಗತಿಸಿ, ಶ್ರೀಮತಿ ಕ್ಲಾರಾ ಮರಿಯಾ ಧನ್ಯವಾದವನ್ನಿತ್ತರು. ಶ್ರೀಮತಿ ಮಿಶಲ್ ಕ್ಲಾರಾ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.
Bunny Movement Investiture Ceremony held at St Aloysius Gonzaga School

The investiture ceremony of the Bunny Movement for Kindergartners was held on 21 August 2025 at St Aloysius Gonzaga School, marking a joyful and energetic milestone for the youngest members of the school community. Dr Rahul Tonse Ganesh, District Headquarters Commissioner of Sea Scout inaugurated the ceremony by lighting the lamp along with the other dignitaries, Principal Fr Rohan D’Almeida and Vice-principal Ms Aparna Suresh and teacher representatives. In his inspiring address, Dr Tonse highlighted about the personal hygiene, respect to teachers and in future to be cub and bulbul masters. The Principal, Fr D’Almeida, highlighted about bunny 4 sign posters that is Love for God, Love for nature, Creative activities and learning to play together. A total of 99 young bunnies proudly received their bunny aprons, symbolizing their official induction into the movement. The Principal administered the Bunny Oath. The smart bunnies saluted the dignitaries, this was followed by a vibrant mass drill, showcasing the enthusiasm and coordination of the students. The event was a lively and memorable celebration, with significant contributions from faculty members Ms Patricia Dsouza, Ms Charitha K R, Ms Clara Maria., and Ms Mishal Crasta, whose efforts ensured the smooth execution of the ceremony. The cub-master Ms Shashikala and guides captain Ms Agnes Saldanha were present.

















