

ಕುಂದಾಪುರ, ಅ,20. ಇಂದು ಸಂಜೆ ಹೊತ್ತಿಗೆ ಕಾಳವರ ಆಸೋಡು, ಕಾಯಿ ಫ್ಯಾಕ್ಟರಿ ಸಮೀಪದ ರಸ್ತೆ ಸೇರುವಲ್ಲಿ ಹುಲಿ ನಡೆದಾಡಿದ ಕುರುಹುಗಳು ಕಾಣ ಸಿಕ್ಕಿವೆ. ಈ ಹೆಜ್ಜೆಗಳು ಒದ್ದೆ ಮಣ್ಣಿನಲ್ಲಿ ಕಾಣ ಸಿಕ್ಕಿವೆ. ಆಸೋಡಿನ ಜನರು ಜಾಗರುಕರಾಬೇಕು, ಅಸೋಡು ಮಾರ್ಗವಾಗಿ ಸಂಚರಿಸುವವರ ನಾಗರಿಕರು, ಜಾಗರೂಕರಾಗಿ ಹೋಗಬೇಕಾಗಿ ವಿನಂತಿಯನ್ನು ಹುಲಿ ಹೆಜ್ಜೆಗಳನ್ನು ಕಂಡವರು ಎಚ್ಚರಿಸಿದ್ದಾರೆ.ಈ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಲುಪಿಸಲಾಗಿದೆ, ಎಂದು ಕುರುಹು ಕಂಡ ಈ ಜಾಗದ ಧನಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಜಾಗದ ಧನಿಗಳ ಒಂದು ಕರು ಘಾಯಗೊಂಡು ಸತ್ತಿತು. ಇದನ್ನು ಅರಣ್ಯದಳದವರು ಬಂದು ಪ್ರರೀಕ್ಷೆ ನಡೆಸಿ ಅರಣ್ಯ ಅಧಿಕಾರಿಗಳಿಗೆ ವರದಿ ನೀಡಿದ್ದರು, ಎಂದು ಈ ಜಾಗದ ಧನಿಗಳು ತಿಳಿಸಿದ್ದಾರೆ.



