

ಕೋಲಾರ:ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೋಲಾರ ಜಿಲ್ಲಾ ಕಚೇರಿ ವ್ಯಾಪ್ತಿಯ , ತಾಲ್ಲೂಕು ಕಚೇರಿ, ವಸತಿ ಶಾಲೆ, ಮೌಲಾನಾ ಆಜಾದ್ ಮಾದರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಬಹುತೇಕ ಹುದ್ದೆಗಳು ಇನ್ನೂ ಖಾಲಿ ಇರುವ ದೃಶ್ಯ ಸ್ಪಷ್ಟವಾಗಿದೆ.
ಜಿಲ್ಲೆಯಲ್ಲಿ ಒಟ್ಟು 86 ಖಾಯಂ ಹುದ್ದೆಗಳು ಮಂಜೂರಾಗಿದ್ದು, ಇದರ ಪೈಕಿ ಕೇವಲ 28 ಹುದ್ದೆಗಳು ಮಾತ್ರ ಭರ್ತಿಯಾಗಿವೆ, ಉಳಿದ 58 ಹುದ್ದೆಗಳು ಖಾಲಿಯಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
ವಿಭಾಗವಾರು ಹುದ್ದೆಗಳ ವಿವರ ಹೀಗಿದೆ:
ಜಿಲ್ಲಾ ಅಧಿಕಾರಿಗಳು: ಮಂಜೂರು – 1, ಭರ್ತಿ – 1
ಪ್ರಾಂಶುಪಾಲರು: ಮಂಜೂರು – 3, ಭರ್ತಿ – 2, ಖಾಲಿ – 1
ಮುಖ್ಯೋಪಾಧ್ಯಾಯರು: ಮಂಜೂರು – 5, ಭರ್ತಿ – 2, ಖಾಲಿ – 3
ಕಚೇರಿ ಅಧೀಕ್ಷಕರು: ಮಂಜೂರು – 1, ಭರ್ತಿ – 0, ಖಾಲಿ 1,
ಲೆಕ್ಕಾ ಅಧೀಕ್ಷಕರು: ಮಂಜೂರು – 1, ಭರ್ತಿ – 0, ಖಾಲಿ 1,
ತಾಲೂಕು ವಿಸ್ತರಣಾಧಿಕಾರಿಗಳು: ಮಂಜೂರು – 2, ಭರ್ತಿ 0 , ಖಾಲಿ – 2
ಪ್ರಥಮ ದರ್ಜೆ ಸಹಾಯಕರು: ಮಂಜೂರು – 1, ಭರ್ತಿ – 1
ಖಾಲಿ 0,
ನಿಲಯಪಾಲಕರು: ಮಂಜೂರು – 8, ಭರ್ತಿ – 2, ಖಾಲಿ – 6
ದ್ವಿತೀಯ ದರ್ಜೆ ಸಹಾಯಕರು: ಮಂಜೂರು – 2, ಭರ್ತಿ – 1, ಖಾಲಿ – 1
ಕನ್ನಡ ಶಿಕ್ಷಕರು: ಮಂಜೂರು – 8, ಭರ್ತಿ – 3, ಖಾಲಿ – 5
ಆಂಗ್ಲ ಶಿಕ್ಷಕರು: ಮಂಜೂರು – 8, ಭರ್ತಿ – 0, ಖಾಲಿ – 8
ಉರ್ದು ಶಿಕ್ಷಕರು: ಮಂಜೂರು – 8, ಭರ್ತಿ – 1, ಖಾಲಿ – 7
ಹಿಂದಿ ಶಿಕ್ಷಕರು: ಮಂಜೂರು – 2, ಭರ್ತಿ – 1, ಖಾಲಿ – 1
ಗಣಿತ ಶಿಕ್ಷಕರು: ಮಂಜೂರು – 8, ಭರ್ತಿ – 4, ಖಾಲಿ – 4
ವಿಜ್ಞಾನ ಶಿಕ್ಷಕರು: ಮಂಜೂರು – 8, ಭರ್ತಿ – 1, ಖಾಲಿ – 7
ಸಮಾಜ ವಿಜ್ಞಾನ ಶಿಕ್ಷಕರು: ಮಂಜೂರು – 8, ಭರ್ತಿ – 5, ಖಾಲಿ – 3
ದೈಹಿಕ ಶಿಕ್ಷಕರು: ಮಂಜೂರು – 2, ಭರ್ತಿ – 2
ಖಾಲಿ 0,
ಗಣಕಯಂತ್ರ ಶಿಕ್ಷಕರು: ಮಂಜೂರು – 2, ಭರ್ತಿ – 1, ಖಾಲಿ – 1
ಕ್ರಾಪ್ಟ್ ಶಿಕ್ಷಕರು: ಮಂಜೂರು – 2, ಭರ್ತಿ – 0, ಖಾಲಿ – 2
ಮಹಿಳಾ ಶುಶ್ರೂಷಕಿ: ಮಂಜೂರು – 2, ಭರ್ತಿ – 0, ಖಾಲಿ – 2
ವಸತಿ ನಿಲಯಪಾಲಕರು: ಮಂಜೂರು – 2, ಭರ್ತಿ – 0, ಖಾಲಿ – 2
ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರು: ಮಂಜೂರು – 2, ಭರ್ತಿ – 1, ಖಾಲಿ – 1
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಶಿಕ್ಷಣ ಹಾಗೂ ವಸತಿ ವ್ಯವಸ್ಥೆಗಳಿಗೆ ಗಂಭೀರ ಹಿನ್ನಡೆ ಉಂಟಾಗುತ್ತಿದೆ. ಅಧ್ಯಾಪಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಹಕ್ಕಿಗೆ ಧಕ್ಕೆ ಉಂಟಾಗುತ್ತಿದ್ದು, ನಿರ್ವಹಣಾ ಸಿಬ್ಬಂದಿಯ ಕೊರತೆಯೂ ಕಾರ್ಯಕ್ಷಮತೆಗೆ ತೊಂದರೆ ತಂದಿದೆ.
ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಪೋಷಕರು ಹಾಗೂ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

