

ಕೋಟ: ಕರ್ನಾಟಕ ಪ್ರಾಂತೀಯ ಕ್ರೈಸ್ತ ಯುವಜನ ಸಮಾವೇಶದ ಅಂಗವಾಗಿ ಪ್ರತಿ ಇಗರ್ಜಿಗಳಿಗೆ ಭೇಟಿ ನೀಡುವ ಪ್ರವಾಸದಲ್ಲಿರುವ ಪವಿತ್ರ ಶಿಲುಬೆಯು ಅಗಸ್ಟ್ 1ರಂದು ಕೋಟ ಸಂತ ಜೋಸೆಫರ ಇಗರ್ಜಿಗೆ ಆಗಮಿಸಿತು. ಕಟ್ಕೆರೆ ಕಾರ್ಮೆಲ್ ಆಶ್ರಮದಿಂದ ಅಲ್ಲಿನ ನಿಯೋಗವು ಶಿಲುಬೆಯನ್ನು ಕೋಟಕ್ಕೆ ಕರೆತಂದಿತು. ಕೋಟ ಐ. ಸಿ.ವೈ. ಎಮ್ ಅಧ್ಯಕ್ಶರಾದ ಶಾವ್ನ್ ಫೆರ್ನಾಂಡಿಸ್ ಅವರು ಪವಿತ್ರ ಶಿಲುಬೆಯನ್ನು ಸ್ವೀಕರಿಸಿದರು. ಸಮಸ್ತ ಕ್ರೈಸ್ತ ಭಾಂದವರು ಶಿಲುಬೆಯನ್ನು ಸ್ವಾಗತಿಸಲು ನೆರವೇರಿದರು. ನಂತರ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಶಿಲುಬೆಯ ಆರಾಧನೆ ನಡೆಯಿತು. ಗಾಯನ ಮಂಡಳಿಯು ಭಕ್ತಿ ಗೀತೆ, ಭಜನೆಗಳನ್ನು ಹಾಡಿದರು.
ಕೋಟ ಚರ್ಚಿನ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಇವರ ಮುಂದಾಳತ್ವದಲ್ಲಿ ಯುವಜನರು ಪ್ರಾರ್ಥನಾ ವಿಧಿಗಳನ್ನು ನಡೆಸಲಾಯಿತು. ಯುವಜನರ ಜೊತೆ ಹಿರಿಯವರು ಉಪಸ್ಥಿತರಿದ್ದರು.




























