

ತಲ್ಲೂರು ; 2025ರ ಆಗಸ್ಟ್ 15 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ದೇವಾಲಯದಲ್ಲಿ “ಗಾಯನ್ ಸೊಭಾನ್” ಎಂಬ ಗಾಯನ ಸ್ಪರ್ಧೆಯನ್ನು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲ ವಯೋಮಾನದವರಿಗಾಗಿ ಆಯೋಜಿಸಲಾಯಿತು. ಚರ್ಚಿನ ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ದೇಶಾಭಿಮಾನವನ್ನು ವ್ಯಕ್ತಪಡಿಸುವ ದೇಶಭಕ್ತಿ ಗೀತೆ ಹಾಡಲಾಯಿತು.ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜಾ ಅವರು ಸ್ವಾಗತಿಸಿ ತೀರ್ಪುಗಾರರಾದ ಶ್ರೀ ಡಾಲ್ಫಿ ಮಾಸ್ಕರೇನಾಸ್ – ಕೊಂಕಣಿ ಭಾಷೆಯ ಪ್ರಸಿದ್ಧ ಸಂಗೀತಗಾರ ಮತ್ತು ಶ್ರೀ ಅಶ್ವಿನ್ ಡಿ’ಕೋಸ್ಟಾ – ಪ್ರಸಿದ್ಧ ಕೊಂಕಣಿ ಗಾಯಕ ಹಾಗೂ ಚಿತ್ರನಟ ಇವರನ್ನು ಪರಿಚಯಿಸಿದರು.









