

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಉರ್ದು ಮತ್ತು ಇಂಗ್ಲಿಷ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ಸುಮಾರು 200 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳು ಹಾಗೂ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಎಂ.ಪಿ ಫ್ರೂಟ್ಸ್ ಮಾವು ಮಂಡಿ ಮಾಲೀಕ ಅಬ್ದುಲ್ ಮಜೀದ್ ಉರ್ಫ್ ಅಫ್ಸರ್ ಪಾಷಾ ಅವರು ಮಾತನಾಡುತ್ತಾ, ಈ ಶಾಲೆಯನ್ನು ‘ಮೌಲಾನಾ ಆಜಾದ್ ಪಬ್ಲಿಕ್ ಶಾಲೆ’ಯಾಗಿ ಉನ್ನತೀಕರಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು, ಎಂಬಂತೆ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಇಲಿಯಾಜ್ ಪಾಷಾ ಅವರು, ಈ ಶಾಲೆಯ ಸಮೀಪವಿರುವ ಉರ್ದು ಬಾಲಕರ ಶಾಲೆಯಲ್ಲಿ ದಾಖಲಾತಿ ಕಡಿಮೆಯಿರುವುದರಿಂದ, ಆ ಕಟ್ಟಡದಲ್ಲಿಯೇ ‘ಮೌಲಾನಾ ಆಜಾದ್ ಪಬ್ಲಿಕ್ ಶಾಲೆ’ಯ ಸ್ಥಾಪನೆಯಾದರೆ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಇಮ್ತಿಯಾಜ್ ಪಾಷಾ, ಖಜಾಂಚಿ ಎಟಿಎಸ್ ರಿಜ್ವಾನ್, ಸದಸ್ಯ ಅಲ್ಲಾ ಬಕ್ಷ್, ಕಾರ್ಯದರ್ಶಿ ಅಕ್ರಂ ಪಾಷಾ, ಎಸ್ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾ ಖಾನ್ , ಸದಸ್ಯ ಬಕರುತ್ ಉಲ್ಲಾ, ಮುಖ್ಯಶಿಕ್ಷಕ ಮಹಮ್ಮದ್ ಸಾದಿಕ್, ಶಿಕ್ಷಕರು ರಿಹಾನ ಖಾನಂ, ಭಾರತಮ್ಮ, ನೂರ್ ಉನ್ನಿಸಾ, ಹಾಗೂ ಅತಿಥಿ ಶಿಕ್ಷಕರು ನಸ್ರತ್ ಅಮ್ಮಜಾನ್ ಹಾಗೂ ಆಯಿಷಾ ತಾಜ್ ಉಪಸ್ಥಿತರಿದ್ದರು.
ಈ ಸೇವಾಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶಾಲಾ ಮಕ್ಕಳಿಗೆ ಈ ಸಹಾಯದ ಮೂಲಕ ಮುಂದಿನ ಓದುಗೆ ಪ್ರೋತ್ಸಾಹ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

